Advertisement

Ram Mandir ಉದ್ಘಾಟನೆ ಸಂದರ್ಭ ಕೋಮುಗಲಭೆ ನಡೆಸಲು ಕಾಂಗ್ರೆಸ್ ಪ್ಲಾನ್; ಕೇಂದ್ರ ಸಚಿವೆ ಆರೋಪ

12:30 PM Jan 07, 2024 | Team Udayavani |

ಚಿಕ್ಕಮಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುತ್ತಿರುವ ಸಂದರ್ಭ ಕೋಮು ಗಲಭೆ ನಡೆಸಲು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದರು.

Advertisement

ಜ.7ರ ಭಾನುವಾರ ಚಿಕ್ಕಮಗಳೂರು ನಗರದ ವಿಜಯಪುರದಲ್ಲಿ ಅಯೋಧ್ಯೆ ಶ್ರೀರಾಮ ಕ್ಷೇತ್ರದಿಂದ ಬಂದಿರುವ ಮಂತ್ರಾಕ್ಷತೆ ಮತ್ತು ಕರಪತ್ರವನ್ನು ಮನೆ-ಮನೆಗೆ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಕಾಂಗ್ರೆಸ್ ಮಾನಸಿಕ ಸ್ಥಿತಿ ದೇಶದಲ್ಲಿ ಕೋಮು ಗಲಭೆ ಎಬ್ಬಿಸುತ್ತದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆದಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಭಯೋತ್ಪಾದನೆಗೆ ಸಂಪೂರ್ಣ ಕಡಿವಾಣ ಬಿದ್ದಿದೆ. ದೇಶ ಶಾಂತವಾಗಿದೆ ಎಂದರು.

ಲೋಕಸಭೆ ಚುನಾವಣೆ ವೇಳೆ ಬಿಜೆಪಿಯವರು ಹಿಂದೂ ಕಾರ್ಯಕರ್ತರನ್ನು ಮುಂದೇ ಬಿಟ್ಟು, ವಿದ್ವಾಂಸಕ ಕೃತ್ಯಗಳು ಸೃಷ್ಟಿ ಮಾಡುತ್ತಿದ್ದಾರೆಂಬ ಪೋಸ್ಟರ್ ಶೇರ್ ಮಾಡಿರುವ ಬಿ.ಕೆ.ಹರಿಪ್ರಸಾದ್ ವಿರುದ್ದ ಕಿಡಿಕಾರಿದ ಅವರು, ಮೋದಿ ಅಧಿಕಾರಕ್ಕೆ ಬಂದ ಮೇಲೆ ಭಯೋತ್ಪಾದಕ ಮಾನಸಿಕತೆಯ ಜನಕ್ಕೆ ಭಯ ಹುಟ್ಟಿದೆ. ರಾಮಮಂದಿರ ಉದ್ಘಾಟನೆ ವೇಳೆ ಮತ್ತೊಂದು ಸಲ ಕೋಮು ಗಲಭೆ ಎಬ್ಬಿಸಬೇಕೆಂದು ಕಾಂಗ್ರೆಸ್ ಪ್ಲಾನ್ ಮಾಡುತ್ತಿದೆ. ಅದರ ಒಂದು ಚಿಕ್ಕ ಝಲಕ್ ಹರಿಪ್ರಸಾದ್ ಹೇಳಿರಬಹುದು ಎಂದರು.

ನಮ್ಮ ರಾಮನಿಗೆ ಮಂದಿರ ಆಗಿದೆ. ಈ ಮಾತುಗಳಿಗೆ ಯಾರು ಕಿವಿಗೊಡಬಾರದು, ಎಲ್ಲರೂ ಶಾಂತಿ ಕಾಪಾಡಿಕೊಂಡು ರಾಮನ ಭಜನೆ ಮಾಡಬೇಕೆಂದು ಹೇಳಿದರು.

Advertisement

2017ರಲ್ಲಿ ನಡೆದ ದತ್ತಜಯಂತಿ ಸಂದರ್ಭ ನಡೆದ ಗಲಾಟೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ಸರ್ಕಾರದ ರಾಜಕೀಯ ನೀತಿ ಪಿಎಫ್ಐ ನಂತಹ ದೇಶ ದ್ರೋಹ, ಭಯೋತ್ಪಾದಕರ ಕೇಸ್ ಗಳನ್ನು ಕ್ಯಾಬಿನೆಟ್ ಗೆ ತಂದು ವಾಪಾಸ್ ಪಡೆಯುವುದು ಎಂದ ಅವರು, ದೇಶಭಕ್ತರು ಇದ್ದರೇ, ರಾಮ ಮಂದಿರಕ್ಕಾಗಿ ಹೋರಾಟ ಮಾಡಿದ್ದಾರೆ. ಅವರ ಕೇಸ್ ರೀ ಓಪನ್ ಮಾಡುವುದು ಎಂದು ಹೇಳಿದರು.

ರಾಜ್ಯದಲ್ಲಿ ವಿದ್ವಾಂಸಕ ಕೃತ್ಯ ನಡೆಸುವ ಸಂಚು ನಡೆದಿದ್ದರೂ,  ರಾಜ್ಯ ಸರ್ಕಾರ  ಗಂಭೀರವಾಗಿ ತಗೆದುಕೊಳ್ಳುತ್ತಿಲ್ಲ. ಭಯೋತ್ಪಾದಕರನ್ನು, ದೇಶದ್ರೋಹಿಗಳನ್ನು ರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿದೆ. 2013-17ರ ಸಂದರ್ಭದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅದನ್ನೇ ಮಾಡಿದೆ. 2017ರಲ್ಲಿ ದತ್ತಜಯಂತಿ ಸಂದರ್ಭ ಚಿಕ್ಕಮಗಳೂರು ನಗರದಲ್ಲಿ ಸಿಕ್ಕ ಪೆಟ್ರೋಲ್ ಬಾಂಬ್ ಪ್ರಕರಣ ಮುಚ್ಚಿ ಹಾಕಿದ್ದರಲ್ಲಿ ಆಶ್ಚರ್ಯಪಡಬೇಕಿಲ್ಲ. ಇದು ಕಾಂಗ್ರೆಸ್ ಸ್ವಭಾವ, ಸಿದ್ದರಾಮಯ್ಯನವರ ಸ್ವಭಾವ ಎಂದ ಅವರು, ದೇಶದಲ್ಲಿ ಭಯೋತ್ಪಾದನೆ ಮಟ್ಡಹಾಕಲು ನಮ್ಮ ಹೋರಾಟ ನಿರಂತರವಾಗಿ ನಡೆಯುತ್ತದೆ. ಕಾನೂನಾತ್ಮಕ ಮತ್ತು ರಸ್ತೆಯಲ್ಲಿ ನಿಂತು ಹೋರಾಟ ಮಾಡುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next