ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳು ಹಿಂದುಳಿದ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ಇಂತಹ ಸರಕಾರವನ್ನು ಕಿತ್ತೆಸೆಯಲು ಹಿಂದುಳಿದ ಜನಾಂಗದವರು ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿಯವರಿಗೆ ಮತ ನೀಡಿ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ನೀಡಬೇಕೆಂದು ವಿಧಾನ ಪರಿಷತ್ ಸದಸ್ಯ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಇಲ್ಲಿಯ ಪ್ರಸ್‌ಕ್ಲಬ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪೆಟ್ರೋಲ್, ಅನಿಲ, ಇತರ ಬೆಲೆಗಳು ಗಗನಕ್ಕೇರಿ ಬಡವರು ಬದುಕದಂತಾಗಿದೆ. ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಇದಕ್ಕೆ ಬಿಜೆಪಿಯ ದುರಾಡಳಿತ ಕಾರಣವಾಗಿದ್ದು, ಹಿಂದುಳಿದ ಜನರ ಅಭಿವೃದ್ಧಿ ಕಾಂಗ್ರೆಸ್‌ದಿಂದ ಮಾತ್ರ ಸಾಧ್ಯ ಎಂದರು.
ಸಚಿವರಾದ ಗೋವಿಂದ ಕಾರಜೋಳ, ಶ್ರೀರಾಮಲು ಹಿಂದುಳಿದವರಿಗೆ ಏನು ಮಾಡಿದ್ದಾರೆ?. ಶ್ರೀರಾಮಲು ಅವರನ್ನು ಉಪ ಮುಖ್ಯಮಂತ್ರಿ ಏಕೆ ಮಾಡಲಿಲ್ಲ?. ಬಿಜೆಪಿಯವರು ಹಿಂದುಳಿದವರ್ಗದ ಜನಪ್ರತಿನಿಧಿ ಗಳನ್ನು ಅಧಿಕಾರ ಪಡೆಯಲು ಬಳಸುತ್ತಿದ್ದಾರೆಂದು ಆರೋಪಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿಯವರು ಎಲ್ಲ ಜನಾಂಗದಬಗ್ಗೆ ನಂಬಿಕೆ ಇಟ್ಟವರು. ಇಂಥವರನ್ನುಆಯ್ಕೆ ಮಾಡಿದರೆ ಅಭಿವೃದ್ಧಿಕಾಣಬಹುದಾಗಿದೆ. ಬಿಜೆಪಿ ಅಭ್ಯರ್ಥಿಅನುಕಂಪದ ಮತ ಕದಿಯಲುಚುನಾವಣೆಗೆ ಸ್ಪ ರ್ಧಿಸಿದ್ದಾರೆ ಹೊರತುಜನರ ಅಭಿವೃದ್ಧಿಗಲ್ಲ ಎಂದು ತಿಮ್ಮಾಪೂರ ಲೇವಡಿ ಮಾಡಿದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ದಿನದಿಂದ ದಿನಕ್ಕೆಕಾಂಗ್ರೆಸ್‌ನ ಪ್ರಭಾವ ಹೆಚ್ಚಾಗುತ್ತಿದ್ದು ಬಿಜೆಪಿಯ ದುರಾಡಳಿತದಿಂದ ಜನತೆಬೇಸತ್ತಿದ್ದಾರೆ. ಕಾಂಗ್ರೆಸ್‌ನ ಅಭ್ಯರ್ಥಿ ಸತೀಶ ಜಾರಕಿಹೊಳಿಯವರು ಹಿಂದೆಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಸಾಕಷ್ಟುಅಭಿವೃದ್ಧಿ ಮಾಡಿದ್ದು, ಬೆಳಗಾವಿ ಸ್ಮಾರ್ಟ್‌ಸಿಟಿಗೆ ಜಾರಕಿಹೊಳಿಯವರ ಪ್ರಯತ್ನವೇ ಮುಖ್ಯ ಕಾರಣವಾಗಿದೆ ಎಂದರು.
ಮಾದಿಗ ಸಮಾಜದ ಮುಖಂಡ ರಮೇಶ ರಾಯಪ್ಪಗೋಳ ಮಾತನಾಡಿ ಸಮಾಜದ ಬೆಂಬಲ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಅಧ್ಯಕ್ಷ ಬಾಬು ಕುಡಸೋಮನ್ನವರ, ಪುರಸಭೆಮಾಜಿ ಸದಸ್ಯ ವಿರುಪಾಕ್ಷ ವಾಲಿ, ಮಾದಿಗ ಸಮಾಜದ ಮುಖಂಡರು ಇದ್ದರು.