Advertisement

ಬಜೆಟ್‌ ವಿರೋಧಿಸಿ ಕಾಂಗ್ರೆಸ್‌ ಪೋಸ್ಟರ್‌ ಅಭಿಯಾನ

11:04 PM Feb 18, 2023 | Team Udayavani |

ಬೆಂಗಳೂರು: ಬಿಜೆಪಿಯೇ ಭರವಸೆ ಎಂಬ ಬಿಜೆಪಿ ಘೋಷಣೆಗೆ ಪ್ರತಿಯಾಗಿ ಕಾಂಗ್ರೆಸ್‌ “ಸಾಕಪ್ಪ ಸಾಕು ಬುರುಡೆ ಭರವಸೆ’ ಅಭಿಯಾನ ಆರಂಭಿಸಿದೆ.

Advertisement

ಬಿಜೆಪಿಯೇ ಭರವಸೆ ಪೋಸ್ಟರ್‌ ಪಕ್ಕ 40 ಪರ್ಸೆಂಟ್‌ ಸರ್ಕಾರ ಮುಂದಿನ ತಿಂಗಳು ಮುಕ್ತಾಯ ಎಂದು ಬರೆದು ಸಾಕಪ್ಪ ಸಾಕು ಬುರುಡೆ ಭರವಸೆ ಫೋಸ್ಟರ್‌ ಅಂಟಿಸಲಾಗುತ್ತಿದೆ.

ಶನಿವಾರ ಬೆಂಗಳೂರು ಹಾಗೂ ಮೈಸೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಈ ಅಭಿಯಾನ ಆರಂಭಿಸಿದರು, ಇದು ರಾಜ್ಯಾದ್ಯಂತ ಮುಂದುವರಿಯಲಿದೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಮನೋಹರ್‌ ಹಾಗೂ ಇತರೆ ಕಾರ್ಯಕರ್ತರು ಗಾಂಧಿನಗರ, ರೇಸ್‌ಕೋರ್ಸ್‌ ರಸ್ತೆ, ಮಲ್ಲೇಶ್ವರ, ರಾಜಾಜಿನಗರ, ಶಿವಾಜಿನಗರ ವ್ಯಾಪ್ತಿಯಲ್ಲಿ ಅಭಿಯಾನ ನಡೆಸಿದರು.

ಈ ವೇಳೆ ಕೆಲವೆಡೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿಯೂ ನಡೆಯಿತು.

Advertisement

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸರ್ಕಾರದ ಬಜೆಟ್‌ ವಿರುದ್ಧ “ರಾಜ್ಯದ ಜನರ ಕಿವಿಗೆ ಹೂವು’ಅಭಿಯಾನ ಕಾಂಗ್ರೆಸ್‌ ಆರಂಭಿಸಿದೆ.

ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಹಾಗೂ ಕಳೆದ ವರ್ಷ ಬಜೆಟ್‌ನಲ್ಲಿ ನೀಡಿದ ಆಶ್ವಾಸನೆ ಈಡೇರಿಸದ ಬಗ್ಗೆ ಜನರ ಕಿವಿಯಲ್ಲಿ ಹೂವು ಇಟ್ಟಿರುವ ಪೋಸ್ಟರ್‌ ಸಿದ್ಧಪಡಿಸಿ ಹರಿಬಿಡಲಾಗಿದೆ.

ಸಾಲದ ಹಣ ಹೋಗಿದ್ದೆಲ್ಲಿ- ಕಾಂಗ್ರೆಸ್‌ ಪ್ರಶ್ನೆ
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಮಾಡಿರುವ ಸಾಲದ ಬಗ್ಗೆ ಕರ್ನಾಟಕ ಕಾಂಗ್ರೆಸ್‌ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಹಿಂದಿನ ಎಲ್ಲ ಸರ್ಕಾರಗಳ ಅವಧಿಯ ಸಾಲವನ್ನೂ ಸೇರಿಸಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ರಾಜ್ಯದ ಮೇಲಿದ್ದ ಒಟ್ಟು ಸಾಲ 2.42 ಲಕ್ಷ ಕೋಟಿ ರೂ. ಕೇವಲ ಮೂರೂವರೆ ವರ್ಷಗಳಲ್ಲಿ ಬಿಜೆಪಿ ಸರ್ಕಾರ ಮಾಡಿದ ಸಾಲ 2,54,760 ಲಕ್ಷ ಕೋಟಿ ರೂ. ಎಂದು ಕಾಂಗ್ರೆಸ್‌ ತಿಳಿಸಿದೆ.

ಇಷ್ಟು ದೊಡ್ಡ ಮೊತ್ತದ ಸಾಲ ಮಾಡಿಯೂ ಸಹ ಯಾವುದೇ ಅಭಿವೃದ್ಧಿ ಯೋಜನೆಗಳಿಲ್ಲ. ಸಾಲದ ಹಣ ಹೋಗಿದ್ದೆಲ್ಲಿಗೆ ಎಂದು ಪ್ರಶ್ನಿಸಿದೆ.

 

Advertisement

Udayavani is now on Telegram. Click here to join our channel and stay updated with the latest news.

Next