Advertisement

JODHPUR; ಕಾಂಗ್ರೆಸ್ ಗೆ ಕೇವಲ ಕುರ್ಚಿಯ ಚಿಂತೆ: ರಾಜಸ್ತಾನದಲ್ಲಿ ಪ್ರಧಾನಿ ಮೋದಿ

06:44 PM Oct 05, 2023 | keerthan |

ಜೋಧ್‌ಪುರ: ಚುನಾವಣೆ ಸಮೀಪಿಸುತ್ತಿರುವ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯದ ಹದಗೆಟ್ಟ ಕಾನೂನು ಮತ್ತು ಸುವ್ಯವಸ್ಥೆ, ಇತ್ತೀಚಿನ ಗಲಭೆಗಳು ಮತ್ತು ಪೇಪರ್ ಸೋರಿಕೆ ಹಗರಣವನ್ನು ಎತ್ತಿ ತೋರಿಸಿದ್ದಾರೆ.

Advertisement

ಜೋಧಪುರದಲ್ಲಿ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಹದಗೆಡುತ್ತಿರುವ ಕಾನೂನು ಮತ್ತು ಸುವ್ಯವಸ್ಥೆಯು ಹೂಡಿಕೆಗೆ ಅಡ್ಡಿಯಾಗಿದೆ ಮತ್ತು ವ್ಯವಹಾರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕಾಂಗ್ರೆಸ್ ಸರ್ಕಾರವು ರಾಜಸ್ಥಾನದ ಕಲ್ಯಾಣಕ್ಕಿಂತ ತನ್ನ ”ಮತ ಬ್ಯಾಂಕ್”ಗೆ ಆದ್ಯತೆ ನೀಡುತ್ತಿದೆ ಎಂದು ಅವರು ಆರೋಪಿಸಿದರು.

ಕಾಂಗ್ರೆಸ್ ಕೇವಲ ರಾಜಕೀಯ ಅಧಿಕಾರವನ್ನು ವಶಪಡಿಸಿಕೊಳ್ಳುವತ್ತ ಗಮನಹರಿಸುತ್ತಿದೆ ಎಂದ ಅವರು ‘ಕುರ್ಸಿ ಕಾ ಖೇಲ್’ (ಕುರ್ಚಿಯ ಆಟ) ಎಂದು ಬಣ್ಣಿಸಿದರು. ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಕೈಗೊಂಡ ಕ್ರಮಗಳ ಕೊರತೆಯನ್ನು ಮೋದಿ ಟೀಕಿಸಿದರು.

ಇದನ್ನೂ ಓದಿ:Leo trailer: ಭಯಪಡುವವನಲ್ಲ ಭಯ ಹುಟ್ಟಿಸುವನು ಈ ಲಿಯೋ.. ಟ್ರೇಲರ್‌ ಔಟ್

ಪೇಪರ್ ಸೋರಿಕೆ ಹಗರಣದ ಬಗ್ಗೆಯೂ ಮಾತನಾಡಿರುವ ಪ್ರಧಾನಿ ಮೋದಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Advertisement

ರಾಜಸ್ಥಾನದ ಅಭಿವೃದ್ಧಿಗೆ ಬಿಜೆಪಿ ಸರ್ಕಾರದ ಪ್ರಯತ್ನಗಳ ಬಗ್ಗೆ ಪ್ರಧಾನಿ ಭರವಸೆ ನೀಡಿದರು. ಸುಮಾರು 5,000 ಕೋಟಿ ರೂಪಾಯಿಗಳ ಕೇಂದ್ರದಿಂದ ಪ್ರಾರಂಭಿಸಿದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೇಳಿದರು. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದ ಅಡಿಯಲ್ಲಿ ಭ್ರಷ್ಟಾಚಾರ, ಗಲಭೆಗಳು ಮತ್ತು ಮಹಿಳೆಯರು ಮತ್ತು ದಲಿತರ ಮೇಲಿನ ಅಪರಾಧಗಳ ಹೆಚ್ಚಳವನ್ನು ಅವರು ಖಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next