Advertisement

ಸಿಎಂ ವಿರುದ್ಧ ಸಿದ್ದುಗೆ ಹೇಳ್ತೀನಿ: ಹಿಟ್ನಾಳ್‌

06:15 AM Jul 31, 2018 | |

ಕೊಪ್ಪಳ: ರಾಜ್ಯದಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಮೈತ್ರಿ ಸರ್ಕಾರವಿದೆ. ಆದರೆ ಸಿಎಂ ಕುಮಾರಸ್ವಾಮಿ ಅವರು ಸಾಲ ಮನ್ನಾ ವಿಚಾರದಲ್ಲಿ ಕೊಪ್ಪಳ ರೈತರ ಬಗ್ಗೆ ಮಾತನಾಡಿದ್ದು ನಾನೂ ಗಮನಿಸಿದ್ದೇನೆ. ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ಎಂದು ಕೊಪ್ಪಳ ಕಾಂಗ್ರೆಸ್‌ ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

Advertisement

ತಾಲೂಕಿನ ಮುನಿರಾಬಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ಕೊಪ್ಪಳದ ಜನರಿಗೆ ಚುನಾವಣೆ ಸಂದರ್ಭದಲ್ಲಿ ಮತ ನೀಡುವ ವೇಳೆ ಈ ಕುಮಾರಸ್ವಾಮಿ ನೆನಪಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 

ರಾಜ್ಯದಲ್ಲಿ ಮೈತ್ರಿ ಸರ್ಕಾರವಿದೆ. ಜಿಲ್ಲೆಯಿಂದ ಇಬ್ಬರು ಕಾಂಗ್ರೆಸ್‌ ಶಾಸಕರು ಆಯ್ಕೆಯಾಗಿದ್ದೇವೆ. ಆಯಾ ಕ್ಷೇತ್ರದ ಜನರು ನಮಗೆ ಮತ ಹಾಕಿದ್ದಾರೆ. ನಾವು ಸಿಎಂಗೆ ಮತ ಹಾಕಿದ್ದೇವೆ. ಅಂದರೆ ಪರೋಕ್ಷವಾಗಿ ಈ ಕ್ಷೇತ್ರದ ಜನ ಸಿಎಂಗೆ ಮತ ಹಾಕಿದಂತೆ. ಈ ಹೇಳಿಕೆ ವಿಚಾರದ ಕುರಿತು ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ. ಶೀಘ್ರದಲ್ಲೇ ತುಂಗಭದ್ರಾ ಜಲಾಶಯಕ್ಕೆ ಸಿಎಂ ಬಾಗಿನ ಅರ್ಪಿಸಲು ಆಗಮಿಸುವ ನಿರೀಕ್ಷೆಯಿದೆ. ಅವರನ್ನೇ ಈ ಪ್ರಶ್ನೆ ಕೇಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next