Advertisement
ಲೋಕಸಭೆಯ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಹಿಜಾಬ್ ಪ್ರಕರಣವನ್ನು ಪ್ರಸ್ತಾವಿಸಿದರು. ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದ್ದು ಎಲ್ಲ ಧರ್ಮೀಯರು ತಮ್ಮ ಧರ್ಮವನ್ನು ಮುಕ್ತವಾಗಿ ಆಚರಿಸಲು ಅವಕಾಶವಿದೆ. ಅದಕ್ಕೆ ಯಾವುದೇ ನಿಷೇಧವಿಲ್ಲ. ಆದರೆ ಭಾರತದ ಕೆಲವು ಭಾಗಗಳಲ್ಲಿ ಮುಸ್ಲಿಂ ಅಕ್ಕ-ತಂಗಿಯರಿಗೆ ಹಿಜಾಬ್ ಧರಿಸುವುದಕ್ಕೆ ದಂಡ ವಿಧಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು. ಅಲ್ಲದೆ ಕರ್ನಾಟಕದ ಉಡುಪಿ ಕಾಲೇಜಿನಲ್ಲಿ ಹಿಜಾಬ್ ಕುರಿತಂತೆ ನಡೆದ ಘಟನೆಯ ಬಗ್ಗೆ ಕೇಂದ್ರ ಸರಕಾರ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದರು.
Related Articles
Advertisement
ಪ್ರಿಯಾಂಕಾ ಹೇಳಿಕೆ: “ಹೆಣ್ಣುಮಕ್ಕಳು ಬಿಕಿನಿಯಾದರೂ ತೊಡಲಿ, ಸೀರೆಯುಟ್ಟು ಮುಸುಕನ್ನಾ ದರೂ ಹಾಕಿಕೊಳ್ಳಲಿ. ಅದು ಆಕೆಯ ಸಾಂವಿಧಾನಿಕ ಹಕ್ಕು. ಹಾಗಾಗಿ, ಉಡುಗೆ – ತೊಡುಗೆಗಳ ವಿಚಾರ ದಲ್ಲಿ ಮಹಿಳೆ ಯರಿಗೆ ಕಿರುಕುಳ ಕೊಡುವುದನ್ನು ಬಿಡಿ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಕಮಲ್ ಟ್ವೀಟ್ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಗಲಾಟೆಯ ಬಗ್ಗೆ ಟ್ವೀಟ್ ಮಾಡಿರುವ ತಮಿಳು ನಟ, ರಾಜಕಾರಣಿ ಕಮಲ್ ಹಾಸನ್, “ಕರ್ನಾ ಟಕದಲ್ಲಿ ಹಿಜಾಬ್ ಹೆಸರಿನಲ್ಲಿ ಸಮಾಜವನ್ನು ಇಬ್ಭಾಗವಾಗಿ ಸುವಂಥ ಘಟನೆಗಳು ನಡೆ ಯು ತ್ತಿವೆ. ವಿದ್ಯಾರ್ಥಿ ಗಳನ್ನು ಸಮುದಾಯದ ಹೆಸರಿ ನಲ್ಲಿ ಒಡೆಯಲಾಗು ತ್ತಿದೆ. ಇಂಥ ಘಟನೆಗಳು ತಮಿಳುನಾಡಿಗೆ ಬರು ವುದು ಬೇಡ. ತಮಿಳುನಾಡಿನ ಪ್ರಗತಿಪರರು ಈ ಕುರಿತಂತೆ ಎಚ್ಚರಿಕೆಯಿಂದ ಇರಬೇಕು’ ಎಂದಿದ್ದಾರೆ. ಮಲಾಲಾಳಿಗೆ ಕಪಿಲ್ ಮಿಶ್ರಾ ತಿರುಗೇಟು
ಮಲಾಲಾಳಿಗೆ ಟ್ವಿಟರ್‌ನಲ್ಲಿ ತಿರುಗೇಟು ನೀಡಿರುವ ಬಿಜೆಪಿಯ ಕಪಿಲ್ ಮಿಶ್ರಾ, “ಅಫ್ಘಾನಿಸ್ಥಾನ, ಪಾಕಿಸ್ಥಾನ, ಇರಾನ್‌ನಲ್ಲಿ ಹಿಜಾಬ್ ಧರಿಸದೆ ಇದ್ದಿದ್ದಕ್ಕೆ ಅನೇಕ ಮುಸ್ಲಿಂ ಬಾಲಕಿಯರನ್ನು ಹತ್ಯೆಗೈಯ್ಯಲಾಗಿದೆ. ಪಾಕಿಸ್ಥಾನದಲ್ಲೆ ಹಿಂದೂ, ಸಿಕ್ಖ್ ಬಾಲಕಿಯರನ್ನು ಅವರ ಧರ್ಮದ ಆಧಾರದಲ್ಲಿ ಕೊಲ್ಲಲಾಗಿದೆ. ಆಗೆಲ್ಲ ಮಲಾಲಾ ಅವರ ಮಾನವೀಯ ಪ್ರಜ್ಞೆ ಎಲ್ಲಿ ಹೋಗಿತ್ತು?” ಎಂದು ಪ್ರಶ್ನಿಸಿದ್ದಾರೆ.