Advertisement
ಪಟ್ಟಣದ ಸ್ವಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಿಇಒ ಶಾಲಾ ಕಾರ್ಯಕ್ರಮದಲ್ಲಿ ಹಾಲಿ ಶಾಸಕನ ಪರ ಮತಯಾಚಿಸಿ, ಗ್ರಾಮದ ಜನತೆ ಅವರಿಗೆ ಹೆಚ್ಚಿನ ಬೆಂಬಲ ನೀಡುವಂತೆಮನವಿ ಮಾಡಿದ್ದಾರೆ. ಇದು ಕಾನೂನಿನ ಪ್ರಕಾರ ಅಕ್ಷಮ್ಯವೆಂದು ಟೀಕಿಸಿದರು.
Related Articles
Advertisement
ರಸ್ತೆ ಕಾಮಗಾರಿಯಲ್ಲೂ ತಾರತಮ್ಯ: ತಾಲೂಕಿನ ಮಲ್ಲಪ್ಪನ ಹಳ್ಳಿ ರಸ್ತೆಗೆ ವಿದ್ಯುತ್ ನಗರದವರೆಗೆ ಕಾಂಕ್ರಿಟ್ ರಸ್ತೆ ಮಾಡುತ್ತಿದ್ದು, ಈ ರಸ್ತೆಬೀರನಹಳ್ಳಿ ಗ್ರಾಮ ದವರೆಗೆ ಸಂಪೂರ್ಣ ಗುಂಡಿಗಳಿಂದ ತುಂಬಿವಾಹನಗಳು ಓಡಾಡದಂತೆ ಪರಿಸ್ಥಿತಿ ಎದುರಾಗಿದೆ. ಆದರೆ, ಕಾಂಕ್ರಿಟ್ ರಸ್ತೆಯನ್ನು ಕೇವಲ ವಿದ್ಯುತ್ ನಗರದವರೆಗೆ ನಡೆಸುತ್ತಿದ್ದು ಇದು ಸರಿಯಲ್ಲ. ಈ ರಸ್ತೆಯನ್ನು ಬೀರನಹಳ್ಳಿ ವರೆಗೆ ಮುಂದುವರೆಸಬೇಕೆಂದು ನೀರಾವರಿ ಇಲಾಖೆ ಆಧಿಕಾರಿಗಳಿಗೆಮನವಿ ಮಾಡುವುದಾಗಿ ತಿಳಿಸಿದರು. ಈ ರಸ್ತೆ ನಿರ್ಮಾಣದಲ್ಲಿ ತಾರತಮ್ಯ ಎಸಗುತ್ತಿರುವ ಅಧಿಕಾರಿಗಳ ವಿರುದ್ಧ ತಾವು ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಜಾಲತಾಣದ ರಾಜ್ಯಉಪಾಧ್ಯಕ್ಷ ಮುಜಾಹಿದ್ ಪಾಷಾ, ಪಕ್ಷದ ಮುಖಂಡರಾದ ಹೇಮಂತ್ ಕುಮಾರ್, ಎಚ್.ಟಿ.ಲಕ್ಷ್ಮಣ್, ಗೊವಿಂದರಾಜು ಹಾಜರಿದ್ದರು.
ರಾಜ್ಯ, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಕೆ :
ಪ್ರಸ್ತುತ ತಾಲೂಕಿನಲ್ಲಿ ಇರುವ ಬಹುತೇಕ ಅಧಿಕಾರಿಗಳು ಮಾಜಿ ಸಚಿವ ಹಾಗು ಶಾಸಕರ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಶಾಲಾ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಮತ ಯಾಚಿಸಿ ರುವ ವಿಡಿಯೋ ಬಿಡುಗಡೆ ಮಾಡಿ ಬಿಇಒ ಭಾಗ್ಯಮ್ಮ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಜತೆಗೆ ವಿಡಿಯೋ ತುಣುಕನ್ನು ಜಿಲ್ಲಾಧಿಕಾರಿಗಳು, ರಾಜ್ಯ ಚುನಾವಣಾ ಆಯೋಗ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಿ ಕ್ರಮ ಕೈಗೊಳ್ಳುವಂತೆ ತಾಲೂಕು ಕಾಂಗ್ರೆಸ್ ಮುಖಂಡ ಶ್ರೇಯಸ್ ಪಟೇಲ್ ಆಗ್ರಹಿಸಿದರು.