ಮಂಗಳೂರು: ನಮ್ಮ ರಾಷ್ಟ್ರದಲ್ಲಿ ಯಾವುದೇ ರೀತಿ ಯಲ್ಲಿ ನ್ಯಾಯಕ್ಕಾಗಿ ಧ್ವನಿ ಎತ್ತುವ, ಪ್ರತಿ ಭಟಿಸುವ, ಟೀಕಿಸುವ ಅವಕಾಶವಿದೆ. ಇಲ್ಲಿಯ ಸಂವಿಧಾನದ ಬಗ್ಗೆ ಮಾತನಾಡುವವರಿಗೆ ಈ ದೇಶದ ಸೌಂದರ್ಯ, ಇಲ್ಲಿರುವ ಸ್ವಾತಂತ್ರ್ಯ , ಅವಕಾಶಗಳ ಮಹತ್ವ ಏನು ಎಂಬುದು ಪಾಕಿಸ್ಥಾನ, ಸೌದಿ ಆರೇಬಿಯಾ ಸೇರಿದಂತೆ ಬೇರೆ ದೇಶ ಗಳಿಗೆ ಹೋದಾಗ ಚೆನ್ನಾಗಿ ಅರಿವಾಗುತ್ತದೆ ಎಂದು ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಹಿಜಾಬ್ ಕುರಿತ ವಿದ್ಯಾರ್ಥಿಗಳ ಹೋರಾಟಕ್ಕೆ ಸಂಬಂಧಿ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖಾದರ್ ಅವರು ನಮ್ಮ ದೇಶದಲ್ಲಿ ಇಷ್ಟೆಲ್ಲ ಮಾತನಾಡಲು ಅವಕಾಶ ಇದೆ. ಆದರೆ ಪಾಕಿಸ್ಥಾನ, ಸೌದಿ ಅರೇಬಿಯಾ ಸೇರಿದಂತೆ ವಿದೇಶಗಳಿಗೆ ಹೋಗಿ ಈ ರೀತಿ ಮಾತ ನಾಡಲಿ ನೋಡೋಣ? ನಮ್ಮಲಿರು ವಷ್ಟು ಸ್ವಾತಂತ್ರ್ಯ ಬೇರೆ ಯಾವುದೇ ದೇಶದಲ್ಲೂ ಇಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾನೂನು ವ್ಯಾಪ್ತಿಯಲ್ಲಿ ಯಾವ ರೀತಿಯ ಸಹಕಾರ ನೀಡಲು ಸಾಧ್ಯವೋ ಅದನ್ನು ಶಾಸಕನ ನೆಲೆಯಲ್ಲಿ ನಾನು ನೀಡಿದ್ದೇನೆ. ಇದರಲ್ಲಿ ಕಾನೂನಿನ ಸಮಸ್ಯೆ ಇರುವುದರಿಂದ ಕಾನೂನು ಪ್ರಕಾರವೇ ಪ್ರಶ್ನೆಮಾಡಬೇಕಾಗುತ್ತದೆ. ಶೈಕ್ಷಣಿಕ ವರ್ಷದ ಮಧ್ಯೆ ಸಿಂಡಿಕೇಟ್ ಸಭೆ ನಡೆಸಿ ಹಿಜಾಬ್ ಹಾಕಬಾರದು ಎನ್ನುವ ತೀರ್ಮಾನ ಮಾಡಿದ್ದಾರೆ. ಶೈಕ್ಷಣಿಕ ವರ್ಷದ ನಡುವೆ ಇಂಥ ನಿರ್ಧಾರ ಮಾಡುವ ಅಧಿಕಾರ ಸಿಂಡಿಕೇಟ್ ಸಮಿತಿಗೆ ಇದೆಯೇ ಎಂಬ ಬಗ್ಗೆ ದ.ಕ.ಜಿಲ್ಲಾಧಿಕಾರಿ ನಿರ್ಧರಿಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದವರು ಹೇಳಿದರು.
ಕೆಐಒಸಿಎಲ್ ಪೆಲ್ಲೆಟ್ ತೆರಿಗೆ ಅದೇಶ ಹಿಂದೆಗೆಯಲು ಆಗ್ರಹ
ಸರಕಾರಿ ಸ್ವಾಮ್ಯದ ಕುದುರುಮುಖ ಕಬ್ಬಿಣ ಅದಿರು ಕಂಪೆನಿಯ (ಕೆಐಒಸಿಎಲ್ ) ಪೆಲ್ಲೆಟ್ (ಕಬ್ಬಿಣದುಂಡೆ) ಮಾರಾಟದ ಮೇಲೆ ಶೇ. 45 ತೆರಿಗೆ ವಿಧಿಸುವ ಮೂಲಕ ಅದನ್ನು ನಷ್ಟದ ಹೆಸರಿನಲ್ಲಿ ಮುಚ್ಚಿಸುವ ಅಥವಾ ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಖಾದರ್ ಆರೋಪಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಜೆ. ಆರ್. ಲೋಬೋ,ಶಾಹುಲ್ ಹಮೀದ್, ಮಮತಾ ಗಟ್ಟಿ, ಸದಾಶಿವ ಉಳ್ಳಾಲ್, ಶುಭೋದಯ ಆಳ್ವ, ನಾರಾಯಣ ನಾಯ್ಕ ಮೊದ
ಲಾದವರು ಉಪಸ್ಥಿತರಿದ್ದರು.