Advertisement

ಶ್ರೀನಿವಾಸ್‌ ಸೇರ್ಪಡೆಗೆ ಕಾಂಗ್ರೆಸಿಗರ ವಿರೋಧ

11:37 PM Mar 31, 2023 | Team Udayavani |

ತುಮಕೂರು: ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಪಕ್ಷಾಂತರಗೊಂಡಿರುವ ಗುಬ್ಬಿ ಕ್ಷೇತ್ರದ ಎಸ್‌.ಆರ್‌ ಶ್ರೀನಿವಾಸ್‌ ಅವರಿಗೆ ಬಂಡಾಯದ ಬಿಸಿ ತಗಲುವ ಸಾಧ್ಯತೆ ಇದೆ. ಹಾಗೆಯೇ, ಇದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ್‌ ಸೋಮಣ್ಣ ಕಣಕ್ಕಿಳಿಯಬಹುದು ಎಂಬ ವದಂತಿಗಳಿಂದಾಗಿ ಕಾರ್ಯಕರ್ತರ ಕಡೆಯಿಂದ ಅಸಮಾಧಾನ ವ್ಯಕ್ತವಾಗಿದೆ.

Advertisement

ಜೆಡಿಎಸ್‌ ಬಿಟ್ಟಿರುವ ಮಾಜಿ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ಕಾಂಗ್ರೆಸ್‌ ಪಕ್ಷ  ಸೇರ್ಪಡೆಗೆ ಮೂಲ ಕಾಂಗ್ರೆಸ್‌ ಕಾರ್ಯಕರ್ತರಿಂದ ತೀವ್ರ ವಿರೋಧ ವ್ಯಕ್ತ ವಾಗುತ್ತಿದ್ದು ಗುಬ್ಬಿ ಕಾಂಗ್ರೆಸ್‌ ವಲಯದಲ್ಲಿ ಅಸಮಾ ಧಾನ ನ್ಪೋಟಗೊಂಡಿದೆ. ಜೆಡಿಎಸ್‌ ಬಿಟ್ಟು ಕೈ ಹಿಡಿದು ತನ್ನ ಗೆಲುವು ಸುಲಭ ಎಂದುಕೊಂಡಿದ್ದ ಶ್ರೀನಿವಾಸ್‌ಗೆ ಮೂಲ ಕಾಂಗ್ರೆಸ್ಸಿಗರಿಂದ ಈಗ ಸಮಸ್ಯೆ ಎದುರಾಗಿದೆ. ಕ್ಷೇತ್ರದ ಪ್ರಭಾವಿ ಮುಖಂಡ ಹೊನ್ನಗಿರಿಗೌಡ ತೀವ್ರ ಆಕ್ರೋಶ ಹೊರಹಾಕಿದ್ದಾರೆ.  ನಾವು ಪಕ್ಷದ ಕಾರ್ಯಕರ್ತರಾಗಿ ಇಪ್ಪತ್ತು ವರ್ಷಗಳಿಂದ ದುಡಿದಿದ್ದೇವೆ. ಕೆ.ಎನ್‌.ರಾಜಣ್ಣ ಮತ್ತು ರಾಜ್ಯ ಸಮಿತಿಯವರು ಮೂಲ ಕಾಂಗ್ರೆಸ್‌ ಕಾರ್ಯಕರ್ತರನ್ನು ಬಿಟ್ಟು ಹೊರಗಿನವರಿಗೆ ಟಿಕೆಟ್‌ ನೀಡಲು ಮುಂದಾಗಿದ್ದಾರೆ. ಗುಬ್ಬಿ ತಾಲೂಕಿನ ಕಾಂಗ್ರೆಸ್‌ ಮುಖಂಡರು ಯಾರು ಅವರ ಹಿಂದೆ ಹೋಗಿಲ್ಲ. ಚುನಾವಣೆಯಲ್ಲಿ ನಾವೇನು ಅಂತಾ ತೋರಿಸುತ್ತೇವೆ ಎಂದು ಗುಡುಗಿದ್ದಾರೆ.

ಅರುಣ್‌ ಸೋಮಣ್ಣಗೆ ಬಿಜೆಪಿ ಟಿಕೆಟ್‌?:ಗುಬ್ಬಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಪಡೆಯಲು ಬಾರಿ ಪೈಪೋಟಿ ವ್ಯಕ್ತವಾಗಿದೆ, ಈ ಕ್ಷೇತ್ರಕ್ಕೆ ವಸತಿ ಸಚಿವ ಸೋಮಣ್ಣ ಪುತ್ರ ಅರುಣ್‌ ಸೋಮಣ್ಣ ಎಂಟ್ರಿ ಆಗುತ್ತಾರೆ ಎನ್ನುವ ಸುದ್ದಿ ಹರಡಿದ್ದು ಬಿಜೆಪಿ ಸ್ಥಳೀಯ ಕಾರ್ಯಕರ್ತರಲ್ಲಿ ಈಗಾಗಲೇ ವಿರೋಧ ವ್ಯಕ್ತವಾಗಿದೆ.ಬೆಂಗಳೂರಿನ ಅರುಣ್‌ ಸೋಮಣ್ಣ ಅವರಿಗೆ ತುಮಕೂರು ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿರುವುದು ಇದೇ ಕಾರಣಕ್ಕೆ ಎಂಬ ಅಭಿಪ್ರಾಯವೂ ಸ್ಥಳೀಯವಾಗಿ ವ್ಯಕ್ತವಾಗುತ್ತಿದೆ. ಸದ್ಯ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿದೆ. ಅದರಲ್ಲಿ ಕಳೆದ 2 ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಅಂತರದಲ್ಲಿ ಸೋತಿರುವ ಬೆಟ್ಟಸ್ವಾಮಿಗೌಡ, ಪಕ್ಷೇತರವಾಗಿ ಸ್ಪರ್ಧಿಸಿದ್ದ ದಿಲೀಪ್‌ ಕುಮಾರ್‌, ಚಂದ್ರಶೇಖರ್‌ ಬಾಬು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್‌.ಎಸ್‌ ರವಿಶಂಕರ್‌, ಪ್ರಧಾನ ಕಾರ್ಯದರ್ಶಿ ಹೆಚ್‌.ಟಿ.ಭೈರಪ್ಪ, ಎನ್‌.ಸಿ.ಪ್ರಕಾಶ್‌, ಅ.ನಾ.ಲಿಂಗಪ್ಪ ಪೈಪೋಟಿ ನಡೆಸಿದ್ದಾರೆ. ಈಗ ಅರುಣ್‌ ಸೋಮಣ್ಣ ಹೆಸರು ಮುನ್ನೆಲೆಗೆ ಬರುತ್ತಿರುವುದು ಗುಬ್ಬಿ ಕ್ಷೇತ್ರದಲ್ಲಿ ಚರ್ಚೆ ತೀವ್ರವಾಗುತ್ತಿದೆ.

-ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next