ಸುಳ್ಯ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಬಡವರಿಗೆ ಮನೆ ಕೊಡುವ ಕೆಲಸ ಮಾಡಲಾಗಿತ್ತು. ಕಾಂಗ್ರೆಸ್ ಸರಕಾರದ ಅವಧಿಯ ಬಳಿಕ ಒಂದೇ ಒಂದು ಮನೆ ಬಿಜೆಪಿ ಕೊಟ್ಟಿಲ್ಲ. ಬಿಜೆಪಿ ಭಾವನಾತ್ಮಕ ವಿಚಾರಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಉದನೆ ಸೇತುವೆ ನಿರ್ಮಾಣಕ್ಕೆ ಶಿಲಾ ನ್ಯಾಸ ಮಾಡಿದ್ದ ಬಿ.ರಮಾನಾಥ ರೈ ಹಾಗೂ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಅವರನ್ನು ಉದನೆ ಸೇತುವೆ ಹೋರಾಟ ಸಮಿತಿ ವತಿಯಿಂದ ಉದನೆಯಲ್ಲಿ ಸಮ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕೆಪಿಸಿಸಿ ಸದಸ್ಯರಾದ ಡಾ| ರಘು ಬೆಳ್ಳಿಪ್ಪಾಡಿ, ಕೃಷ್ಣಪ್ಪ, ಜಿ.ಪಂ. ಮಾಜಿ ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ತಾ.ಪಂ. ಮಾಜಿ ಸದಸ್ಯರಾದ ಉಷಾ ಅಂಚನ್, ಆಶಾ ಲಕ್ಷ್ಮಣ ಗುಂಡ್ಯ, ಶಿರಾಡಿ ಗ್ರಾ.ಪಂ. ಅಧ್ಯಕ್ಷೆ ವಿನೀತಾ, ಉಪಾಧ್ಯಕ್ಷ ಕಾರ್ತಿಕೇಯನ್, ಸದಸ್ಯರಾದ ಎಂ.ಕೆ.ಪೌಲೋಸ್, ಸಣ್ಣಿಜಾನ್, ಪ್ರಮುಖರಾದ ಪೂವಪ್ಪ ಕರ್ಕೇರ ಪಾಲೇರಿ, ಸೆಬಾಸ್ಟಿನ್ ಕಳಪ್ಪಾರು, ಶಿವಪ್ಪ ಗೌಡ ಪುತ್ತಿಗೆ, ಮಾಧವ ಪೂಜಾರಿ, ಕೃಷ್ಣಪ್ಪ ಗೌಡ ಪರಾರಿ, ದೇವಿಪ್ರಸಾದ್ ಪರಾರಿ, ವಿಜೇಶ್ ಉದನೆ, ಮಾಧವ ಗೌಡ ಬೆಳ್ಳಾರೆ, ದಯಾನಂದ ಪೂಜಾರಿ ಕಡ್ಯ, ಸತೀಶ್ ಗೌಡ ಕಡ್ಯ, ಗಂಗಾಧರ ಗೌಡ, ಬಾಲಣ್ಣ ಗೌಡ, ತಿಮ್ಮಪ್ಪ ಗೌಡ, ಓರ್ಕಳ ಬೇಬಿ ಗೌಡ, ಸುಂದರ ಪೂಜಾರಿ, ಜನಾರ್ದನ ಪೂಜಾರಿ, ಪೂವಣಿ ಗೌಡ, ತಿಮ್ಮಪ್ಪ ಗೌಡ ಡಿ.ಆರ್, ಸಣ್ಣಿ ಅಡ್ಡಹೊಳೆ, ಬೆನ್ನಿ ಸೋಣಂದೂರು, ವಸಂತ ಗೌಡ ಮತ್ತಿತರರು ಉಪಸ್ಥಿತರಿದ್ದರು. ಹೋರಾಟ ಸಮಿತಿ ಅಧ್ಯಕ್ಷ ದಿವಾಕರ ಗೌಡ ಸ್ವಾಗತಿಸಿದರು. ಗ್ರಾ.ಪಂ. ಸದಸ್ಯೆ ಮೈತ್ರಿ ಕೆಳಗಿನಮನೆ ವಂದಿಸಿದರು.