Advertisement

ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

06:39 PM Jun 12, 2021 | Team Udayavani |

ಚಾಮರಾಜನಗರ: ಕೊರೊನಾ ಸಂಕಷ್ಟದಲ್ಲೂಕೇಂದ್ರ ಸರ್ಕಾರ ಇಂಧನ ದರವನ್ನು ಪದೇಪದೆ ಏರಿಸುತ್ತಿರುವುದನ್ನು ಖಂಡಿಸಿ ಜಿಲ್ಲಾಕಾಂಗ್ರೆಸ್‌ನಿಂದ ನಗರದಲ್ಲಿ ಶುಕ್ರವಾರ ಪ್ರತಿಭಟಿಸಲಾಯಿತು.

Advertisement

ಜಿಲ್ಲಾ ಕಾಂಗ್ರೆಸ್‌ ಕಚೇರಿಯಿಂದ ಕೆಪಿಸಿಸಿಕಾರ್ಯಾಧ್ಯಕ್ಷ ಆರ್‌. ಧ್ರುವನಾರಾಯಣ,ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿ, ಶಾಸಕಸಿ. ಪುಟ್ಟರಂಗಶೆಟ್ಟಿ, ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ ನೇತೃತ್ವದಲ್ಲಿ ಸತ್ಯಮಂಗಲ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ವರೆಗೆ ಪಾದಯಾತ್ರೆ ಹೊರಟು ಬಂಕ್‌ ಮುಂದೆ ಕೆಲ ಕಾಲಪ್ರತಿಭಟನೆ ನಡೆಸಿ, ಘೋಷಣೆ ಕೂಗಿದರು.

ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್‌.ಧ್ರುವನಾರಾಯಣ ಮಾತನಾಡಿ, ಪ್ರಧಾನಿನರೇಂದ್ರ ಮೋದಿ ಇಂಧನ ದರವನ್ನು ಏರಿಸುವ ಮೂಲಕ ಬಡವರು ಹಾಗು ಮಧ್ಯಮವರ್ಗದ ವಿರೋಧಿ ನೀತಿ ಅನುಸರಿಸುತ್ತಿದೆ.ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರಕಡಿಮೆ ಇದ್ದರೂ ಅದಕ್ಕೆ ತಕ್ಕಂತೆ ಪೆಟ್ರೋಲ್‌ಹಾಗು ಡೀಸೆಲ್‌ ದರವನ್ನು ಪರಿಷ್ಕರಿಸುವ ಬದಲು ಮನಸೋ ಇಚ್ಛೆಯಂತೆ ದರ ಏರಿಸುತಿದ್ದಾರೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪಿ.ಮರಿಸ್ವಾಮಿಮಾತನಾಡಿ, ಆರ್ಥಿಕ ಸೂಚ್ಯಂಕ ಮೋದಿ ಆಡಳಿತದಲ್ಲಿ ಪಾತಾಳ ಸೇರಿದೆ. ಇಂಧನ ದರ ಏರಿಕೆಪರಿಣಾಮ ಅಗತ್ಯ ವಸ್ತುಗಳ ಬೆಲೆ, ಬಸ್‌ ದರಏರಿಕೆ ಸೇರಿದಂತೆ ವಿವಿಧ ಸಾಮಗ್ರಿಗಳು ಏರಿಕೆಯಾಗಿದೆ. ಇಂಥ ಜನ ವಿರೋಧ ಸರ್ಕಾರವನ್ನುಕಿತ್ತೋಗೆಯುವರೆಗೆ ಕಾಂಗ್ರೆಸ್‌ ನಿರಂತವಾಗಿಹೋರಾಟ ಮಾಡಲಿದೆ ಎಂದರು.

ಪ್ರತಿಭಟನೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ,ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ಜಿಲ್ಲಾಉಪಾಧ್ಯಕ್ಷ ಬಿ.ಕೆ. ರವಿಕುಮಾರ್‌, ಪ್ರಧಾನಕಾರ್ಯದರ್ಶಿಗಳಾದ ಚಿಕ್ಕಮಹದೇವ್‌, ಆರ್‌.ಮಹದೇವ್‌, ಬ್ಲಾಕ್‌ ಅಧ್ಯಕ್ಷರಾದ ಎ.ಎಸ್‌.ಗುರುಸ್ವಾಮಿ, ಮಹಮದ್‌ ಅಸYರ್‌, ಎಪಿಎಂಸಿಅಧ್ಯಕ್ಷ ನಾಗೇಂದ್ರ, ಜಿಲ್ಲಾ ವಕ್ತಾರ ಕೆರೆಹಳ್ಳಿನವೀನ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ಅಜೀಜ್‌, ಮುಖಂಡರಾದ ಸದಾಶಿವಮೂರ್ತಿ,ರಮೇಶ್‌, ಶಿವಮೂರ್ತಿ, ಸುಹೇಲ್‌ ಆಲಿಖಾನ್‌, ತಾ.ಪಂ. ಸದಸ್ಯ ಕುಮಾರ್‌ ನಾಯಕ್‌,ಮಾಜಿ ಸದಸ್ಯ ಎಸ್‌. ರಾಜು, ಎ.ಎಚ್‌.ಎನ್‌ಖಾನ್‌, ಕಿರಗಸೂರು ತೌಸೀಫ್ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next