Advertisement

ಸುಳ್ಳು ಪ್ರಚಾರ ಪಡೆಯುವ ಬಿಜೆಪಿ ಸರ್ಕಾರ

05:52 PM Jul 08, 2021 | Team Udayavani |

ಬಾಗಲಕೋಟೆ: ಕೊರೊನಾ, ಪ್ರವಾಹ ನಿರ್ವಹಣೆ ಹಾಗೂ ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು, ಸುಳ್ಳು ಹೇಳಿ ಪ್ರಚಾರ ಪಡೆಯುತ್ತಿವೆ. ಸರ್ಕಾರದ ಜನ ವಿರೋಧಿ ನೀತಿಯಿಂದ ಬಡ ಜನರು ತತ್ತರಿಸಿ ಹೋಗಿದ್ದಾರೆ ಎಂದು ಮಾಜಿ ಸಚಿವ, ವಿಧಾನಪರಿಷತ್‌ ಸದಸ್ಯ ಎಚ್‌.ಎಂ. ರೇವಣ್ಣ ಆರೋಪಿಸಿದರು.

Advertisement

ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್‌ ನಿಂದ ಹಮ್ಮಿಕೊಂಡಿದ್ದ ಸೈಕಲ್‌ ಜಾಥಾ ಪ್ರತಿಭಟನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ 2014ರಲ್ಲಿ ದೇಶದಲ್ಲಿ ಬದಲಾವಣೆ ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ನೋಟು ಅಮಾನ್ಯಿಕರಣ, ಅವೈಜ್ಞಾನಿಕ ಜಿಎಸ್‌ಟಿ ಮುಂತಾದ ನೀತಿಯಿಂದ ಪ್ರತಿಯೊಬ್ಬರೂ ರೋಸಿ ಹೋಗಿದ್ದಾರೆ. ಕೊರೊನಾ ವಿಷಯದಲ್ಲಿ ದಿವ್ಯ ನಿರ್ಲಕಷ್ಯ ವಹಿಸಿದ್ದರಿಂದ ಸಾವು ನೋವು ಹೆಚ್ಚಾದವು. ಈ ಕುರಿತು ಎರಡೂ ಸರ್ಕಾರಕ್ಕೆ ಗಂಭೀರತೆಯೇ ಇಲ್ಲ ಎಂದರು.

ಅನುದಾನಕ್ಕೂ ತಾರತಮ್ಯ: ಒಕ್ಕೂಟ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜ್ಯಕ್ಕೂ ಅನುದಾನ ಹಂಚಿಕೆ ಮಾಡಬೇಕಿರುವುದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ, ರಾಜ್ಯಕ್ಕೆ ಬರಬೇಕಾದ ಅನುದಾನ ಪಡೆಯಲು ಸ್ವತಃ ರಾಜ್ಯ ಸರ್ಕಾರವೇ ಕೋರ್ಟ್‌ ಮೆಟ್ಟಿಲೇರಿದೆ. ಇಂತಹ ವ್ಯವಸ್ಥೆ ಎಂದೂ ಬಂದಿರಲಿಲ್ಲ. ರಾಜ್ಯದ ಪಾಲಿನ ಹಣ ಬಿಡುಗಡೆ ಮಾಡುವಲ್ಲಿ ಕೇಂದ್ರ ಸ್ಪಂದಿಸುತ್ತಿಲ್ಲ. ಇತ್ತ ರಾಜ್ಯ ಸರ್ಕಾರವೂ ಘೋಷಣೆ ಮಾಡಿದ ಯಾವುದೇ ಸಹಾಯಧನ ಜನರಿಗೆ ತಲುಪಿಲ್ಲ ಎಂದರು.

ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೋಟ್ಯಾಂತರ ಖರ್ಚು ಮಾಡಿದೆ ಎಂದು ಹೇಳಿಕೊಂಡಿದೆ. ಇದುವರೆಗೂ ಲೆಕ್ಕ ಕೊಟ್ಟಿಲ್ಲ. ರಾಜ್ಯ ಸರ್ಕಾರವೂ 35 ಸಾವಿರ ಕೋಟಿ ನೀಡಿದ್ದಾಗಿ ಹೇಳಿದ್ದು, ರೈತರು, ಕೂಲಿ ಕಾರ್ಮಿಕರು ಸಹಿತ ಬಡ ಜನರಿಗೆ ತಲುಪಿಲ್ಲ ಎಂದು ಆರೋಪಿಸಿದರು.

ಸಹಾಯಹಸ್ತ ಅಭಿಯಾನ: ಕೊರೊನಾ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ದಿವ್ಯ ನಿರ್ಲಕ್ಷéದಿಂದ ಸಾವು-ನೋವು ಸಂಭವಿಸಿವೆ. ಈ ಕುರಿತು ರಾಜ್ಯದ ಪ್ರತಿಯೊಂದು ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯಕರ್ತರ ಮೂಲಕ ಸಹಾಯಹಸ್ತ ಸರ್ವೆ ಅಭಿಯಾನ ನಡೆಯುತ್ತಿದೆ. ಈ ವೇಳೆ ಸಂಕಷ್ಟ ಎದುರಿಸಿದ ಕುಟುಂಬಗಳಿಗೆ ಪಕ್ಷದಿಂದ ಕೈಲಾದ ನೆರವು ಕೂಡ ನೀಡಲಾಗುತ್ತಿದೆ ಎಂದು ಹೇಳಿದರು.

Advertisement

ಮಾಜಿ ಶಾಸಕ ಜೆ.ಟಿ. ಪಾಟೀಲ, ಕೆಪಿಸಿಸಿ ಕಾರ್ಯದರ್ಶಿ ಪಾರಸಮಲ್ಲ ಜೈನ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಸ್‌ .ಜಿ. ನಂಜಯ್ಯನಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹದ್ಲಿ, ಓಬಿಸಿ ಘಟಕದ ಜಿಲ್ಲಾ ಅಧ್ಯಕ್ಷ ಕಾಶಿನಾಥ ಹುಡೇದ, ಪ್ರಮುಖರಾದ ಎಂ.ಎಲ್‌. ಶಾಂತಗೇರಿ, ಬಂಗಾರೇಶ ಹಿರೇಮಠ, ನಾಗರಾಜ ಮುಂತಾದವರು ಸುದ್ದಿಗೋಷ್ಠಿಯಲ್ಲಿದ್ದರು.

ಇದಕ್ಕೂ ಮುಂಚೆ ನಡೆದ ಸೈಕಲ್‌ ಜಾಥಾ ಅನ್ನು ನಗರದ ಕಾಂಗ್ರೆಸ್‌ ಕಚೇರಿಯಿಂದ ಆರಂಭಿಸಿ, ಬಸವೇಶ್ವರ ವೃತ್ತದ ವರೆಗೆ ನಡೆಸಲಾಯಿತು. ಮಾಜಿ ಸಚಿವರಾದ ಎಚ್‌.ಎಂ. ರೇವಣ್ಣ, ಎಚ್‌. ವೈ. ಮೇಟಿ, ಜಿ.ಪಂ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಎಸ್‌.ಸಿ ಘಟಕದ ಜಿಲ್ಲಾ ಅಧ್ಯಕ್ಷ ರಾಜು ಮನ್ನಿಕೇರಿ, ಹನುಮಂತ ರಾಕುಂಪಿ, ಚಂದ್ರಶೇಖರ ರಾಠೊಡ, ಗೋವಿಂದರಾಜ ಬಳ್ಳಾರಿ, ಹಾಜಿಸಾಬ ದಂಡಿನ, ಎಸ್‌.ಎನ್‌. ರಾಂಪುರ, ಮುತ್ತು ಜೋಳದ, ಎಸ್‌.ಎನ್‌. ಗೋಡಿ ಮುಂತಾದವರ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next