ಅಗರ್ತಲಾ : ಪಶ್ಚಿಮ ತ್ರಿಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಿಮಾ ಭೌಮಿಕ್ ಅವರು ಭಾರತೀಯ ಸೇನೆ ಮತ್ತು ಬಾಲಾಕೋಟ್ ವಾಯು ದಾಳಿ ಬಗ್ಗೆ ಹೇಳಿಕೆ ನೀಡುವ ಮೂಲಕ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
Advertisement
ಭೌಮಿಕ್ ಅವರು ತ್ರಿಪುರ ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿಯೂ ಆಗಿದ್ದಾರೆ.
ತ್ರಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ತಪಸ್ ಡೇ ಅವರು ಮುಖ್ಯ ಚುನಾವಣಾಧಿಕಾರಿ (ಸಿಇಓ) ಶ್ರೀರಾಮ್ ತರಣಿಕಾಂತಿ ಅವರಿಗೆ ಪತ್ರ ಬರೆದು ಭೌಮಿಕ್ ಅವರಿಂದಾಗಿರುವ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರು ದಾಖಲಿಸಿದ್ದಾರೆ.