Advertisement

ಸುಧಾರಣೆಯ ಸಂಕಲ್ಪ; ಭಾರೀ ಸಾಂಸ್ಥಿಕ ಬದಲಾವಣೆಗೆ ಕಾಂಗ್ರೆಸ್‌ ಸಜ್ಜು

10:44 AM May 14, 2022 | Team Udayavani |

ಉದಯಪುರ: “ಒಂದು ಕುಟುಂಬ, ಒಂದು ಟಿಕೆಟ್‌’, ಬೂತ್‌ ಮತ್ತು ಬ್ಲಾಕ್‌ ನಡುವೆ “ಮಂಡಲ’ ಎಂಬ ಹೊಸ ಸಾಂಸ್ಥಿಕ ಘಟಕ ರಚನೆ, ಜನರ ಮನಸ್ಥಿತಿ ಅರಿ ಯಲು ಸಾರ್ವಜನಿಕ ಒಳನೋಟ ವಿಭಾಗ…

Advertisement

ನಿರಂತರ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ ಈಗ ಪಕ್ಷವನ್ನು ಪುನಃಶ್ಚೇತನಗೊಳಿ ಸುವ ಶಪಥದೊಂದಿಗೆ ಮಹತ್ವದ ಬದಲಾವಣೆ ಗಳಿಗೆ ತೆರೆದುಕೊಳ್ಳಲು ಅಣಿಯಾಗಿದೆ. ರಾಜ ಸ್ಥಾನದ ಉದಯಪುರದಲ್ಲಿ ಶುಕ್ರವಾರದಿಂದ ಆರಂಭವಾಗಿರುವ 3 ದಿನಗಳ ಚಿಂತನ ಶಿಬಿರ ದಲ್ಲಿ ಈ ಕುರಿತು ಚರ್ಚೆ ಆರಂಭಿಸಿದೆ.
ಪಕ್ಷವು ದೊಡ್ಡ ಮಟ್ಟದ ಸಾಂಸ್ಥಿಕ ಪರಿವರ್ತನೆಗೆ ಮುಂದಾಗಿದ್ದು, ಅದರಂತೆ ಇನ್ನು ಮುಂದೆ ಒಂದು ಕುಟುಂಬಕ್ಕೆ ಒಂದೇ ಟಿಕೆಟ್‌ ಸಿಗಲಿದೆ. ಆದರೆ ಅದೇ ಕುಟುಂಬದ ಮತ್ತೂಬ್ಬ ಆಕಾಂಕ್ಷಿ ಪಕ್ಷಕ್ಕಾಗಿ 5 ವರ್ಷ ಕಾಲ ಮಹತ್ವದ ಸೇವೆ ಸಲ್ಲಿಸಿದವರಾಗಿದ್ದರೆ, ಅಂಥವರಿಗೆ ಈ ನಿಯಮದಿಂದ ವಿನಾಯಿತಿ ಸಿಗಲಿದೆ. ಇದರ ಬಗ್ಗೆ ಒಮ್ಮತ ಮೂಡಿದ್ದು, ಚಿಂತನ ಶಿಬಿರದ ಸಮಾರೋಪದಲ್ಲಿ ಹೊಸ ನಿಯಮವನ್ನು ಅಂಗೀಕರಿಸಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌ ಹೇಳಿದ್ದಾರೆ.

ಸುಮಾರು 60 ವರ್ಷಗಳಿಂದಲೂ ಪಕ್ಷದ ಸಂಘಟನೆ ನಿಂತ ನೀರಾಗಿತ್ತು. ನಾವು ಪರಿವರ್ತನೀಯ ಬದಲಾವಣೆಗಳನ್ನು ತಂದಿರಲಿಲ್ಲ. ಈಗ ಬದಲಾವಣೆಯ ಕಾಲ ಬಂದಿದೆ. ಪ್ರಸ್ತುತ ಕಾಂಗ್ರೆಸ್‌ನ ಅತ್ಯಂತ ಸಣ್ಣ ಸಂಘಟನಾತ್ಮಕ ಘಟಕವೆಂದರೆ “ಪೋಲಿಂಗ್‌ ಬೂತ್‌’. ಅದರ ಬಳಿಕ “ಬ್ಲಾಕ್‌’. ಈಗ ನಾವು ಪ್ರತೀ ಘಟಕದ ಬಳಿಕ 3ರಿಂದ 4 ಮಂಡಲ ಸಮಿತಿಯನ್ನು ರಚಿಸಲು ಮತ್ತು ಪ್ರತೀ ಮಂಡಲದ ಬಳಿಕ 15ರಿಂದ 20 ಬೂತ್‌ಗಳನ್ನು ರಚಿಸಲು ನಿರ್ಧರಿಸಿದ್ದೇವೆ ಎಂದೂ ಮಾಕನ್‌ ತಿಳಿಸಿದ್ದಾರೆ. ಜತೆಗೆ, ಪಕ್ಷದ ಎಲ್ಲ ಸಂಘಟನೆಗಳಲ್ಲೂ ಅರ್ಧದಷ್ಟು ಮಂದಿ 50 ವರ್ಷದೊಳಗಿನವರೇ ಇರುವಂತೆ ಕ್ರಮ ಕೈಗೊಳ್ಳಲಿದ್ದೇವೆ ಎಂದೂ ಹೇಳಿದ್ದಾರೆ.

ತುರ್ತು ಸುಧಾರಣೆ ಅಗತ್ಯ ಎಂದ ಸೋನಿಯಾ
ಮೂರು ದಿನಗಳ ಚಿಂತನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, “ಪಕ್ಷದಲ್ಲಿ ತುರ್ತು ಸುಧಾರಣೆಯ ಅಗತ್ಯವಿದೆ’ ಎಂದು ಹೇಳಿದ್ದಾರೆ. “ವಿಶೇಷ ಸಂದರ್ಭಗಳು ವಿಶೇಷ ಕ್ರಮ’ಗಳನ್ನು ಬೇಡುತ್ತವೆ. ಅಂತೆಯೇ ಪಕ್ಷವು ಇನ್ನು ತನ್ನ ಕಾರ್ಯನಿರ್ವಹಣೆಯ ಶೈಲಿಯನ್ನು ಬದಲಿಸಬೇಕಾಗಿದೆ. ನಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆಯನ್ನು ಬದಿಗಿಟ್ಟು, ಪಕ್ಷದ ಅಭಿವೃದ್ಧಿಯತ್ತ ಗಮನ ಹರಿಸಬೇಕಿದೆ. ಪಕ್ಷವು ಎಲ್ಲರಿಗೂ ಸಾಕಷ್ಟನ್ನು ನೀಡಿದೆ. ಈಗ ಆ ಸಾಲವನ್ನು ತೀರಿಸುವ ಸಮಯ ಬಂದಿದೆ. ಸಾಮೂಹಿಕ ಪ್ರಯತ್ನದಿಂದ ಮಾತ್ರವೇ ನಮ್ಮ ಪುನಃಶ್ಚೇತನ ಸಾಧ್ಯ. ಇಂಥ ಯತ್ನವನ್ನು ಮುಂದೂಡಬಾರದು ಎಂದೂ ಸೋನಿಯಾ ಹೇಳಿದ್ದಾರೆ.

“ಮೋದಿ ದೇಶವನ್ನು ಶಾಶ್ವತವಾಗಿ ಧ್ರುವೀಕರಣ ಮಾಡಿ ಹಾಕಿದ್ದಾರೆ. ರಾಜಕೀಯ ಪ್ರತಿಸ್ಪರ್ಧಿಗಳನ್ನು ಬೆದರಿಸ ಲಾಗುತ್ತಿದೆ, ಅಲ್ಪಸಂಖ್ಯಾಕರ ಮೇಲೆ ನಿರಂತರ ದಾಳಿ ನಡೆಯುತ್ತಿದೆ, ಎಂದು ಸೋನಿಯಾ ಆರೋಪಿಸಿದ್ದಾರೆ.

Advertisement

ರೈಲಲ್ಲಿ ಬಂದ ರಾಹುಲ್‌ ಗಾಂಧಿ!
ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಹಿತ ಹಲವು ಮುಖಂಡರು ಶುಕ್ರವಾರ ಉದಯಪುರದ “ನವ ಸಂಕಲ್ಪ ಶಿಬಿರ’ಕ್ಕೆ ರೈಲಿನಲ್ಲಿ ಬಂದಿದ್ದಾರೆ. ಚೇತಕ್‌ ಎಕ್ಸ್‌ಪ್ರೆಸ್‌ನಲ್ಲಿ 12 ಗಂಟೆಗಳ ಪ್ರಯಾಣ ನಡೆಸಿದ ರಾಹುಲ್‌, ಚಿತ್ತೋರ್‌ಗಡ ಸ್ಟೇಷನ್‌ನಲ್ಲಿ ಚಹಾ ಸೇವಿಸಿದರು. ಅಲ್ಲೇ ಇದ್ದ ಸಾರ್ವಜನಿಕರೊಂದಿಗೆ ಮಾತುಕತೆಯನ್ನೂ ನಡೆಸಿದರು.

ಮೊಬೈಲ್‌ಗೆ ನಿರ್ಬಂಧ
ಪಕ್ಷದ ಆಂತರಿಕ ಚರ್ಚೆ, ಸಮಾ ಲೋಚನೆ ವೇಳೆ ಶಿಬಿರಾರ್ಥಿಗಳಿಗೆ ಮೊಬೈಲ್‌ ಫೋನ್‌ ನಿರ್ಬಂಧ ಹೇರ ಲಾಗಿತ್ತು. ಇತ್ತೀಚೆಗೆ ಆಂತರಿಕವಾಗಿ ನಡೆದ ಸಂಭಾಷಣೆಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪ್ರಮುಖ ಸುಧಾರಣ ಕ್ರಮಗಳು
-ಕುಟುಂಬಕ್ಕೆ ಒಂದೇ ಟಿಕೆಟ್‌.
- ಪಕ್ಷದ ಎಲ್ಲ ಸಂಘಟನೆ ಗಳಲ್ಲೂ ಯುವಕರ ಪ್ರಮಾಣ ಕನಿಷ್ಠ ಅರ್ಧದಷ್ಟಿರುವುದು.
- ಬೂತ್‌ ಮತ್ತು ಬ್ಲಾಕ್‌ ಮಟ್ಟದ ನಡುವೆ ಮಂಡಲ ಘಟಕ ಆರಂಭ.
-ಜನರ ಮನಸ್ಥಿತಿ ಅರಿಯಲು ಸಾರ್ವಜನಿಕ ಒಳನೋಟ ವಿಭಾಗ ಆರಂಭ.
- ಸಕ್ರಿಯವಾಗಿ ಇರುವವರನ್ನು ಉತ್ತೇಜಿಸಲು, ಜಡತ್ವ ಪ್ರದರ್ಶಿ ಸುವವರನ್ನು ಕಿತ್ತು ಹಾಕಲು ಆಂತ ರಿಕ ಮೌಲ್ಯಮಾಪನ ಘಟಕ.
- ಪದಾಧಿಕಾರಿಗಳು 5 ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿ ಇರುವಂತಿಲ್ಲ
- ಅದೇ ಹುದ್ದೆಗೆ ಮರು ಆಯ್ಕೆ ಬಯಸುವವರು 3 ವರ್ಷ ಕಾಯಬೇಕು

ನಿಮ್ಮಲ್ಲಿ ಬಂಡವಾಳ ಇಲ್ಲದಿದ್ದರೆ ಪಾಲುದಾರರು ಹತ್ತಿರ ಸುಳಿಯುವುದಿಲ್ಲ. ಹಾಗಾಗಿ, ಕಾಂಗ್ರೆಸ್‌ ಮೊದಲು ತನ್ನ ಸಂಘಟನೆ ಯನ್ನು ಬಲಪಡಿಸಲಿದೆ. ಮೈತ್ರಿ ವಿಚಾರ ಬಗ್ಗೆ ಬಳಿಕ ಚರ್ಚಿಸಲಿದೆ.
– ಮಲ್ಲಿಕಾರ್ಜುನ ಖರ್ಗೆ,
ಕಾಂಗ್ರೆಸ್‌ ಹಿರಿಯ ನಾಯಕ

ರಾಜ್ಯದ ವಿದ್ಯಮಾನ ಚರ್ಚೆ ಸಾಧ್ಯತೆ
ಕಾಂಗ್ರೆಸ್‌ನ ಚಿಂತನ ಮಂಥನ (ನವ ಸಂಕಲ್ಪ) ಶಿಬಿರದ ಕೊನೆಯ ದಿನ ರಾಜ್ಯದ ರಾಜಕೀಯ ವಿದ್ಯಮಾನ ಹಾಗೂ ಮುಂದಿನ ವಿಧಾನಸಭೆ ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಹೈಕಮಾಂಡ್‌ ನಾಯಕರು ರಾಜ್ಯದ ನಾಯಕರ ಜತೆ ಮಾತುಕತೆ ನಡೆಸುವ ಸಾಧ್ಯತೆ ಇದೆ. ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುಜೇì ವಾಲ, ಎಐಸಿಸಿ ಕಾರ್ಯದರ್ಶಿ ಕೆ.ಸಿ. ವೇಣು ಗೋಪಾಲ್‌, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಶಿಬಿರ ಆರಂಭಕ್ಕೂ ಮುನ್ನ ವಿಪಕ್ಷ ನಾಯಕ ಸಿದ್ದ ರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್‌ ಅವರ ಜತೆ ರಾಜ್ಯದ ವಿದ್ಯಮಾನಗಳ ಬಗ್ಗೆ ಚರ್ಚಿಸಿದರು. ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರು, ಲೋಕೋಪಯೋಗಿ ಎಂಜಿನಿಯರ್‌ ನೇಮಕಾತಿ ಪರೀಕ್ಷೆ ಅಕ್ರಮ ಆರೋಪದ ಬಗ್ಗೆಯೂ ಪ್ರಸ್ತಾವವಾಯಿತು ಎನ್ನಲಾಗಿದೆ.

ವಿವಾದ ತಣ್ಣಗಾಗಿಸುವ ಯತ್ನ
ಈ ಮಧ್ಯೆ, ಎಂ.ಬಿ.ಪಾಟೀಲ್‌ ನಿವಾಸಕ್ಕೆ ಸಚಿವ ಅಶ್ವತ್ಥನಾರಾಯಣ ಭೇಟಿ ಹೇಳಿಕೆ ಹಿನ್ನೆಲೆಯಲ್ಲಿ ಎದ್ದಿದ್ದ ವಿವಾದ ತಣ್ಣಗಾಗಿಸಲು ವರಿಷ್ಠ ನಾಯಕರು ಪ್ರಯತ್ನಿಸಿದ್ದಾರೆ. ರಾಜ್ಯ ಉಸ್ತುವಾರಿ ರಣದೀಪ್‌ ಸುಜೇì ವಾಲ ಗುರುವಾರವೇ ಡಿ.ಕೆ. ಶಿವಕುಮಾರ್‌ ಜತೆ ಮಾತನಾಡಿ, ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಶುಕ್ರವಾರ ಸುರ್ಜೇವಾಲಅವರನ್ನು ಕುರಿತು “ಗುಡ್‌ ಜಾಬ್‌ ‘ ಎಂದು ರಮ್ಯಾ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next