Advertisement

ರಾಹುಲ್ ಹೇಳಿಕೆಯೇ “ಪಾಕ್ ಗೆ ಬಂಡವಾಳ”-ವಿಶ್ವಸಂಸ್ಥೆಗೆ ದೂರು; ಉಲ್ಟಾ ಹೊಡೆದ ಕಾಂಗ್ರೆಸ್!

11:16 AM Aug 29, 2019 | Nagendra Trasi |

ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಕಾಂಗ್ರೆಸ್ ಪಕ್ಷ ದಿಢೀರ್ ಯೂಟರ್ನ್ ಹೊಡೆದಿದ್ದಾರೆ. ಅದಕ್ಕೆ ಕಾರಣವಾಗಿದ್ದು ಪಾಕಿಸ್ತಾನ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೆಸರನ್ನು ಉಲ್ಲೇಖಿಸಿದ್ದು!

Advertisement

ರಾಹುಲ್ ಗಾಂಧಿ ಮೊದಲು ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 370ನೇ ವಿಧಿಯನ್ನು ರದ್ದುಪಡಿಸಿದ್ದನ್ನು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷ ಬಲವಾಗಿ ವಿರೋಧಿಸಿತ್ತು. ಅಲ್ಲದೇ ಕಣಿವೆ ರಾಜ್ಯದಲ್ಲಿ ಹಿಂಸಾಚಾರ, ಜನಜೀವನ ಹದಗೆಟ್ಟಿರುವುದಾಗಿ ಆರೋಪಿಸಿತ್ತು.

ರಾಹುಲ್ ಆರೋಪವನ್ನೇ ಬಂಡವಾಳ ಮಾಡಿಕೊಂಡ ಪಾಕ್!

ಜಮ್ಮು-ಕಾಶ್ಮೀರದಲ್ಲಿ ಜನರು ತೀವ್ರ ಹಿಂಸಾಚಾರಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದ ರಾಹುಲ್ ಗಾಂಧಿ ಹೇಳಿಕೆಯನ್ನೇ ಪಾಕಿಸ್ತಾನ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿತ್ತು! ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂಬ ರಾಹುಲ್ ಹೇಳಿಕೆ ಹಾಗೂ ಕಣಿವೆ ರಾಜ್ಯದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ ಎಂಬ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಆರೋಪವನ್ನೂ ಪಾಕ್ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ಬಳಸಿಕೊಂಡಿತ್ತು.!

Advertisement

ಡ್ಯಾಮೇಜ್ ಕಂಟ್ರೋಲ್ ಗೆ ಮುಂದಾದ ಕಾಂಗ್ರೆಸ್:

ಜಮ್ಮು-ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ರಾಹುಲ್ ಗಾಂಧಿ ಹೆಸರನ್ನು ಬಳಸಿಕೊಂಡಿದ್ದರ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್ ಯೂಟರ್ನ್ ಹೊಡೆದಿದ್ದು, ಪಕ್ಷಕ್ಕಾಗುವ ನಷ್ಟವನ್ನು ಸರಿದೂಗಿಸಲು ಮುಂದಾಗಿದೆ.

ಪಾಕಿಸ್ತಾನ ಮತ್ತೆ ಸುಳ್ಳುಗಳ ಮೂಲಕ ತಪ್ಪು ಮಾಹಿತಿಯನ್ನು ಹರಡಲು ಮುಂದಾಗಿದೆ. ತನ್ನ ಸರಣಿ ಸುಳ್ಳುಗಳನ್ನು ಮುಚ್ಚಿಕೊಳ್ಳಲು ಪಾಕಿಸ್ತಾನ ಸರಕಾರ ರಾಹುಲ್ ಗಾಂಧಿ ಅವರ ಹೆಸರನ್ನು ಎಳೆದು ತಂದಿದೆ. ಪಾಕಿಸ್ತಾನ ಸುಳ್ಳು ಸುದ್ದಿಯ ಮೂಲಕವೇ ತನ್ನ ಸುಳ್ಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಜಮ್ಮು-ಕಾಶ್ಮೀರ, ಲಡಾಖ್ ಬಗ್ಗೆ ಈ ಜಗತ್ತಿನಲ್ಲಿ ಯಾರೂ ಅನುಮಾನ ಪಡುವುದೇ ಬೇಡ. ಯಾಕೆಂದರೆ ಜಮ್ಮು-ಕಾಂಗ್ರೆಸ್ ಭಾರತದ ಅವಿಭಾಜ್ಯ ಅಂಗ. ಹೀಗೆ ಸುಳ್ಳು ಹೇಳುವ ಮೂಲಕ ಪಾಕಿಸ್ತಾನ ಗೊಂದಲ ಸೃಷ್ಟಿಸುವುದು ಬೇಕಾಗಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮಾಧ್ಯಮ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಅಲ್ಲದೇ ಪಿಓಕೆ, ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಗಳಲ್ಲಿ ಮಾನವಹಕ್ಕುಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಪಾಕಿಸ್ತಾನ ವಿಶ್ವಕ್ಕೆ ಉತ್ತರ ಕೊಡಬೇಕಾಗಿದೆ. ಸುಮಾರು 70 ಲಕ್ಷ ಮೋಹಾಜಿರ್ ಗಳಿಗೆ ಕಿರುಕುಳ ನೀಡಿದ, 25 ಸಾವಿರಕ್ಕೂ ಅಧಿಕ ಪಾಕ್ ಪಡೆಯನ್ನು ಹತ್ಯೆಗೈದ ಬಗ್ಗೆ ಪಾಕಿಸ್ತಾನ ವಿವರಣೆ ನೀಡಬೇಕಾಗಿದೆ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next