Advertisement

ಜನರ ತೆರಿಗೆ ಹಣವೂ ಕಾಂಗ್ರೆಸ್‌ ಹೈಕಮಾಂಡ್‌ಗೆ ಸಂದಾಯ

03:00 PM Mar 04, 2017 | Team Udayavani |

ಹುಬ್ಬಳ್ಳಿ: ಉಕ್ಕಿನ ಸೇತುವೆ ಮಾತ್ರವಲ್ಲ, ಬೆಂಗಳೂರಿನ ಜನರ ತೆರಿಗೆ ಹಣದಿಂದಲೂ ಕಾಂಗ್ರೆಸ್‌ ಹೈಕಮಾಂಡ್‌ಗೆ ಕಪ್ಪ ತಲುಪಿದೆ. ಡೈರಿ ಸತ್ಯಾಸತ್ಯತೆ ಹೊರಬರಲು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಒತ್ತಾಯಿಸಿದರು. 

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಕ್ಕಿನ ಸೇತುವೆ ನಿರ್ಮಾಣವನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್‌ ತನ್ನ ತಪ್ಪನ್ನು ಒಪ್ಪಿಕೊಂಡಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ಜನರ ತೆರಿಗೆ ಹಣವೂ ಕಾಂಗ್ರೆಸ್‌ನ ಹೈಕಮಾಂಡ್‌ ಗೆ ಸಂದಾಯವಾಗಿದೆ. ಈ ಕುರಿತು ನಮ್ಮ ಬಳಿ ದಾಖಲೆಗಳಿವೆ.

ತಾರ್ಕಿಕ ಅಂತ್ಯ ಕಾಣುವವರೆಗೆ ಹೋರಾಟ ನಿಲ್ಲಲ್ಲ. ಡೈರಿ ಪ್ರಕರಣ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ದೇಶಕ್ಕೆ ವ್ಯಾಪಿಸಿದೆ. ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಇಲ್ಲವೆ ಪಕ್ಷದಿಂದ ಕಾನೂನು ಹೋರಾಟ ಮಾಡಲಾಗುವುದು ಡೈರಿ ಪ್ರಕರಣರವನ್ನು ಸಿಬಿಐ  ತನಿಖೆಗೊಳಪಡಿಸಬೇಕು.

ಸತ್ಯಾಂಶ ಗೊತ್ತಾದಾಗ ಸಂಪುಟದ ಸಚಿವರು ಮಾತ್ರವಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡಬೇಕಾಗುತ್ತದೆ. ಡೈರಿ ಪ್ರಕರಣ ಸುಳ್ಳಾದರೆ ನಾನು ರಾಜಕೀಯ ಸನ್ಯಾಸ ಸ್ವೀಕರಿಸುತ್ತೇನೆ. ಸಿದ್ಧರಾಮಯ್ಯ ಇದಕ್ಕೆ ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು. 

ಅಧಿವೇಶನದಲ್ಲಿ ಚರ್ಚೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹಗರಣಗಳು ಇವೆ. ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್‌ ಅವರು ತಂದೆ-ತಾಯಿಯ ಹೆಸರಿನಲ್ಲಿ ಗೋಮಾಳದ ಜಾಗೆ ಒತ್ತುವರಿ ಮಾಡಿಕೊಂಡಿದ್ದಾರೆ. ಈ ಕುರಿತು ದಾಖಲೆಗಳ ಮಾಹಿತಿ ಕಲೆ ಹಾಕಲಾಗುತ್ತಿದೆ. 

Advertisement

ಬಿಬಿಎಂಪಿಯಲ್ಲಿ 3000 ಕೋಟಿ ರೂ. ಹಣ ಲೂಟಿ ಆಗಿದೆ. ಈ ಎಲ್ಲದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಅಧಿವೇಶನದೊಳಗೆ ಇವುಗಳನ್ನು ಬಿಡುಗಡೆ ಮಾಡಿ, ಅಧಿವೇಶನದಲ್ಲಿ ಈ ಹಗರಣಗಳ ಕುರಿತು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ ಹಾಗೂ ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಚರ್ಚೆ ನಡೆಸಲಿದ್ದಾರೆ ಎಂದರು.

ನನ್ನ ವಿರುದ್ಧದ ಪ್ರಕರಣಗಳಿಗೆ ಕಾಂಗ್ರೆಸ್‌ ಮರುಜನ್ಮ ನೀಡುವುದಿದ್ದರೆ ಸ್ವಾಗತಿಸುವೆ. ಅದು ಸೇಡಿನ ರಾಜಕಾರಣ ಮಾಡಲಿ. ನ್ಯಾಯಾಲಯದ ಮೇಲೆ ವಿಶ್ವಾಸವಿದೆ. ನನ್ನ ಮೇಲಿನ ಎಲ್ಲ ಪ್ರಕರಣಗಳು ಖುಲಾಸೆಗೊಂಡಿವೆ. ಡಿನೋಟಿμಕೇಶನ್‌  ಪ್ರಕರಣ ಮಾತ್ರ ಬಾಕಿ ಉಳಿದುಕೊಂಡಿದೆ. ಎಲ್ಲ ಸರಕಾರ ಹಾಗೂ ಮುಖ್ಯಮಂತ್ರಿಗಳು ಇದನ್ನು ಮಾಡಿದ್ದಾರೆ. ಡಿನೋಟಿಫೈ ಮಾಡಿದ ಜಮೀನು ಬೇಡವಾದರೆ ಸರಕಾರವು ರೈತರಿಂದ ಪಡೆದ ಭೂಮಿಯನ್ನು ವಾಪಸು ಕೊಡಲಿ ಎಂದರು.  

Advertisement

Udayavani is now on Telegram. Click here to join our channel and stay updated with the latest news.

Next