Advertisement

ನಾಯಕರ ವಿರುದ್ಧ ಕೇಸ್: ಕಾನೂನು ಹೋರಾಟಕ್ಕೆ ಸಿದ್ಧವಾದ ಕೆಪಿಸಿಸಿ

02:34 PM Jan 17, 2022 | Team Udayavani |

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಉದ್ಘಾಟನೆ ಹಾಗೂ ನಡಿಗೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸಂಬಂಧ ಕಾನೂನು ಹೋರಾಟ ನಡೆಸುವುದಕ್ಕೆ ಐವರು ಕಾನೂನು ತಜ್ಞರ ಸಮಿತಿಯನ್ನು ಕೆಪಿಸಿಸಿ ರಚನೆ ಮಾಡಿದೆ.

Advertisement

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ನೇತೃತ್ವದಲ್ಲಿ ಹೈಕೋರ್ಟ್ ವಕೀಲರಾದ ಎಚ್.ಸಿ.ಚಂದ್ರಮೌಳಿ, ಸಿ.ಎಂ.ಧನಂಜಯ, ಎ.ಜಿ.ಶಿವಣ್ಣ, ಕೆ.ದಿವಾಕರ್ ಹಾಗೂ ಮುನಿಯಪ್ಪ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಕಾಂಗ್ರೆಸ್ ಹಾಗೂ ಕೆಪಿಸಿಸಿ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ಮಾಹಿತಿ ಸಂಗ್ರಹಿಸಿ, ಯಾವ ಯಾವ ನಾಯಕರ ವಿರುದ್ಧ ಪ್ರಕರಣ ದಾಖಲಾಗಿದೆ, ಅವುಗಳ ಸ್ವರೂಪ ಎಂಥದ್ದು, ನ್ಯಾಯಾಲಯದಲ್ಲಿ ಹೇಗೆ ಹೋರಾಟ ಮಾಡಬೇಕೆಂಬುದನ್ನು ಈ ಸಮಿತಿ ನಿರ್ಧರಿಸಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದ್ದಂತೆ ೪೦ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next