Advertisement
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಉಸ್ತುವಾರಿ ಸುರ್ಜೇವಾಲಾ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಡಿಸಿಎಂ ಪರಮೇಶ್ವರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಈ ಆರೋಪ ಮಾಡಿದ್ದು, ಅಶ್ವತ್ಥನಾರಾಯಣ ಒಡೆತನದ ಹೊಂಬಾಳೆ ಕಂಪನಿ ಮೂಲಕ ಈ ದ್ರೋಹ ಮಾಡಲಾಗುತ್ತಿದೆ. ಅವರು ಈ ಹಗರಣದ ಪಿತಾಮಹ ಎಂದು ಅಶ್ವತ್ಥನಾರಾಯಣ ವಿರುದ್ಧ ಶಿವಕುಮಾರ್ ಹರಿಹಾಯ್ದಿದ್ದಾರೆ.
Related Articles
Advertisement
ಮತದಾರರ ಮೊಬೈಲ್ ನಂಬರ್, ಅವರ ಅಡ್ರೆಸ್, ಅವರ ವೈಯುಕ್ತಿಕ ಮಾಹಿತಿ ಎಲ್ಲವನ್ನೂ ಸಂಗ್ರಹಿಸಲಾಗಿದೆ. ಫೇಕ್ ಐಡೆಂಟಿಟಿ ಕಾರ್ಡ್ ಇಟ್ಟುಕೊಂಡು ಸಂಗ್ರಹಿಸಿದ್ದಾರೆ. ಇದರ ಕಿಂಗ್ ಪಿನ್ ಗಳು ಕೃಷ್ಣಪ್ಪ, ರವಿಕುಮಾರ್. ಇವರು ಮಾಜಿ ಡಿಸಿಎಂ, ಹಾಲಿ ಸಚಿವರ ಆಪ್ತರು. ಮಲ್ಲೇಶ್ವರಂನ ಶಾಸಕರ ಜೊತೆ ಗುರುತಿಸಿ ಕೊಂಡಿದ್ದಾರೆ. ಬರ್ತ್ ಡೇ ಪಾರ್ಟಿಯಲ್ಲಿ ಅವರ ಜೊತೆ ಕಿಂಗ್ ಪಿನ್ ಇದ್ದಾರೆ ಎಂದು ಆರೋಪಿಸಿದರು.
ಈ ಹಗರಣಕ್ಕೆ ಅವಕಾಶ ನೀಡಿದ ಸಿಎಂ ಬೊಮ್ಮಾಯಿ ಮೊದಲು ರಾಜೀನಾಮೆ ನೀಡಬೇಕು. ಕೂಡಲೇ ಬೊಮ್ಮಾಯಿಯವರನ್ನು ಬಂಧಿಸಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.