ಅಹಮದಾಬಾದ್: ಭಾರೀ ಕುತೂಹಲ ಮೂಡಿಸಿದ್ದ ಮತ್ತು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ರಾಜ್ಯಸಭಾ ಸ್ಥಾನಗಳಿಗೆ ಗುಜರಾತ್ ರಾಜ್ಯದಿಂದ 3 ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ ಅಮಿತ್ ಶಾ ಹಾಗೂ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪರಮಾಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಅವರ ವಿರುದ್ಧ ಬಿಜೆಪಿಯಿಂದ ತೃತೀಯ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಅವರ ರಾಜ್ಯಸಭಾ ಪ್ರವೇಶಕ್ಕೆ ತಡೆ ಹಾಕುವ ಅಮಿತ್ ಶಾ ಕಾರ್ಯತಂತ್ರ ವಿಫಲವಾಗಿದೆ. ಮಾತ್ರವಲ್ಲದೆ ಈ ಚುನಾವಣೆಯಲ್ಲಿ ಬಿಜೆಪಿಗೂ ಅಡ್ಡಮತದಾನದ ಬಿಸಿ ತಟ್ಟಿದ್ದು, ಪಕ್ಷದ ಶಾಸಕ ನಳಿನ್ ಕೊಠಾಡಿಯಾ ಅವರು ಅಹಮ್ಮದ್ ಪಟೇಲ್ ಅವರಿಗೆ ಮತ ಚಲಾಯಿಸಿರುವುದಾಗಿ ಸ್ವತಃ ಹೇಳಿಕೊಂಡಿದ್ದಾರೆ.
ಮಂಗಳವಾರ ನಡೆದ ಚುನಾವಣೆಯ ಫಲಿತಾಂಶ ಸಾಯಂಕಾಲವೇ ಪ್ರಕಟವಾಗಬೇಕಿತ್ತು. ಆದರೆ ಅಂತಿಮ ಕ್ಷಣದಲ್ಲಿ ಎರಡು ಪಕ್ಷಗಳ ಹೈಡ್ರಾಮ ನಡೆದ ಕಾರಣ ಮತ ಎಣಿಕೆ ಹಾಗೂ ಫಲಿತಾಂಶವನ್ನು ತಡೆಹಿಡಿಯಲಾಗಿತ್ತು. ಇಬ್ಬರು ಕಾಂಗ್ರೆಸ್ ಶಾಸಕರು ತಮ್ಮ ಮತಪತ್ರಗಳನ್ನು ಅಮಿತ್ ಶಾ ಅವರಿಗೆ ತೋರಿಸಿದ್ದಾರೆ, ಹಾಗಾಗಿ ಅಧಿಕೃತ ಚುನಾವಣಾ ಏಜೆಂಟ್ ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳಿಗೆ ಮತಪತ್ರವನ್ನು ತೋರಿಸುವಂತಿಲ್ಲ ಎಂಬ ನಿಯಮವನ್ನು ಮುಂದಿರಿಸಿಕೊಂಡು ಕಾಂಗ್ರೆಸ್ ನಿಯೋಗವು ನವದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಕಛೇರಿಗೆ ತೆರಳಿ ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ಬಿಜೆಪಿಯೂ ಸಹ ಘಟಾನುಘಟಿ ಸಚಿವರ ನೇತೃತ್ವದ ನಿಯೋಗವನ್ನು ಕಳುಹಿಸಿಕೊಟ್ಟಿತ್ತು. ಎರಡೂ ಕಡೆಯ ಸದಸ್ಯರ ವಾದಗಳನ್ನು ಆಲಿಸಿದ ಚುನಾವಣಾ ಆಯೋಗವು ಬಳಿಕ ಸಭೆ ಸೇರಿ ಈ ಎಲ್ಲಾ ವಿದ್ಯಮಾನಗಳ ಕುರಿತಾಗಿ ವಿವರವಾಗಿ ಚರ್ಚಿಸಿತು. ಬಳಿಕ ತಡರಾತ್ರಿ ತನ್ನ ತೀರ್ಪನ್ನು ಪ್ರಕಟಿಸಿದ ಆಯೋಗವು ಕಾಂಗ್ರೆಸ್ ಶಾಸಕರ ಮತಗಳನ್ನು ಅಸಿಂಧುಗೊಳಿಸಿ ತೀರ್ಪನ್ನು ನೀಡಿತು.
– ಗುಜರಾತ್‌ನ ಗಾಂಧಿನಗರದ ಮತಎಣಿಕೆ ಕೇಂದ್ರದಲ್ಲಿ ಮತ್ತೆ ಗರಿಗೆದರಿದ ಚಟುವಟಿಕೆ
– ಮತ ಎಣಿಕೆ ಪ್ರಾರಂಭ
Related Articles
– ಫಲಿತಾಂಶ ಈ ರೀತಿಯಾಗಿದೆ: ಅಮಿತ್ ಶಾ (46) ಹಾಗೂ ಸ್ಮತಿ ಇರಾನಿ (45) ಗೆಲುವು
– ಅಹಮ್ಮದ್ ಪಟೇಲ್ 44 ಮತಗಳ ಗೆಲುವು
ಬಿಜೆಪಿಯ ತೃತೀಯ ಅಭ್ಯರ್ಥಿ ಬಲ್ವಂತ್ ಸಿಂಗ್ ರಜಪೂತ್ (39) ಮತಗಳು