ನವದೆಹಲಿ:ಇತ್ತೀಚೆಗೆ ಹಲವಾರು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕಾದ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸೂಕ್ತ ಪಾಠದ ಮೂಲಕ ವಾಸ್ತವವನ್ನು ಎದುರಿಸಬೇಕಾಗಿದೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ(ಮೇ 10) ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ವೈದ್ಯರ ಕೋಟ್ ಹಾಕಿ ತರಕಾರಿ ಖರೀದಿಸಲು ಬಂದಿದ್ದ ಯುವಕನ ಬೈಕ್ ಸೀಜ್
ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ)ಯ ಮಹತ್ವದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯುಪಿಎ ಅಧ್ಯಕ್ಷೆ ಸೋನಿಯಾ, ಚುನಾವಣೆಯಲ್ಲಿ ಪಕ್ಷ ಸೋಲಲು ಕಾರಣವಾಗುವ ಪ್ರತಿಯೊಂದು ಅಂಶಗಳನ್ನು ಪರಿಶೀಲಿಸಲು ಒಂದು ಸಣ್ಣ ಗುಂಪನ್ನು ರಚಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದರು.
ನಮ್ಮ ತೀವ್ರ ಹಿನ್ನಡೆಯನ್ನು ಗಂಭೀರವಾಗಿ ಪರಿಣಗಣಿಸಬೇಕು.ನಾವು ತುಂಬಾ ನಿರಾಸೆಗೊಂಡಿದ್ದೇವೆ ಎಂದು ಹೇಳುವುದು ಸೂಕ್ತವಲ್ಲ, ಪಕ್ಷದ ಸೋಲಿಗೆ ಕಾರಣವಾದ ಪ್ರತಿಯೊಂದು ಅಂಶಗಳನ್ನು ವಿಮರ್ಶಿಸಲು ಸಣ್ಣ ತಂಡ ಮಾಡಲು ಉದ್ದೇಶಿಸಿದ್ದು, ಆ ಗುಂಪು ತಕ್ಷಣವೇ ವರದಿ ನೀಡಬೇಕು ಎಂದು ಸೋನಿಯಾ ಗಾಂಧಿ ತಿಳಿಸಿದ್ದಾರೆ.
ಅಸ್ಸಾಂ ಮತ್ತು ಕೇರಳದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿದ್ದ ಸರ್ಕಾರಗಳನ್ನು ಸೋಲಿಸಲು ಏಕೆ ವಿಫಲರಾಗಿದ್ದೇವೆ. ಪಶ್ಚಿಮಬಂಗಾಳದಲ್ಲಿ ನಾವು ಅಸ್ತಿತ್ವವನ್ನೇ ಕಳೆದುಕೊಂಡಿದ್ದೇವೆ. ಇದರ ಬಗ್ಗೆ ಪಕ್ಷ ಪುನರಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಸೋನಿಯಾ ಹೇಳಿದರು.