Advertisement
ಸುದ್ದಿಗಾರೊಂದಿಗೆ ಮಾಡನಾಡಿದ ಈಶ್ವರಪ್ಪ ಅವರು, ಆಡಳಿತ ವಿರೋಧಿ ಸುನಾಮಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ,”ಚಾಮುಂಡೇಶ್ವರಿ ಸುನಾಮಿಯಲ್ಲಿ ಸಿದ್ದರಾಮಯ್ಯನವರೇ ಕೊಚ್ಚಿ ಹೋದರು,ಉಪಚುನಾವಣೆ ಸುನಾಮಿಯಲ್ಲಿ ಕಾಂಗ್ರೆಸ್, ಸಿಂದಗಿಯಲ್ಲಿ ಸಹ ಈಗ ಕೊಚ್ಚಿ ಹೋಗಿದ್ದಾರೆ. ಎಲ್ಲೋ ಒಂದು ಚೂರು ಹಾನಗಲ್ ನಲ್ಲಿ ಮುಳುಗುವ ಹಂತದಲ್ಲಿ ಕಡ್ಡಿ ಹಿಡಿದು ಬದುಕುವ ಪ್ರಯತ್ನ ಮಾಡಿದ್ದಾರೆ.ಅದೇ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿಗರಿಗೆ ಸುನಾಮಿ ಎನಿಸಿಬಿಟ್ಟಿದೆ” ಎಂದರು..
ಪ್ರಾದೇಶಿಕ ಪಕ್ಷಗಳಿಗೆ ಯಾವುದೇ ಸ್ಥಾನ ಇಲ್ಲ ಎಂದು ಮೊನ್ನೆ ನಡೆದ ಚುನಾವಣೆಯಲ್ಲಿ ಗೊತ್ತಾಗಿದೆ.ಬಿಜೆಪಿ ದೊಡ್ಡ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುತ್ತಿದೆ.ಕಾಂಗ್ರೆಸ್ ಕೂಡ ಪ್ರಾದೇಶಿಕ ಪಕ್ಷವಾಗಿ ಇಳಿಯುತ್ತಿದ್ದು, ಕುಗ್ಗುತ್ತಿದೆ” ಎಂದರು. ಸಿಎಂ ಬೊಮ್ಮಾಯಿ ಅವರ ತವರು ಜಿಲ್ಲೆಯ ಕ್ಷೇತ್ರದಲ್ಲಿ ಸೋತಿದ್ದಾರೆ, ನಾನು ಒಪ್ಪುತ್ತೇನೆ,ಚಾಮುಂಡೇಶ್ವರಿಯಲ್ಲಿ ಸ್ವತಃ ಸಿಎಂ ಅಗಿದ್ದ ಸಿದ್ದರಾಮಯ್ಯ ನವರೇ ಸೋತಿದ್ದರಲ್ಲಾ? ಜೆ.ಹೆಚ್.ಪಟೇಲ್ ಸಿಎಂ ಅಗಿ ಚೆನ್ನಗಿರಿ ಕ್ಷೇತ್ರದಲ್ಲಿ ಸೋತಿದ್ದರು ಅಲ್ಲವೇ ?
ಇದಕ್ಕೆಲ್ಲಾ ಕಾಂಗ್ರೆಸ್ ನವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದರು.
Related Articles
ಗೆಲುವೇ ಬಿಜೆಪಿಯ ತೀರ್ಮಾನ. ಜನ ಕೂಡ ನಮ್ಮನ್ನು ಬೆಂಬಲಿಸುತ್ತಿದ್ದಾರೆ.ಮುಳುಗುವ ಪಕ್ಷಕ್ಕೆ ಹಾನಗಲ್ ಜನ ಜೀವ ಕೊಟ್ಟಿದ್ದಾರೆ. ದಯೆ ತೋರಿಸಿದ್ದಾರೆ” ಎಂದರು.
Advertisement
”ಸಿದ್ದರಾಮಯ್ಯ ಹೇಳಿದ ಪ್ರತಿಯೊಂದು ಕೂಡ ಸುಳ್ಳಾಗುತ್ತದೆ, ಮೊದಲು ಅವರು ಅವರ ಪಕ್ಷದ ಗುಂಪುಗಾರಿಕೆ ಸರಿ ಮಾಡಿಕೊಳ್ಳಲಿ” ಎಂದರು.
”ಕಾಂಗ್ರೆಸ್ಸಿಗ್ಗರ ಜಾತಿ ರಾಜಕಾರಣ, ಅಶ್ಲೀಲ ಪದಗಳ ಬಳಕೆ, ಜಾತಿ ಜಾತಿಯ ನಡುವೆ ಬಿರುಕು ಮತ್ತು ಮುಸ್ಲಿಂರನ್ನು ಎತ್ತಿ ಕಟ್ಟುವ ಕೆಲಸ.ದ ನಡುವೆ ನಾವು 2 ಕ್ಷೇತ್ರದಲ್ಲೂ ಅಭಿವೃದ್ಧಿ ಕಾರ್ಯಗಳ ಮುಂದಿಟ್ಟು ಜನರ ಮುಂದೆ ಹೋಗಿದ್ದೇವೆ.ಕಾರ್ಯಕರ್ತರ ಸಂಘಟನೆ, ಮೋದಿ ನೇತೃತ್ವದ ಕಾರ್ಯ ಮುಂದಿಟ್ಟು ಚುನಾವಣೆ ಮಾಡಿದ್ದೆವು.ಸಿಂಧಗಿಯಲ್ಲಿ ನಿರೀಕ್ಷೆಗೂ ಮೀರಿ 31 ಸಾವಿರ ಮತಗಳ ಅಂತರದಿಂದ ಬಿಜೆಪಿ ಗೆದ್ದಿದೆ.
ಹಾನಗಲ್ ನಲ್ಲಿ ನಾವು ನಿರೀಕ್ಷೆ ಮಾಡಿರಲಿಲ್ಲ. ಕಡಿಮೆ ಅಂತರದಲ್ಲಿ ಸೋತಿದ್ದೆವೆ.ಮುಂಬರುವ ದಿನದಲ್ಲಿ ಸೋಲಿನ ಬಗ್ಗೆ ಚರ್ಚೆ ಮಾಡಿ, ಪರಿಹಾರ ಕಂಡುಕೊಳ್ಳುತ್ತೇವೆ” ಎಂದರು. ಸಿಂದಗಿಯಲ್ಲಿ ಕಾಂಗ್ರೆಸ್ ಎರಡನೇ ಸ್ಥಾನ ಪಡೆದಿದೆ ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಯಾರೋ ಗೌಡ ಹೇಳುತ್ತಾನಂತೆ . ನನ್ನ ಹತ್ತಿರ 1 ಸಾವಿರ ಎಕರೆ ಇದೆ ಎಂದು. ಗೌಡನ ಮನೆಯಲ್ಲಿ ಕೆಲಸ ಮಾಡೋನು ಗೌಡರದ್ದು ಹಾಗೂ ನನ್ನದು ಸೇರಿ ಸಾವಿರದೊಂದು ಎಕರೆ ಇದೆ ಎಂದು.ಡಿಕೆಶಿ ಹೇಳುತ್ತಿರುವುದು ಅದೇ ರೀತಿಯಲ್ಲಿದೆ” ಎಂದು ಲೇವಡಿ ಮಾಡಿದರು. ”ಎರಡನೇ ಸ್ಥಾನಕ್ಕೆ ಹೋದರೂ 31 ಸಾವಿರ ಲೀಡ್ ಬಗ್ಗೆ ಮಾತನಾಡುತ್ತಿಲ್ಲ, ಯಾವುದೇ ಚುನಾವಣೆಯಲ್ಲಿ ಇಬ್ಬರೇ ಸ್ಫರ್ಧೆ ಮಾಡಿದಾಗ ನಾನು 2ನೇ ಸ್ಥಾನ ಬಂದೆ ಎಂದಾಗಾಯ್ತು. ಹೀಗೆ ಡಿ.ಕೆ.ಶಿವಕುಮಾರ್ 2ನೇ ಸ್ಥಾನಕ್ಕೆ ಸಂತೃಪ್ತಿ ಪಟ್ಟುಕೊಳ್ಳುತ್ತಿದ್ದಾರೆ.ಮುಂಬರುವ ಚುನಾವಣೆಯಲ್ಲಿ 224 ಕ್ಷೇತ್ರದಲ್ಲೂ ಬಿಜೆಪಿ ಗೆಲ್ಲಲು ಸುಸಂಘಟಿತವಾಗಿ ಪ್ರಯತ್ನ ಮಾಡುತ್ತೇವೆ” ಎಂದರು.