ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಕೂಡ ಜಮಖಂಡಿ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ದೆಹಲಿ ಮಟ್ಟದಲ್ಲಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರ
ಬದಲಾವಣೆಗೆ ಸ್ವತಃ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾರ್ಯ ಪ್ರವೃತ್ತರಾಗಿರುವ ಬೆಳವಣಿಗೆ ನಡೆದಿದೆ.
Advertisement
ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಯ್ಕೆ ಕುರಿತಂತೆ ರಾಹುಲ್ ಗಾಂಧಿ ಶನಿವಾರ ಐವರು ಮಹಿಳಾನಾಯಕಿಯರನ್ನು ಪ್ರತ್ಯೇಕವಾಗಿ ಸಂದರ್ಶಿಸಿದ್ದು, ಶೀಘ್ರವೇ ಮಹಿಳಾ ಅಧ್ಯಕ್ಷರ ಬದಲಾವಣೆ ಸೂಚನೆ
ನೀಡಿದ್ದಾರೆಂದು ತಿಳಿದು ಬಂದಿದೆ.
ನಡುವೆಯೇ, ಲಕ್ಷ್ಮೀ ಹೆಬ್ಟಾಳ್ಕರ್ ಬದಲಾವಣೆಗೆ ತೆರೆ ಮರೆಯಲ್ಲಿ ಸಾಕಷ್ಟು ಕಸರತ್ತು ನಡೆದಿದೆ. ರಾಜ್ಯ ನಾಯಕರೂ
ತಮ್ಮ ಆಪ್ತರನ್ನು ಮಹಿಳಾ ಅಧ್ಯಕ್ಷೆ ಗಾದಿ ಮೇಲೆ ಕೂರಿಸಲು ಪ್ರಯತ್ನ ನಡೆಸುತ್ತಿದ್ದಾರೆಂದು ತಿಳಿದು ಬಂದಿದೆ. ಈ ಬೆಳವಣಿಗೆಯ ನಡುವೆಯೇ ಶನಿವಾರ ರಾಹುಲ್ ಗಾಂಧಿ ಐವರು ಮಹಿಳಾ ನಾಯಕಿಯರನ್ನು ಸಂದರ್ಶನ
ಮಾಡಿದ್ದಾರೆ. ಮೈಸೂರು ಜಿಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ಕೆಪಿಸಿಸಿ ಕಾರ್ಯದರ್ಶಿಗಳಾದ ಡಾ.
ನಾಗಲಕ್ಷ್ಮೀ ಚೌಧರಿ, ಶಾರದಾ ಗೌಡ, ಭಾರತಿ ಶಂಕರ್, ಮಂಗಳೂರು ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಶೆರ್ಲೆಟ್
ಪಿಂಟೋ ಅವರನ್ನು ದೆಹಲಿಗೆ ಕರೆಸಿ ಸಂದರ್ಶನ ನಡೆಸಿದ್ದಾರೆ. ಎಲ್ಲರ ರಾಜಕೀಯ ಹಿನ್ನೆಲೆ, ರಾಜಕೀಯ ಪ್ರವೇಶಕ್ಕೆ ಕಾರಣ ಹಾಗೂ ಪ್ರೇರಣೆ ಕುರಿತು ಪ್ರತಿಯೊಬ್ಬರಿಂದ ಮಾಹಿತಿ ಪಡೆದುಕೊಂಡಿದ್ದಾರೆ.
Related Articles
Advertisement
ಸುಷ್ಮಿತಾರಿಂದ 14 ಜನ ಸಂದರ್ಶನ: ಇದಕ್ಕೂ ಮೊದಲು ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಸುಷ್ಮಿತಾ ದೇವ್ 14 ಮಹಿಳಾ ನಾಯಕಿಯರನ್ನು ಪ್ರತ್ಯೇಕವಾಗಿಸಂದರ್ಶನ ನಡೆಸಿ, ಅವರಲ್ಲಿ ಐವರನ್ನು ಆಯ್ಕೆಮಾಡಿದ್ದರು ಎಂದು ಗೊತ್ತಾಗಿದೆ. 14 ಜನರಲ್ಲಿ ಆಯ್ಕೆಯಾದ ಐವರನ್ನು ರಾಹುಲ್ ಗಾಂಧಿ ನೇರ ಸಂದರ್ಶನ ಮಾಡಿ, ಪಕ್ಷ ಸಂಘಟನೆ, ಮಹಿಳಾ ಸಬಲೀಕರಣ ಹಾಗೂ ಚುನಾವಣೆಯಲ್ಲಿ ಮಹಿಳೆಯರ ಮತ ಸೆಳೆಯಲು ಪಕ್ಷ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದ್ದು, ಶೀಘ್ರವೇ ಈ ಕುರಿತು ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆಂದು ತಿಳಿದು ಬಂದಿದೆ. ಇಬ್ಬರಲ್ಲಿ ಪೈಪೋಟಿ: ರಾಹುಲ್ ಗಾಂಧಿ ಅವರು ಸಂದರ್ಶನ ನಡೆಸಿದ ಐವರಲ್ಲಿ ಪುಷ್ಪಾ ಅಮರನಾಥ್ ಹಾಗೂ ಡಾ. ನಾಗಲಕ್ಷ್ಮೀ ಚೌಧರಿ ಇಬ್ಬರಲ್ಲಿ ಒಬ್ಬರನ್ನು ಮಹಿಳಾ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಇಬ್ಬರಲ್ಲಿ ಒಬ್ಬರಿಗೆ ಅಧ್ಯಕ್ಷ ಸ್ಥಾನ ಕೈ ತಪ್ಪಿದರೂ, ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ನಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆರೋಪ- ಪ್ರತ್ಯಾರೋಪ
ರಾಹುಲ್ ಗಾಂಧಿ ಭೇಟಿಗೆ ತೆರಳಿದ್ದ ಮಹಿಳಾ ನಾಯಕಿಯರಾದ ಶಾರದಾ ಗೌಡ, ಭಾರತಿ ಶಂಕರ್ ಇಬ್ಬರೂ ಒಬ್ಬರ
ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಾನೂ ಸೇರಿ ಪಕ್ಷದ ಐವರು ಮಹಿಳಾ ನಾಯಕಿಯರನ್ನು ಕರೆಸಿ ಶನಿವಾರ ಮಾತುಕತೆ ನಡೆಸಿದ್ದಾರೆ. ಪಕ್ಷ ಸಂಘಟನೆ ಮತ್ತು ನಮ್ಮ ಹಿನ್ನೆಲೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಐವರಲ್ಲಿಯಾರನ್ನಾದರೂ ಆಯ್ಕೆ ಮಾಡಬಹುದು.
● ಡಾ. ನಾಗಲಕ್ಷ್ಮೀ ಚೌಧರಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಒತ್ತಡಕ್ಕೆ ಮಣಿಯುವ ಹೆಣ್ಣು ನಾನಲ್ಲ : ಲಕ್ಷ್ಮಿ ಹೆಬ್ಬಾಳ್ಕರ್
ಬಾಗಲಕೋಟೆ: ಯಾವುದೇ ರೀತಿಯ ಪ್ರಭಾವ ಅಥವಾ ಒತ್ತಡಕ್ಕೆ ಮಣಿಯುವ ಹೆಣ್ಣು ಮಗಳು ನಾನಲ್ಲ. ನನ್ನ ಆತ್ಮಸಾಕ್ಷಿಗೆ ತಕ್ಕಂತೆ ನಾನು ಕೆಲಸ ಮಾಡುತ್ತೇನೆಂದು ಮಹಿಳಾ ಕಾಂಗ್ರೆಸ್ ರಾಜ್ಯ ಅಧ್ಯಕ್ಷೆ, ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಹೇಳಿದ್ದಾರೆ. ಜಮಖಂಡಿ ಉಪಚುನಾವಣೆ ಹಿನ್ನೆಲೆಯಲ್ಲಿ ಮುಧೋಳದಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ವಿಷಯಕ್ಕೂ ಜಾರಕಿಹೊಳಿ, ಲಕ್ಷ್ಮೀ ಹೆಬ್ಟಾಳಕರ ಎಂದು ಥಳಕು ಹಾಕಬೇಡಿ. ಅವರ ಮತ್ತು ನಮ್ಮ ಮಧ್ಯೆ ಇರುವ ಭಿನ್ನಾಭಿಪ್ರಾಯ ಮುಗಿದು ಹೋದ ಅಧ್ಯಾಯ. ಅಲ್ಲದೇ ಯಾರದೋ ಪ್ರಭಾವಕ್ಕೆ ಮಣಿದು ನಾನು ಮಹಿಳಾ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟು ಕೊಡುವ ಅಗತ್ಯ ಬಂದಿಲ್ಲ ಎಂದರು. ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ವೇಳೆ ಮೂವರು ಸೂಕ್ತ ಮಹಿಳೆಯರನ್ನು ಹುಡುಕುವ ಪ್ರಸಂಗ ಇತ್ತು. ಅಂತಿಮವಾಗಿ ನನ್ನನ್ನು ಆಯ್ಕೆ ಮಾಡಲಾಗಿತ್ತು. ಆಗ ನನ್ನ ಮೊದಲ ಭಾಷಣದಲ್ಲೇ ಹೇಳಿದ್ದೆ, ನಾನು ಅಧಿಕಾರದಿಂದ ಕೆಳಗಿಳಿಯುವ ಹೊತ್ತಿಗೆ 20 ಜನ ಮಹಿಳೆಯರನ್ನು
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸೂಕ್ತವಾಗುವ ರೀತಿ ಬೆಳೆಸುತ್ತೇನೆ ಎಂದಿದ್ದೆ. ಹಾಗೆಯೇ 20ಕ್ಕೂ ಹೆಚ್ಚು ಮಹಿಳೆಯರನ್ನು ರಾಜ್ಯದ ಮಹಿಳಾ ಕಾಂಗ್ರೆಸ್‌ನಲ್ಲಿ ಬೆಳೆಸಿದ್ದೇನೆ. ನಾನು ಶಾಸಕಿಯಾಗಿ ಆಯ್ಕೆಯಾದ ತಕ್ಷಣ ಮಹಿಳಾ ಕಾಂಗ್ರೆಸ್‌ನ
ರಾಷ್ಟ್ರೀಯ ಅಧ್ಯಕ್ಷೆ ಸುಷ್ಮಿತಾ ದೇವ ಅವರಿಗೆ ಪತ್ರ ಬರೆದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡಲು ಸ್ವಯಂ ಪ್ರೇರಣೆಯಿಂದ ತಿಳಿಸಿದ್ದೆ. ಅದಕ್ಕಾಗಿ 20 ಜನರನ್ನುಸಂದರ್ಶನಕ್ಕೂ ಕಳುಹಿಸಿದ್ದೆಎಂದರು. ನಾನೀಗ ಶಾಸಕಿಯಾಗಿದ್ದೇನೆ. ಹೀಗಾಗಿ ಕೆಪಿಸಿಸಿ ಮಹಿಳಾ ಘಟಕಕ್ಕೆ ಬೇರೊಬ್ಬರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ನಾನು ಕಳುಹಿಸಿದ್ದ 20 ಜನರಲ್ಲಿ ಐವರ ಹೆಸರನ್ನು ಅಂತಿಮಗೊಳಿಸಲಾಗಿದೆ. ರಾಹುಲ್ ಗಾಂಧಿ ಅವರೇ ಈ ನೇಮಕ ಪ್ರಕ್ರಿಯೆ ಮಾಡುತ್ತಿದ್ದು, ಐವರು ಇಲ್ಲವೇ ಬೇರೆಯಾರಾದರೂ ಸೂಕ್ತ ಮಹಿಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ
ನೇಮಕವಾಗಲಿದ್ದಾರೆ ಎಂದರು. ●ಶಂಕರ ಪಾಗೋಜಿ