Advertisement

ಕಾಂಗ್ರೆಸ್‌ ಓಲೈಕೆ ರಾಜಕಾರಣ: ಮೋನಪ್ಪ ಭಂಡಾರಿ ಆರೋಪ

07:30 AM Mar 08, 2018 | |

ಮಂಗಳೂರು: ಬೆಂಗಳೂರಿನ ಸರ್ವಜ್ಞ ನಗರದ ಇಸ್ಲಾಮಿಕ್‌ ಅರೇಬಿಕ್‌ ಶಾಲೆಗೆ 20 ಕೋಟಿ ರೂ. ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಒಂದು ವರ್ಗದ ಜನರನ್ನು ಮಾತ್ರ ಓಲೈಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಮೋನಪ್ಪ ಭಂಡಾರಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಮಕ್ಕಳಿಗೆ ನೀಡಲಾಗುತ್ತಿದ್ದ ಬಿಸಿಯೂಟಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಸಮರ್ಥಿಸಿದ ಮುಖ್ಯಮಂತ್ರಿಗಳಿಗೆ ಮುಸ್ಲಿಂ ಸಂಸ್ಥೆಗಳ ಶಾಲೆಗೆ ಅನುದಾನ ನೀಡಲು ಕಾನೂನು ಅಡ್ಡಬರುವುದಿಲ್ಲವೇ ಎಂದು ಪ್ರಶ್ನಿಸಿದರು. ವೀರಶೈವ-ಲಿಂಗಾಯತ ಧರ್ಮ ಬೇರೆ ಬೇರೆ ಹೇಳಿ ಕಾಂಗ್ರೆಸ್‌ ಜಾತಿ-ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದೆ. ವ್ಯಕ್ತಿಯೋರ್ವ ಲೋಕಾಯುಕ್ತ ನ್ಯಾ| ವಿಶ್ವನಾಥ ಶೆಟ್ಟಿ ಅವರಿಗೆ ಹಾಡಹಗಲೇ ಚೂರಿಯಿಂದ ಇರಿದಿದ್ದು ಗಮನಿಸಿದರೆ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದ್ದು ಕಾಣುತ್ತದೆ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್‌ ಬಾವಾ ನೇತೃತ್ವದಲ್ಲಿ ನಡೆಯುವ ಸೌಹಾರ್ದ ಯಾತ್ರೆಯಿಂದ ಅವರ ಕ್ಷೇತ್ರದಲ್ಲಿ ಶಾಂತಿ ಕೆದಡಿದೆ ಎಂದು ಒಪ್ಪಿಕೊಂಡಂತಾಯಿತು. ದೀಪಕ್‌ ರಾವ್‌ ಕೊಲೆಯಾದಾಗ ಸೌಹಾರ್ದ ಯಾತ್ರೆ ನಡೆಸಬೇಕು ಎಂದು ಅನಿಸಿಲ್ಲವೇ? ಮೊದಿನ್‌ ಬಾವಾ ಅವರು ಸೀರೆ, ಪುಸ್ತಕಗಳನ್ನು ಉಚಿತವಾಗಿ ಹಂಚುವ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡಿದ್ದಾರೆ. ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಹೇಳಿದರು.

ಮಂಗಳೂರು ವಿ.ವಿ.ಯ ಅತಿಥಿ ಉಪನ್ಯಾಸಕರುಗಳಿಗೆ ಕೆಲ ತಿಂಗಳುಗಳಿಂದ ಸಂಬಳವಾಗಿಲ್ಲ. ಫೆಬ್ರವರಿ ತಿಂಗಳುಗಳ ವರೆಗೆ ರಾಜ್ಯ ಸರಕಾರವು ಒಟ್ಟಾರೆ 3 ಕೋಟಿ 69 ಲಕ್ಷ ರೂ. ಅನುದಾನ ಬಿಡುಗಡೆ ಮಾಡಬೇಕಿದೆ. ಕೂಡಲೇ ಹಣ ಬಿಡುಗಡೆ ಮಾಡಲು ರಾಜ್ಯ ಸರಕಾರವನ್ನು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಜೀತೇಂದ್ರ ಕೊಟ್ಟಾರಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next