Advertisement

ನನ್ನ ರಕ್ತವೇ ಕಾಂಗ್ರೆಸ್‌ ಮತ್ತೆ ಆ ಪಕ್ಷಕ್ಕೆ ಸೇರುತ್ತೇನೆ: ಎಚ್‌. ವಿಶ್ವನಾಥ್‌

12:51 PM Jan 12, 2023 | Team Udayavani |

ರಾಯಚೂರು: ನಾನೀನ ಯಾವ ಪಕ್ಷ ದಲ್ಲೂ ಇಲ್ಲದ ಸ್ವತಂತ್ರ ವ್ಯಕ್ತಿ. ಆದರೆ ನನ್ನ ರಕ್ತದಲ್ಲೇ ಕಾಂಗ್ರೆಸ್‌ ಇದೆ. ಆದ್ದರಿಂದ ಮತ್ತೆ ಕಾಂಗ್ರೆಸ್‌ ಸೇರುತ್ತೇನೆ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಅವರ ಶಕ್ತಿಯನ್ನು ಅಲ್ಲಗಳೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಾಹಿತ್ಯ ಕ್ಷೇತ್ರದ ಎಂಎಲ್ಸಿಯೇ ವಿನಾ ಬಿಜೆಪಿ ಎಂಎಲ್‌ಸಿ ಅಲ್ಲ. ರಾಜ್ಯಪಾಲರು ಬಿಜೆಪಿಯಿಂದ ರಾಜೀನಾಮೆ ಪಡೆದು ನಾಮನಿರ್ದೇಶನ ಮಾಡಿದ್ದಾರೆ. ರಾಜಕಾರಣ ಒಂದು ಕುಟುಂಬವಿದ್ದಂತೆ. ಅದರಲ್ಲಿ ಅಣ್ಣ-ತಮ್ಮ ಮುನಿಸಿಕೊಂಡು ಹೊರ ಹೋಗುವುದು, ಮರಳಿ ಬರುವುದು ಸಾಮಾನ್ಯ ಎಂದರು.

ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್‌ ಹಾಗೂ ನನಗೆ ಬಿಜೆಪಿಯಿಂದ ಅನ್ಯಾಯವಾಗಿದೆ. ನನ್ನ ಸೋಲಿಗೂ ವಿಜಯೇಂದ್ರ ಬಹಳಷ್ಟು ಶ್ರಮಿಸಿದ್ದಾರೆ ಎಂದು ಹೇಳಿದರು.

ಸೂರ್ಯ ಪಥ ಬದಲಿಸುವ ಉತ್ತರಾಯಣ ಪುಣ್ಯ ಕಾಲದ ಮುನ್ನ ಮಂತ್ರಾಲಯದ ರಾಯರ ದರ್ಶನ ಪಡೆದಿದ್ದೇನೆ. ಇಂಥ ಹೊತ್ತಲ್ಲಿ ನಾನು ಬದಲಾವಣೆ ಮಾಡು ತ್ತಿದ್ದೇನೆ. ಬಾಂಬೆ ಬಾಯ್ಸ ಪುಸ್ತಕದಲ್ಲಿ ಏನಿದೆ ಎಂಬುದು ಬಿಡುಗಡೆಯಾದ ಬಳಿಕ ಗೊತ್ತಾಗಲಿದೆ ಎಂದರು.

ಸ್ಯಾಂಟ್ರೋ ರವಿ ಗೊತ್ತಿಲ್ಲ
ಸ್ಯಾಂಟ್ರೊ ರವಿ ಯಾರು ಎಂಬುದು ನನಗೆ ತಿಳಿದಿಲ್ಲ. ಕುಮಾರಸ್ವಾಮಿ ಸುಮ್ಮನೆ ಗಾಳಿಪಟ ಹಾರಿಸಿದ್ದಾರೆ. ಅವರಿಗೆ ಸ್ಯಾಂಟ್ರೋ ರವಿ ಚೆನ್ನಾಗಿ ಗೊತ್ತಿದೆ. ಕುಮಾರಸ್ವಾಮಿ ಕೂಡ ರಾಜಕೀಯಕ್ಕೆ ಬರುವ ಮುನ್ನ ಸಿನೆಮಾ ಕ್ಷೇತ್ರದಲ್ಲಿದ್ದರು. ಎರಡು ಬಾರಿ ಸಿಎಂ ಆದವರು. ಅಂಥ ಅನುಭವಿ ರಾಜಕಾರಣಿಗಳು ಹಾರಿಕೆ ವಿಚಾರಗಳನ್ನು ಬಿಡುವುದು ಶೋಭೆ ತರುವುದಿಲ್ಲ ಎಂದರು.

Advertisement

ಮೀಸಲಾತಿ ವ್ಯವಸ್ಥೆ ಬದಲಾಗಬೇಕು
ಮೀಸಲಾತಿಯನ್ನು ಬಿಜೆಪಿ ಸರಕಾರ ಕಲುಷಿತಗೊಳಿಸಿದೆ. ತಮಟೆ ಬಾರಿಸುವವನ ಮಗ, ಖರ್ಗೆ ಮತ್ತು ಮುನಿಯಪ್ಪ ಮಗನಿಗೂ ಒಂದೇ ರೀತಿಯ ಮೀಸಲಾತಿ ಸರಿಯಲ್ಲ. ಮೀಸಲಾತಿ ಸಾಮಾಜಿಕ, ಆರ್ಥಿಕತೆ ಆಧಾರದಲ್ಲಿ ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next