Advertisement

Rajasthan Election: ಆರನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್, ಜೋಶಿಗೆ ಕೈ ತಪ್ಪಿದ ಟಿಕೆಟ್

12:37 PM Nov 05, 2023 | Team Udayavani |

ರಾಜಸ್ಥಾನ: ಮುಂಬರುವ ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಆರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Advertisement

ಶನಿವಾರ ಬಿಡುಗಡೆ ಮಾಡಿದ ಪಟ್ಟಿಯಲ್ಲಿ 22 ಅಭ್ಯರ್ಥಿಗಳ ಹೆಸರಿದೆ. ಜೈಪುರದ ಹವಾ ಮಹಲ್ ಕ್ಷೇತ್ರದಿಂದ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ಖಾತೆ ಸಚಿವ ಮಹೇಶ್ ಜೋಶಿ ಅವರಿಗೆ ಈ ಭಾರಿ ಪಕ್ಷ ಟಿಕೆಟ್ ನಿರಾಕರಿಸಿದೆ. ಜೋಶಿ ಬದಲಿಗೆ ಜೈಪುರ ನಗರ ಘಟಕದ ಅಧ್ಯಕ್ಷ ಆರ್ ಆರ್ ತಿವಾರಿ ಅವರನ್ನು ಕಣಕ್ಕಿಳಿಸಿದೆ.

ಇದರೊಂದಿಗೆ, ಕಾಂಗ್ರೆಸ್ ಇದುವರೆಗೆ ಒಟ್ಟು 200 ಸ್ಥಾನಗಳಲ್ಲಿ 178 ಸ್ಥಾನಗಳಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ, ಆದರೆ ಇದರಲ್ಲಿ ಒಂದು ಸ್ಥಾನವನ್ನು – ಭರತ್‌ಪುರ – ರಾಷ್ಟ್ರೀಯ ಲೋಕದಳಕ್ಕೆ (RLD) ಬಿಟ್ಟುಕೊಟ್ಟಿದೆ.

ಇದನ್ನೂ ಓದಿ: Video: ನ.19 ರಂದು ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ… ಖಲಿಸ್ತಾನಿ ಭಯೋತ್ಪಾದಕನ ಬೆದರಿಕೆ

Advertisement

Udayavani is now on Telegram. Click here to join our channel and stay updated with the latest news.

Next