ಕೆ.ಆರ್.ನಗರ: ನೆರೆ ಪ್ರವಾಹ ವೀಕ್ಷಣೆಗಾಗಿ ಕೊಡಗು ಜಿಲ್ಲೆಗೆ ಭೆಟಿ ನೀಡಿದ್ದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಗುರುವಾರ ಮೊಟ್ಟೆ ಎಸೆದು ಕಪ್ಪು ಬಟ್ಟೆ ಪ್ರದರ್ಶಿಸಿ ಅಗೌರವ ತೋರಿರುವ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರ ನಡೆ ಖಂಡಿಸಿ ಮತ್ತು ಸರ್ಕಾರದ ಭದ್ರತಾ ವೈಫಲ್ಯದ ವಿರುದ್ಧ ಸಾಲಿಗ್ರಾಮ ಮತ್ತು ಕೆ.ಆರ್.ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಪುರಸಭೆ ವೃತ್ತದಲ್ಲಿ ಎರಡೂ ಬ್ಲಾಕ್ ಗಳ ಪದಾಧಿಕಾರಿಗಳು, ವಿವಿಧ ಚುನಾಯಿತ ಜನಪ್ರತಿನಿಧಿಗಳು, ಮುಖಂಡರು, ಕಾರ್ಯ ಕರ್ತರು ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಡಿ.ರವಿಶಂಕರ್ ನೇತೃತ್ವದಲ್ಲಿ ಸಮಾವೇಶಗೊಂಡು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಬಿಜೆಪಿ ಕಾರ್ಯಕರ್ತರ ಗೂಂಡಾ ವರ್ತನೆಯನ್ನು ಖಂಡಿಸಿದರು. ಆ ನಂತರ ಮಾನವ ಸರಪಳಿ ನಿರ್ಮಿಸಿ ಕೆಲಹೊತ್ತು ರಸ್ತೆತಡೆ ನಡೆಸಿದ ಪ್ರತಿಭಟಿಸಿದರು.
ಇದರಿಂದ ರಸ್ತೆಯುದ್ದಕ್ಕೂ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಕೆಲಹೊತ್ತು ಪಟ್ಟಣದ ವಾಣಿ ವಿಲಾಸ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿತು. ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್ ಮಾತನಾಡಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರ ಜನ ಪ್ರಿಯತೆಯನ್ನು ಸಹಿಸದ ಆರ್‌ಎಸ್‌ಎಸ್ ಮತ್ತು ಕೆಲ ಹಿಂದೂಪರ ಸಂಘಟನೆಗಳ ಮುಖಂಡರ ಕುತಂತ್ರದಿಂದ ಈ ಅಮಾನವೀಯ ಕೃತ್ಯ ನಡೆದಿದ್ದು, ಇದನ್ನು ತಡೆಯುವಲ್ಲಿ ವಿಫಲರಾಗಿರುವ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯನವರ ಮೇಲೆ ನಡೆಸಿರುವ ಘಟನೆ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದ್ದು, ಸರ್ಕಾರ ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಜತೆಗೆ ಪೊಲೀಸರ ವೈಫಲ್ಯವೇ ಘಟನೆಗೆ ಪ್ರಮುಖ ಕಾರಣವಾಗಿದ್ದು, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇನ್ನಿತರ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.
ಪುರಸಭೆ ಅಧ್ಯಕ್ಷ ಕೋಳಿಪ್ರಕಾಶ್, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್‌ಸ್ವಾಮಿ, ಸದಸ್ಯರಾದ ಶಿವಕುಮಾರ್, ಸೈಯದ್‌ಸಿದ್ದಿಕ್, ಜಾವೀದ್‌ಪಾಷಾ, ಮಾಜಿ ಅಧ್ಯಕ್ಷರಾದ ತಮ್ಮನಾ ಯಕ, ಗೀತಾಮಹೇಶ್, ಜಿಪಂ ಮಾಜಿ ಸದಸ್ಯ ರಾದ ಮಾರ್ಚಹಳ್ಳಿಶಿವರಾಮು, ಜಿ.ಆರ್. ರಾಮೇ ಗೌಡ, ತಾಪಂ ಮಾಜಿ ಉಪಾಧ್ಯಕ್ಷ ಉಮೇಶ್, ಎಪಿಎಂಸಿ ಮಾಜಿ ನಿರ್ದೇಶಕರಾದ ಎಚ್.ಪಿ.ಪ್ರಶಾಂತ್‌ಜೈನ್, ಎಚ್.ಎಚ್ .ನಾಗೇಂದ್ರ, ಟಿಎಪಿಸಿಎಂಎಸ್ ನಿರ್ದೇಶಕ ಎಸ್. ಸಿದ್ದೇಗೌಡ, ಕಾಂಗ್ರೆಸ್ ಮುಖಂಡರಾದ ಮಹೇಶ್, ಸಿ.ಪಿ. ರಮೇಶ್‌ಕುಮಾರ್, ಜೆ.ಶಿವಣ್ಣ, ಹೊಸೂರುಕಲ್ಲ ಹಳ್ಳಿಶ್ರೀನಿವಾಸ್, ರಾಮಾಚಾರಿ, ಮಹದೇವ, ನಂದೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದ ಯಶಂಕರ್, ಎಂ.ಎಸ್.ಮಹದೇವ, ತಾಲೂಕು ವಕ್ತಾರ ಸೈಯದ್‌ಜಾಬೀರ್, ಸಾಲಿಗ್ರಾಮ ತಾ. ಕಾನೂನು ಸಲಹಾ ಸಮಿತಿ ಅಧ್ಯಕ್ಷ ವಕೀಲ ಬಿ.ಎಂ. ಮೂರ್ತಿ, ಸಾಮಾಜಿಕ ಜಾಲತಾಣದ ಪದಾಧಿಕಾರಿಗಳಾದ ಸರಿತಾಜವರಪ್ಪ, ಪುನೀತ್, ಹರಂಬಳ್ಳಿನವೀನ್‌ಕುಮಾರ, ಬೆನಕದ್ದರು.