Advertisement

ಘಟಾನುಘಟಿಗಳನ್ನೇ ಸಚಿವ ಸ್ಥಾನದಿಂದ ದೂರ ಇಟ್ಟ ಕಾಂಗ್ರೆಸ್, ಜೆಡಿಎಸ್?

11:20 AM Jun 06, 2018 | Sharanya Alva |

ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದ ಮೊದಲ ಕಂತಿನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಕ್ಷಣಗಣನೆ ಆರಂಭವಾಗಿದ್ದರೆ, ಜೆಡಿಎಸ್ ನಲ್ಲಿ ಸಚಿವರ ಪಟ್ಟಿ ಅಂತಿಮಗೊಳಿಸಲು ಕಸರತ್ತು ಮುಂದುವರಿದಿದೆ.

Advertisement

ಬಹುತೇಕವಾಗಿ ಎರಡೂ ಪಕ್ಷಗಳಲ್ಲಿ ಹಲವು ಹಿರಿಯರನ್ನು ಈ ಬಾರಿ ದೂರ ಇಡಲಾಗಿದ್ದು, ಹೊಸಬರಿಗೆ ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್ ಪಟ್ಟಿ ಅಂತಿಮಗೊಳಿಸಲು ರಾಹುಲ್ ಗಾಂಧಿ ಜಿ.ಪರಮೇಶ್ವರ್ ಅವರ ನೆರವು ಪಡೆದಿದ್ದಾರೆನ್ನಲಾಗಿದೆ.

ಕಾಂಗ್ರೆಸ್ ನ ಘಟಾನುಘಟಿಗಳಿಗೆ ಕೊಕ್:

ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರಕಾರದಲ್ಲಿ ಈ ಬಾರಿ ದಿನೇಶ್ ಗುಂಡೂರಾವ್, ಎಂಬಿ ಪಾಟೀಲ್ ಬಬಲೇಶ್ವರ್, ಈಶ್ವರ್ ಖಂಡ್ರೆ, ಎಸ್ ಆರ್ ಪಾಟೀಲ್, ರಾಮಲಿಂಗಾ ರೆಡ್ಡಿ, ಎಂ ಕೃಷ್ಣಪ್ಪ, ಹೆಚ್ ಕೆ ಪಾಟೀಲ್, ಸತೀಶ್ ಜಾರಕಿಹೊಳಿ ಗೆ ಸಚಿವ ಸ್ಥಾನದಿಂದ ಕೊಕ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಜೆಡಿಎಸ್:

Advertisement

ಜೆಡಿಎಸ್ ನಲ್ಲಿ ಹಿರಿಯ ಶಾಸಕ, ಮಾಜಿ ಸಚಿವ ಬಸವರಾಜ್ ಹೊರಟ್ಟಿ, ಎಟಿ ರಾಮಸ್ವಾಮಿ, ಎಚ್.ವಿಶ್ವನಾಥ್, ಬಿಎಂ ಫಾರೂಕ್ ಅವರು ಸಚಿವ ಸ್ಥಾನದಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾರೆನ್ನಲಾಗಿದೆ.

ಬುಧವಾರ ಮಧ್ಯಾಹ್ನ 2.12ಕ್ಕೆ ರಾಜಭವನದ ಗಾಜಿನಮನೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ನೂತನ ಸಚಿವರು ಪದಗ್ರಹಣ ಮಾಡಲಿದ್ದು, ರಾಜ್ಯಪಾಲ ವಜೂಭಾಯ್ ವಾಲಾ ಪ್ರಮಾಣವಚನ ಬೋಧಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next