Advertisement

ಬೆಲೆ ಏರಿಕೆ ವಿರುದ್ದ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

09:36 AM Apr 10, 2022 | Team Udayavani |

ಕಲಬುರಗಿ: ಹಿಂದೆಂದೂ ಕಂಡರಿಯದ ನಿಟ್ಟಿನಲ್ಲಿ ಬೆಲೆ ಏರಿಕೆ ಆಗಿರುವುದರಿಂದ ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್‌ ಪ್ರತಿಭಟನೆ ನಡೆಸಿತು.

Advertisement

ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌, ದಿನಸಿ ಬೆಲೆ ಏರಿಕೆ ಆಗಿರುವುದನ್ನು ಖಂಡಿಸಿ ಅಡುಗೆ ಸಿಲಿಂಡರ್‌ನೊಂದಿಗೆ ನಗರದ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್‌ ಪ್ರತಿಭಟನೆ ನಡೆಸಲಾಯಿತು.

ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರಂತರ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಕಿಸೆಗೆ ಕೈ ಹಾಕಿ, ಬಡವರನ್ನು ಸಂಕಷ್ಟಕ್ಕೆ ದೂಡುತ್ತಿದ್ದು, “ಬಹುತ್‌ ಹೋಗಯಿ ಮೆಹಂಗಾಯಿ ಕೀ ಮಾರ್‌, ಅಬ್‌ ಕಿ ಬಾರ್‌ ಮೋದಿ ಸರ್ಕಾರ್‌’ ಎಂದು ಅಧಿಕಾರಕ್ಕೆ ಬಂದವರು ದೇಶವನ್ನು ಕೊಳ್ಳೆ ಹೊಡೆಯುತ್ತಿರುವ ಪಿಕ್‌ ಪಾಕೆಟ್‌ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ಕಾಂಗ್ರೆಸ್‌ ಯುವ ಘಟಕದ ರಾಜ್ಯ ಅಧ್ಯಕ್ಷ ಮಹ್ಮದ್‌ ನಲಪಾಡ್‌ ಆಕ್ರೋಶ ವ್ಯಕ್ತಪಡಿಸಿದರು.

ಅಡುಗೆ ಅನಿಲ, ಪೆಟ್ರೋಲ್‌, ಡಿಸೇಲ್‌, ದಿನಸಿ ಅಂಗಡಿಗಳ ಬೆಲೆ ಏರಿಕೆ ಖಂಡಿಸಿ ಹಮ್ಮಿಕೊಂಡ ಪ್ರತಿಭಟನೆ ಉದ್ದೇಶಿಸಿ ಮಾತನಾಡಿ, 2014ರಿಂದ ಇದುವರೆಗೆ ಪ್ರಧಾನಿ, ಮಂತ್ರಿಗಳು ಸೇರಿ ಯಾರೊಬ್ಬರೂ ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿಲ್ಲ. ಬೆಲೆ ಏರಿಕೆ ವಿರೋಧಿಸಿ ಈಗಾಗಲೇ ರಾಜ್ಯಾದ್ಯಂತ ಯುವ ಕಾಂಗ್ರೆಸ್‌ನಿಂದ ಪ್ರತಿ ಜಿಲ್ಲೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ ಎಂದರು.

ಬೆಲೆ ಏರಿಕೆಯಿಂದ ಜನಸಾಮಾನ್ಯರು ಬದುಕು ನಡೆಸುವುದೇ ದುಸ್ತರವಾಗಿದೆ. ಸರ್ಕಾರ ಮಾತ್ರ ಕಣ್ಣು, ಕವಿ ಇಲ್ಲದಂತೆ ಸಾಗುತ್ತಿದೆ. ಜನರ ಪಾಕೆಟ್‌ನಿಂದ ದುಡ್ಡು ಕೀಳುತ್ತಿದೆ. ರಾಜ್ಯದ ಎಲ್ಲ ಯುವಪಡೆ ಇಂತ ಸುಳ್ಳು ಸರ್ಕಾರವನ್ನು ಕಿತ್ತೂಗೆಯಬೇಕು. ಆದ್ದರಿಂದ ಜಾಗೃತಿ ಮೂಡಿಸಲಾಗುತ್ತಿದೆ. ಹಲಾಲ್‌, ಹಿಜಾಬ್‌, ಅಜಾನ್‌ ನಿನ್ನೆ ಮೊನ್ನೆಯಿಂದ ಆರಂಭವಾಗಿಲ್ಲ. ಹಲವಾರು ವರ್ಷದಿಂದ ನಡೆದುಕೊಂಡು ಬರುತ್ತಿವೆ. ಆದರೆ ಬಿಜೆಪಿಯವರು ಇಂಥ ವಿಷಯಗಳಿಗೆ ಪೋಷಣೆ ಕೊಟ್ಟು ಸಮಾಜವನ್ನು ಹಾಳು ಮಾಡುತ್ತಿದ್ದಾರೆ. ಬೆಲೆ ಏರಿಕೆ ವಿರುದ್ಧ ಜನಾಕ್ರೋಶ ತಪ್ಪಿಸಲು ಬಿಜೆಪಿ ಕೋಮುಭಾವನೆ ಸೃಷ್ಟಿಯ ಅಡ್ಡ ಮಾರ್ಗ ಹಿಡಿದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

ಕುರಾನ್‌, ಭಗವದ್ಗೀತೆ, ಬೈಬಲ್‌ ಎಲ್ಲವೂ ನಮಗೆ ಸಂವಿಧಾನ. ನಾವೆಲ್ಲರೂ ಭಾರತೀಯರು, ಸಂವಿಧಾನದ ಅಡಿ ಸಾಗುತ್ತೇವೆ. ರಾಜ್ಯದ ಮನೆಮನೆಗೆ ಹೋಗಿ ಸರ್ಕಾರದ ವಿರುದ್ಧ ಜಾಗೃತಿ ಮೂಡಿಸಿ, ಇದನ್ನು ಮೂಲದಿಂದಲೇ ಕಿತ್ತೂಗೆಯುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಮಾಜಿ ಶಾಸಕರಾದ ಅಲ್ಲಮ ಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಪ್ರಮುಖರಾದ ಶಿವಾನಂದ ಪಾಟೀಲ ಮರತೂರ, ವಿಜಯಕುಮಾರ ಜಿ. ರಾಮಕೃಷ್ಣ, ನೀಲಕಂಠರಾವ್‌ ಮೂಲಗೆ, ಕೃಷ್ಣಾ ಕುಲಕರ್ಣಿ, ಜಗನ್ನಾಥ ಗೋದಿ, ಬಾಬುರಾವ ಜಹಾಗಿರದಾರ, ಬಸವರಾಜ ಕೊರಳ್ಳಿ, ಚೇತನ ಗೋನಾಯಕ್‌, ಶಿವಾನಂದ ಹೊನಗುಂಟಿಕರ್‌, ಈರಣ್ಣ ಝಳಕಿ, ಲಿಂಗರಾಜ ತಾರಪೇಲ್‌ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next