ಹುಬ್ಬಳ್ಳಿ: ಎಸ್ ಡಿಪಿಐ, ಪಿಎಫ್ ಐ ಕಪಿಮುಷ್ಠಿಯಲ್ಲಿ ಕಾಂಗ್ರೆಸ್ ಇದ್ದು, ಕಾಂಗ್ರೆಸ್ ನಾಯಕರು ಅವುಗಳ ಒತ್ತಡಕ್ಕೆ ಮಣಿದು ತುಷ್ಠೀಕರಣ ರಾಜಕೀಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಬ್ಯಾಂಕ್ ಕಾರಣದಿಂದ ಎಸ್ ಡಿಪಿಐ, ಪಿಎಫ್ಐ ಹೇಳಿದಂತೆ ಕಾಂಗ್ರೆಸ್ ಕೇಳುತ್ತಿದೆ. ಎಸ್ ಡಿಪಿಐ ಬಿಜೆಪಿ ಬಿ ಟೀಂ ಎಂಬ ಅನಿಸಿಕೆಗೆ ಪ್ರತಿಕ್ರಿಯಿಸಿದ ಅವರು, ಬಿ ಟೀಂ ಎಂದಿದ್ದರೆ ನಾವು ಯಾಕೆ ಪಿಎಫ್ ಐ ನಿಷೇಧಿಸುತ್ತಿದ್ದೆವು ಎಂದರು.
ಬಜರಂಗದಳ, ಆಂಜನೇಯನಿಗೆ ಏನು ಸಂಬಂಧ ಎಂಬ ಡಿ.ಕೆ.ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಸಿದ ಸಿಎಂ, ಶ್ರೀ ರಾಮನಿಗೂ-ಆಂಜನೇಯನಿಗೂ ಇರುವ ಸಂಬಂಧವೇ ಬಜರಂಗ ದಳ-ಆಂಜನೇಯನಿಗೂ ಇರುವ ಸಂಬಂಧವಾಗಿದೆ. ಕಾಂಗ್ರೆಸ್ ನವರು ಏನೇನೋ ಹೇಳಿ ಜನರಭಾವನೆ ಕೆರಳಿಸುವುದು ಬೇಡ. ಕಾಂಗ್ರೆಸ್ ನವರು ಜಾತಿ, ಧರ್ಮ, ಕೋಮು ಭಾವನೆಯಡಿ ಮತಯಾಚನೆ ಮಾಡಿದರೆ ನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಮತಯಾಚನೆ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ:IPL 2023 ಲಿಟ್ಟನ್ ದಾಸ್ ಬದಲಿಗೆ ವಿಂಡೀಸ್ ಸ್ಪೋಟಕ ಆಟಗಾರನ ಕರೆತಂದ ಕೋಲ್ಕತ್ತಾ
ಸೋನಿಯಾ ಗಾಂಧಿ ಅವರು ಪ್ರಚಾರಕ್ಕೆ ಹುಬ್ನಳ್ಳಿಗೆ ಬರುತ್ತಿರುವ ಬಗ್ಗೆ ಪ್ರತಿಕ್ರಿಸಿ ಯಾರಾದರೂ ಬರಲಿ, ಕಾಂಗ್ರೆಸ್ ನವರಂತೆ ನಾವೇನು ವಿರೋಧ ವಿರೋಧ ಮಾಡುವುದಿಲ್ಲ ಎಂದರು.