Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜೀವಗಾಂಧಿ ದೂರದರ್ಶನದಲ್ಲಿ ರಾಮಾಯಣ, ಮಹಾಭಾರತ ತೋರಿಸುವ ವ್ಯವಸ್ಥೆ ಮಾಡಿದ್ದರು. ಎಲ್ಲ ಧರ್ಮದ ಉತ್ತಮ ವಿಚಾರಗಳನ್ನು ಕಲಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ನಾವು ಅವರನ್ನು ಕಾಪಿ ಮಾಡಿಲ್ಲ. ನಮ್ಮನ್ನು ಅವರು ಕಾಪಿ ಮಾಡುತ್ತಿದ್ದಾರೆ ಎಂದರು.
ಪಂಚ ರಾಜ್ಯಗಳ ಚುನಾವಣೆ ಮುಗಿಯುತ್ತಿದ್ದಂತೆ ಕೇಂದ್ರ ಸರಕಾರ ಪೆಟ್ರೋಲ್, ಗ್ಯಾಸ್ ದರವನ್ನು ಮತ್ತೆ ಹೆಚ್ಚಳ ಮಾಡುತ್ತಿದ್ದಾರೆ. ಚುನಾವಣೆವರೆಗೂ ಸುಮ್ಮನಿದ್ದರು. ಈಗ ಎಲೆಕ್ಷನ್ ಮುಗಿಯಿತು. ಹೀಗಾಗಿ ಮತ್ತೆ ಬೆಲೆ ಏರಿಕೆ ಮಾಡಿದ್ದಾರೆ. ಈಗ ಮತದಾರರ ತಾಳ್ಮೆ ಮೀರಿದೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.