ಮಂಡ್ಯ: ರೈತಾಪಿ ವರ್ಗ ಹಾಗೂ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಶುದ್ಧ ನೀರಿನ ಅಗತ್ಯತೆ ಇರು ವುದರಿಂದಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದ ಪ್ರತಿ ಮನೆ ಮನೆಗೂ ಕುಡಿ ಯುವ ನೀರು ಸಂಗ್ರಹಿಸುವ ವಾಟರ್ ಕ್ಯಾನ್ (ಬಾಟಲ್‌ಗಳು) ವಿತರಣಾ ಕಾರ್ಯಕ್ರಮಕ್ಕೆ ಸೆ.11 ರಂದು ಉಪ್ಪರಕನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಚಾಲನೆ ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಡಾ.ಕೃಷ್ಣ ತಿಳಿಸಿದರು.
ಇಂದು ವಿತರಣೆ: ಜನತೆಯ ಆರೋಗ್ಯವನ್ನು ದೃಷ್ಟಿ ಯಲ್ಲಿಟ್ಟುಕೊಂಡು ನಗರ ಮತ್ತು ಗ್ರಾಮಾಂತರ ಭಾಗ ಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ ಬಹಳಷ್ಟು ದಿನಗಳಿಂದಲೂ ಜನತೆ ಹಳೆಯ ನೀರಿನ ಕ್ಯಾನ್‌ಗಳಲ್ಲಿ ನೀರು ಸಂಗ್ರಹಿಸಿ ಉಪಯೋಗಿ ಸುತ್ತಿದ್ದಾರೆ. ಕೆಲವನ್ನು ಸ್ವತ್ಛಗೊಳಿಸಿರುವುದಿಲ್ಲ. ಸ್ವತ್ಛ ಗೊಳಿಸಲು ಸಾಧ್ಯವೂ ಆಗುವುದಿಲ್ಲ. ಸ್ವತಃ ನಾನು ವೈದ್ಯನಾಗಿರುವುದರಿಂದ ಇದನ್ನು ಮನಗಂಡು ಶುದ್ಧ ಕುಡಿಯುವ ನೀರಿನ ಕ್ಯಾನ್‌ಗಳ ವಿತರಣಾ ಕಾರ್ಯ ಕ್ರಮ ಹಮ್ಮಿಕೊಂಡಿದ್ದೇನೆ ಎಂದರು.
ಮಂಡ್ಯ ತಾಲೂಕಿನ ಸುಮಾರು 24 ಗ್ರಾಪಂ ವ್ಯಾಪ್ತಿ ಯಲ್ಲಿ ಕಾರ್ಯ ಕ್ರಮ ಹಮ್ಮಿಕೊಂಡಿದ್ದು, ಪ್ರತಿ ನಿತ್ಯ ಒಂದೊಂದು ಗ್ರಾಮಕ್ಕೆ ತೆರಳಿ ಪ್ರತಿ ಮನೆ ಮನೆಗೂ ಪಕ್ಷಾತೀತವಾಗಿ ನೀರಿನ ಕ್ಯಾನ್ ವಿತರಿಸಲಾಗುವುದು ಎಂದರು.
ಶುದ್ಧ ನೀರನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ: ಸಾಮನ್ಯವಾಗಿ ರೈತಾಪಿ ವರ್ಗ ಹೊಲ-ಗದ್ದೆಗಳಿಗೆ ಹೋಗಿ ಕೆಲಸ ಮಾಡುವ ವೇಳೆ ಆಯಾಸ ಹಳ್ಳ, ಕೊಳ್ಳ, ಕೆರೆಗಳ ನೀರನ್ನು ಕುಡಿಯು ತ್ತಾರೆ. ಇದರಿಂದ ಹಲವು ಸಾಂಕ್ರಾಮಿಕ ರೋಗ ಬರುವ ಸಾಧ್ಯತೆಗಳಿವೆ. ಆರ್ಥಿಕ ವಾಗಿ ಸಂಕಷ್ಟದಲ್ಲಿ ಬದುಕುವ ಜನರಿಗೆ ಆರೋಗ್ಯ ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ. ಸಾಮಾನ್ಯವಾಗಿ ನೀರಿ ನಿಂದಲೇ ಹಲವು ಕಾಯಿಲೆ ಬರುವ ಸಾಧ್ಯತೆ ಇರುವು ದರಿಂದ ಮೊದಲು ಶುದ್ಧ ನೀರನ್ನು ಸೇವಿಸುವುದನ್ನು ರೂಢಿಸಿಕೊಳ್ಳಬೇಕು ಎಂಬುದು ಇದರ ಉದ್ದೇಶ ಎಂದರು.
ಗರ್ಭಿಣಿಯರಿಗೆ ಉಚಿತ ತಪಾಸಣೆ: ಇದೇ ಅಲ್ಲದೇ ಪ್ರತೀ ಗುರುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 3ರ ವರೆಗೆ ನಮ್ಮ ಕಾವೇರಿ ನರ್ಸಿಂಗ್ ಹೋಂನಲ್ಲಿ ಗರ್ಭಿಣಿ ಯರಿಗೆ ಉಚಿತವಾಗಿ ತಪಾಸಣೆ ಮಾಡಲಾ ಗುತ್ತದೆ. ಗುರುವಾರ ಮಾತ್ರ ಗರ್ಭಿಣಿಯರ ಸ್ಕ್ಯಾನಿಂಗ್‌ಗೆ ಕೇವಲ 300 ರೂ.ಗಳಲ್ಲಿ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡ ರಾದ ಅಮ್ಜದ್‌ಪಾಷಾ, ಮುರಳಿ, ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ನಾನು ಕಾಂಗ್ರೆಸ್‌ನಿಂದ ಪ್ರಬಲ ಟಿಕೆಟ್ ಆಕಾಂಕ್ಷಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಇಚ್ಛಿಸಿದ್ದೇನೆ. ಪಕ್ಷದಲ್ಲಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಡಾ.ಕೃಷ್ಣ ಹೇಳಿದರು. ಈಗಾಗಲೇ ಸಮಾಜ ಸೇವೆಯಲ್ಲಿ ತೊಡಗಿ ಜನರಿಗೆ ಹತ್ತಿರವಾಗುತ್ತಿದ್ದೇನೆ. ರಾಜ್ಯ ಹಾಗೂ ಜಿಲ್ಲಾ ನಾಯಕರು ನನಗೆ ಬೆಂಬಲ ನೀಡುತ್ತಿದ್ದಾರೆ. ಅಲ್ಲದೆ, ನಗರದಲ್ಲಿ ಪ್ರತ್ಯೇಕ ಕಚೇರಿ ತೆರೆದು ಜನ ಸಾಮಾನ್ಯರಿಗೆ ಸ್ಪಂದಿಸುವ ಕೆಲಸ ಮಾಡಲಿದ್ದೇನೆ. ಪಕ್ಷದಿಂದ ಟಿಕೆಟ್ ಕೊಟ್ಟರೆ ಖಂಡಿತ ಸ್ಪರ್ಧಿಸುತ್ತೇನೆ. ಬೇರೆಯವರಿಗೂ ಕೊಟ್ಟರೂ ಪಕ್ಷದ ಪರವಾಗಿ, ಅಭ್ಯರ್ಥಿ ಪರ ದುಡಿಯುತ್ತೇನೆ ಎಂದರು.