Advertisement
ಈ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್- ಜೆಡಿಎಸ್ ಇತ್ತೀಚೆಗೆ ಮೈತ್ರಿ ಮಾಡಿಕೊಂಡಿದ್ದೆವು. ಈಗಲೂ ಅಂತಹ ಅವಕಾಶವಿದೆ. ದೇವೇಗೌಡರು ಹಿಂಬಾಗಿಲ ಮೂಲಕ ಹೋದವರಲ್ಲ, ಅವರೊಬ್ಬ ಅಪ್ಪಟ ರೈತ ಹೋರಾಗಾರ. ಹೈಕಮಾಂಡ್ ಅವರಿಗೆ ಅವಕಾಶ ಮಾಡಿಕೊಟ್ಟರೆ ಉತ್ತಮ. ಅವರೊಬ್ಬ ಪ್ರಧಾನಿಯಾಗಿದ್ದವರು. ಅಂತವರಿಗೆ ನಮ್ಮ ಹೈಕಮಾಂಡ್ ಅವಕಾಶ ನೀಡಬೇಕು ಎಂದು ಮಾಜಿ ಪ್ರಧಾನಿಯ ರಾಜ್ಯಸಭೆ ಪ್ರವೇಶಕ್ಕೆ ಮುನಿಯಪ್ಪ ಸಮರ್ಥಿಸಿದರು.
Related Articles
Advertisement
30 ವರ್ಷಗಳಿಂದ ದುಡಿದವರಿಗೆ ಅವಕಾಶ ಮಾಡಿಕೊಡಬೇಕು. ಸಿದ್ದರಾಮಯ್ಯ ಬೇರೆ ಅಲ್ಲ,ಡಿಕೆ ಶಿವಕುಮಾರ್ ಬೇರೆ ಅಲ್ಲ. ಇಬ್ಬರೂ ಸೇರಿಯೇ ತೀರ್ಮಾನ ತೆಗೆದುಕೊಳ್ಳಬೇಕು. ತೀರ್ಮಾನ ಮಾಡುವ ವೇಳೆ ರಾಜ್ಯದ ಜನ ನೋಡುತ್ತಿರುತ್ತಾರೆ. ಪಕ್ಷ ದ್ರೋಹಿಗೆ ಟಿಕೆಟ್ ಕೊಟ್ಟರೆ ಜನ ಛೀಮಾರಿ ಹಾಕುತ್ತಾರೆ ಎಂದ ಅವರು ಜಾತ್ಯಾತೀತ ಪಕ್ಷಗಳ ಸಹಾಯ ಅನಿವಾರ್ಯ. ಒಂದಲ್ಲ ಒಂದು ಕಾರಣಕ್ಕೆ ಉತ್ತಮ, ದೇವೇಗೌಡರಿಗೆ ಅವಕಾಶ ಮಾಡಿಕೊಡಬೇಕು. ಖರ್ಗೆ, ದೇವೇಗೌಡ ಇಬ್ಬರು ಹಿರಿಯ ನಾಯಕರು. ಇಬ್ಬರು ರಾಜ್ಯಸಭೆಯಲ್ಲಿ ಇದ್ದರೆ ಉತ್ತಮ ಎಂದರು.
ಕೋವಿಡ್-19 ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಪ್ರತಿಪಕ್ಷವಾಗಿ ನಾವು ಸಂಪೂರ್ಣ ಸಹಕಾರ ಕೊಟ್ಟಿದ್ದೇವೆ. ಕೇಂದ್ರ ರೈತರ ಸಾಲಮನ್ನಾ ಮಾಡಲಿಲ್ಲ. ರೈತರು ಬೆಳೆದ ಬೆಳೆಗೆ ಬೆಲೆಯಿಲ್ಲ. ಸರ್ಕಾರ ಹಾಪ್ ಕಾಮ್ಸ್ ಮೂಲಕ ಮಾರಾಟಮಾಡಬೇಕಿತ್ತು. ಆದರೆ ಸರ್ಕಾರ ಗಮನಹರಿಸಲಿಲ್ಲ ಎಂದರು.