ವಿಜಯಪುರ: ಸ್ಥಳೀಯ ಸಂಸ್ಥೆಗಳು ಹಾಗೂ ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯರು ನಾಯಕತ್ವದ ಗುಣ ರೂಪಿಸಿಕೊಳ್ಳಬೇಕು. ಇದಕ್ಕಾಗಿ ಕಾಂಗ್ರೆಸ್ ಪಕ್ಷ ಮಹಿಳೆಯರಿಗೆ ರಾಜಕೀಯ ಸ್ಥಾನಮಾನ ನೀಡಲು ನಾ ನಾಯಕಿ ಕಾರ್ಯಕ್ರಮ ರೂಪಿಸಿದೆ ಎಂದು ಮಾಜಿ ಸಚಿವೆಯೂ ಆಗಿರುವ ನಾ ನಾಯಕಿ ಕಾರ್ಯಕ್ರಮದ ರಾಜ್ಯ ಸಂಚಾಲಕಿ ಉಮಾಶ್ರೀ ಹೇಳಿದರು.
ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ನಾ ನಾಯಕಿ ಕಾರ್ಯಕ್ರಮದ ಸಂಘಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಸ್ಥಾನಮಾನ ಪಡೆಯಲು ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಮಹಿಳೆಯರ ಹಕ್ಕುಗಳನ್ನು ಪ್ರತಿಪಾದಿಸುವುದು ಅತ್ಯವಶ್ಯ ಎಂದರು.
ಇದಲ್ಲದೇ ಆಗಸ್ಟ್ 3ರಂದು ದಾವಣೆಗೆರೆಯಲ್ಲಿ ನಡೆಯಲಿರುವ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮದ ಜಿಲ್ಲಾ ವೀಕ್ಷಕ ಜೆ.ಟಿ. ಪಾಟೀಲ ಜು. 19ರಂದು ಬೆಳಗ್ಗೆ 10ಕ್ಕೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿರುವ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ಪಕ್ಷದ ಶಾಸಕರು, ಮಾಜಿ ಸಚಿವ-ಶಾಸಕರು ಹಾಗೂ ಪಕ್ಷದ ಪದಾಧಿಕಾರಿಗಳು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷ ರಾಜು ಆಲಗೂರ, ಮಾಜಿ ಶಾಸಕ ವಿಠ್ಠಲ ಕಟಕದೋಂಡ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ರಾಜಶೇಖರ ಮೆಣಸಿನಕಾಯಿ, ಸಂದೀಪ ಬೆಳಗಲಿ, ಎಸ್.ಎಂ.ದುಂಡಸಿ, ಚಂದ್ರಶೇಖರ ರಾಠೊಡ, ಎಂ.ಡಿ. ಯಲಿಗಾರ, ಜಮೀರ್ ಅಹ್ಮದ್ ಭಕ್ಷಿ, ಆರತಿ ಶಹಾಪುರ, ಎಸ್.ಬಿ. ಹಾರಿವಾಳ, ರಫೀಕ್ ಪಕಾಲಿ, ಆರ್.ಡಿ. ಹಕ್ಕೆ, ಶಾಹಜಾನ್ ಮುಲ್ಲಾ, ಗುರು ತಾರನಾಳ, ಈರನಗೌಡ ಬಿರಾದಾರ, ಸಿದ್ದಣ್ಣ ಗೌಡನ್ನವರ, ಇಲಿಯಾಸ್ ಬೋರಾಮಣಿ, ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಚನಬಸಪ್ಪ ನಂದರಗಿ, ಸುರೇಶ ಘೊಣಸಗಿ, ಡಾ| ಗಂಗಾಧರ ಸಂಬಣ್ಣಿ ಸೇರಿದಂತೆ ಇತರರು ಇದ್ದರು.