Advertisement
ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ನೇತೃತ್ವದಲ್ಲಿ ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿರುವ ಕೇಶವರೆಡ್ಡಿ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ರಾಜ್ಯಸಭೆ ಸದಸ್ಯ ಡಾ| ಸೈಯದ್ ನಾಸೀರ್ ಹುಸೇನ್ ನೇತೃತ್ವದಲ್ಲಿ ಕೌಲ್‌ಬಜಾರ್‌ನ ಮೊದಲನೇ ಗೇಟ್ ಬಳಿಯ ಪೆಟ್ರೋಲ್ ಬಂಕ್ ಮತ್ತು ನಗರದ ಗಡಗಿ ಚನ್ನಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ, ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಯನ್ನು ಖಂಡಿಸಿದರು.
Related Articles
Advertisement
ನಂತರ ಎತ್ತಿನಗಾಡಿಯಲ್ಲಿ ಬಂದು ಪ್ರತಿಭಟನೆ ನಡೆಸಿದ ಗ್ರಾಮೀಣ ಶಾಸಕ ಬಿ. ನಾಗೇಂದ್ರ,ರಾಜ್ಯಸಭೆ ಸದಸ್ಯ ಡಾ| ಸೈಯದ್ ನಾಸೀರ್‌ಹುಸೇನ್ ಮಾತನಾಡಿ, ಪೆಟ್ರೋಲ್, ಡೀಸೆಲ್ ಮಾರಾಟದಮೇಲಿನ ಅಬಕಾರಿ ಸುಂಕ 2013-14ರಲ್ಲಿ 3.45ರೂ. ಹಾಗೂ 9.25 ರೂ. ಇತ್ತು. ಈಗ ಪೆಟ್ರೋಲ್‌ಮಾರಾಟದ ಮೇಲೆ 31.84 ರೂ. ಡೀಸೆಲ್‌ಮಾರಾಟದ ಮೇಲೆ, 32.98 ರೂ. ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರ ಪೆಟ್ರೋಲ್ ಮಾರಾಟದ ಮೇಲೆ ಶೇ. 35, ಡೀಸೆಲ್ ಮಾರಾಟದ ಮೇಲೆ ಶೇ. 24 ತೆರಿಗೆ ವಿಧಿಸುತ್ತಿದೆ. ಅಡುಗೆ ಅನಿಲದ ಸಿಲಿಂಡರ್ ಬೆಲೆ 414 ರೂ.ಗಳಿಂದ 850 ರೂ.ಗಳಿಗೆ ಏರಿಕೆಯಾಗಿದೆ. ಇದು ಲೂಟಿ ಅಲ್ಲದೇ ಮತ್ತೇನು. ಇದೇನಾ ಅಚ್ಛೇ ದಿನ್ ಎಂದು ಪ್ರಶ್ನಿಸಿದರು?
ತೈಲ ಬೆಲೆ, ವಿದ್ಯುತ್ ದರ ಹೆಚ್ಚಳದಿಂದ ಜನಸಾಮಾನ್ಯರ ಬದುಕಿಗೆ ಬೆಂಕಿ ಹಾಕಿದ್ದಾರೆಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಅಸುಂಡಿ ನಾಗರಾಜಗೌಡ, ಎ. ಮಾನಯ್ಯ, ಮುಂಡರಗಿ ನಾಗರಾಜ್, ರಾಂಪ್ರಸಾದ್, ಪಾಲಿಕೆ ಸದಸ್ಯರುಗಳಾದ ವಿವೇಕ್, ಗಾದೆಪ್ಪ, ವೆಂಕಟೇಶ್ ಹೆಗಡೆ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.