ಪಣಜಿ: ಒಂದು ಕಾಲದಲ್ಲಿ ಸ್ವರ್ಗವೆಂದೇ ಬಿಂಬಿತವಾಗಿದ್ದ ಗೋವಾ ಈಗ ಕ್ರಿಮಿನಲ್ ಲೋಕವಾಗುತ್ತಿದೆ. ಡ್ರಗ್ಸ್, ವೇಶ್ಯಾವಾಟಿಕೆ, ಕೊಲೆ, ಕಪ್ಪು ಹಣ ಮತ್ತು ಜೂಜಾಟ ಎಲ್ಲವೂ ಗೋವಾದಲ್ಲಿ ತೊಡಗಿದೆ. 2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವಿಶ್ವದಲ್ಲಿ ಗೋವಾದ ಹೆಸರು ಹಾಳಾಗಿದೆ ಎಂದು ಕಾಂಗ್ರೆಸ್ ನಾಯಕರು ಮಡಗಾಂವ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಾ ಪ್ರಹಾರ ನಡೆಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ದಕ್ಷಿಣ ಗೋವಾ ಕಾಂಗ್ರೆಸ್ ಅಧ್ಯಕ್ಷ ಸಾವಿಯೋ ಡಿ ಸಿಲ್ವಾ, ಮಹಿಳಾ ಅಧ್ಯಕ್ಷೆ ಬಿನಾ ನಾಯಕ್, ಕುಡ್ತರಿ ನಾಯಕ ಮೊರೆನ್ ರಿಬೇರೊ ಮತ್ತು ಕ್ಯಾಪ್ಟನ್ ವಿರಿಯಾಟೊ ಫೆನಾರ್ಂಡಿಸ್ ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಅವರು ಇತರರಿಗೆ ಪ್ರತಿಕ್ರಿಯಿಸದೆ ಸ್ವತಃ ವಿರೋಧ ಪಕ್ಷಗಳು ಎತ್ತುವ ಅಥವಾ ಟೀಕಿಸುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅಪರಾಧಿಗಳು ಗೋವಾಕ್ಕೆ ಬಂದು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಗೋವಾದಲ್ಲಿ ಕ್ರಿಮಿನಲ್‍ಗಳೇ ಇಲ್ಲ ಎಂದಾದರೆ ಜಿಲ್ಲಾಧಿಕಾರಿಗಳಿಬ್ಬರೂ ಬಾಡಿಗೆದಾರರ ಸಮೀಕ್ಷೆ ಹಾಗೂ ವಿಚಾರಣೆಗೆ ಆದೇಶ ನೀಡಿದ್ದು ಏಕೆ? ರಾಜ್ಯದಲ್ಲಿ ಮಹಿಳೆಯರಿಗೆ ಅಭದ್ರತೆ ಕಾಡುತ್ತಿದೆ ಎಂದು ದಕ್ಷಿಣ ಗೋವಾ ಕಾಂಗ್ರೇಸ್ ಅಧ್ಯಕ್ಷ ಸಾವಿಯೊ ಡಿಸಿಲ್ವಾ ಆರೋಪಿಸಿದರು.
ಕಾಂಗ್ರೆಸ್ ಪಕ್ಷವು ಗೋವಾದ ಸೌಂದರ್ಯ ಮತ್ತು ಪ್ರಕೃತಿಯನ್ನು ಕಾಪಾಡಲು ಪ್ರಯತ್ನಿಸಿತು. ಕಾನೂನು ಸುವ್ಯವಸ್ಥೆ ಕಾಪಾಡಲಾಗಿತ್ತು. ಆದರೆ ಬಿಜೆಪಿ ಅಧಿಕಾರಾವಧಿಲ್ಲಿ ಗೋವಾದಲ್ಲಿ ಅಪರಾಧಿಗಳಿಗೆ ರಾತ್ರಿಯೇ ಸರಿಯಾದ ಸಮಯ. ರಾತ್ರಿ ವೇಳೆ ಹೆಣ್ಣು ಮಕ್ಕಳು, ಮಹಿಳೆಯರು ಓಡಾಡಲು ಪರದಾಡುವಂತಾಗಿದೆ.ಅಪರಾಧ ಪ್ರಮಾಣವೂ ಗಣನೀಯವಾಗಿ ಹೆಚ್ಚಿದೆ ಎಂದು ಬೀನಾ ನಾಯಕ್ ಟೀಕಿಸಿದರು. ಸಿದ್ಧಿ ನಾಯ್ಕ್ ನಿಗೂಢ ಸಾವಿನ ನಂತರ ಏನಾಯಿತು ಎಂಬುದನ್ನು ಸರ್ಕಾರ ವಿವರಿಸಬೇಕು ಎಂದು ಮೊರೆನ್ ರಿಬೇರೊ ಸರ್ಕಾರಕ್ಕೆ ಸವಾಲು ಹಾಕಿದರು.
ಇದನ್ನೂ ಓದಿ: ಗಾಲಿ ರೆಡ್ಡಿ ಕೆಆರ್ ಪಿಪಿಯಿಂದ ಏಳು ಅಭ್ಯರ್ಥಿಗಳ ಹೆಸರು ಅಧಿಕೃತ