Advertisement

Congress ರಾಷ್ಟ್ರೀಯ ವಕ್ತಾರ ಸಂಕೇತ ಏಣಗಿ ಪಕ್ಷಕ್ಕೆ ಗುಡ್‌ಬೈ

08:20 PM Mar 17, 2024 | Team Udayavani |

ಬೆಂಗಳೂರು: ತಾವೊಬ್ಬ ವೀರಶೈವ ಲಿಂಗಾಯತ ಆಗಿದ್ದುದಕ್ಕಾಗಿ ಪಕ್ಷದಲ್ಲಿ ಉಸಿರುಗಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ವಕ್ತಾರ ಹಾಗೂ ರಂಗಕರ್ಮಿ ಏಣಗಿ ಬಾಳಪ್ಪ ಅವರ ಮೊಮ್ಮಗ ಸಂಕೇತ ಏಣಗಿ, ಇದರಿಂದ ಬೇಸತ್ತು ಕಾಂಗ್ರೆಸ್‌ ಪ್ರಾಥಮಿಕ ಸದಸ್ಯತ್ವ ಹಾಗೂ ಪಕ್ಷದ ಎಲ್ಲ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ.

Advertisement

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಸಂಕೇತ ಏಣಗಿ, ನಾನು ಈವರೆಗೆ ತಮ್ಮಿಂದಾಗಲಿ, ಪಕ್ಷದಿಂದಾಗಲಿ ಅಥವಾ ಸರ್ಕಾರದಿಂದಾಗಲಿ ಯಾವುದೇ ವೈಯಕ್ತಿಕ ಲಾಭ ಅಥವಾ ಅಧಿಕಾರ ಬಯಸಿಲ್ಲ ಮತ್ತು ಪಡೆದಿಲ್ಲ ಎಂಬ ಸ್ಪಷ್ಟ ಮಾಹಿತಿ ಕೂಡ ತಮಗಿದೆ.

ಆದಾಗ್ಯೂ ವೈಯಕ್ತಿಕವಾಗಿ ಜಾತಿಭೇದವಿಲ್ಲದೆ ಪ್ರಾಮಾಣಿಕತೆ ಮತ್ತು ನಿಷ್ಠುರತೆಯ ವೀರಶೈವ ಲಿಂಗಾಯತನಾಗಿದ್ದುದಕ್ಕಾಗಿ ಹಾಗೂ ಪಕ್ಷದ ಯಾವುದೇ ನಾಯಕರ ಬಾಗಿಲು ತಟ್ಟದಿದ್ದುದಕ್ಕಾಗಿ ಪಕ್ಷದಲ್ಲಿ ಇಂದು ನನಗೆ ಉಸಿರುಗಟ್ಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದ್ದಾರೆ. ಪಕ್ಷದ ಗೆಲುವಿಗೆ ಕಾರಣರಾದ ಸಹಸ್ರಾರು ಕಾರ್ಯಕರ್ತರ ಅಳಲು ಕೂಡ ಇದೇ ಆಗಿದೆ. ಅಧಿಕಾರದ ಗದ್ದುಗೆ ಏರಲು ಕಾರ್ಯಕರ್ತರು ಮೆಟ್ಟಿಲು ಆಗಬಾರದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕಾರ್ಯಕರ್ತರ ಸೇವೆ ಗುರುತಿಸುವ ಮತ್ತು ಅವರಿಗೆ ಶಕ್ತಿ ತುಂಬುವ ಪ್ರಯತ್ನ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next