ರಾಯಭಾಗ/ಅಥಣಿ/ಸವದತ್ತಿ: ಕಾಂಗ್ರೆಸ್ ಈಗ ಆಡಳಿತ ನಡೆಸುತ್ತಿರುವ ಯಾವುದೇ ರಾಜ್ಯಗಳಲ್ಲೂ ಗ್ಯಾರಂಟಿ ಗಳನ್ನು ಈಡೇರಿಸಿಲ್ಲ. ಕರ್ನಾಟಕದಲ್ಲೂ ಅವರ ಗ್ಯಾರಂಟಿಗಳು ಕೆಲಸ ಮಾಡು ವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಬೆಳಗಾವಿ ಜಿಲ್ಲೆಯ ಅಥಣಿ, ರಾಯಭಾಗ ಹಾಗೂ ಸವದತ್ತಿಯಲ್ಲಿ ಶನಿವಾರ ಬಿಜೆಪಿ ಚುನಾವಣ ಪ್ರಚಾರ ಸಭೆಯನ್ನುದ್ದೇಶಿಸಿ ಮಾತ ನಾಡಿದ ಅವರು, ಗುಜರಾತ್, ಉತ್ತರಪ್ರದೇಶ, ತ್ರಿಪುರಾ, ಮಣಿಪುರ, ನಾಗಾಲ್ಯಾಂಡ್‌ಗಳಲ್ಲಿ ರಾಹುಲ್ ಬಾಬಾರ ಗ್ಯಾರಂಟಿಗಳು ಜನರನ್ನು ತಲುಪಿಲ್ಲ. ಆದರೆ ಬಿಜೆಪಿಯ ಡಬಲ್ ಎಂಜಿನ್ ಸರಕಾರ ರಾಜ್ಯದಲ್ಲಿ ಅಭಿವೃದ್ಧಿ-ಸುರಕ್ಷೆಯ ಜತೆಗೆ ಜನತೆಗೆ ಕುಡಿಯುವ ನೀರು, ಅಡುಗೆ ಅನಿಲ, ವಿದ್ಯುತ್, ಶೌಚಾಲಯ, ವಿಮೆ, ಉಚಿತ ಅಕ್ಕಿ ನೀಡಿದೆ ಎಂದರು.
ಪ್ರಧಾನಿ ಮೋದಿ ನೇತೃತ್ವದಲ್ಲಿ ಉತ್ತರ ಕರ್ನಾಟಕವನ್ನು ಅತ್ಯಂತ ವಿಕಸಿತ ಪ್ರದೇಶ ವನ್ನಾಗಿಸುತ್ತೇವೆ. ಅಂದಿನ ಕಾಂಗ್ರೆಸ್ ಸರಕಾರ ರೈತರಿಗೆ ಅನ್ಯಾಯವೆಸಗಿತು. ಗೋವಾ, ಮಹಾರಾಷ್ಟ್ರ, ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾ ರವಿದ್ದರೂ ಮಹದಾಯಿ ನೀರು ಪಡೆಯಲಾಗಲಿಲ್ಲ. 2007ರಲ್ಲಿ ಸೋನಿಯಾ ಗಾಂಧಿ ಅವರು ಮಹದಾಯಿ ನೀರನ್ನು ಕರ್ನಾಟಕಕ್ಕೆ ನೀಡದಂತೆ ಆದೇಶಿಸಿದ್ದರು. ಕೊನೆಗೆ ಮೋದಿ ಅವರೇ ರಾಜ್ಯಕ್ಕೆ ನೀರು ಹರಿಸಬೇಕಾಯಿತು ಎಂದರು.
ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವಕುರಿತು ಗ್ಯಾರಂಟಿ ನೀಡುವ ಕಾಂಗ್ರೆಸ್ ಶ್ರೀರಾಮ, ಬಜರಂಗಬಲಿಯ ಜನನ ಪ್ರಮಾಣಪತ್ರ ಕೇಳುತ್ತಿದೆ. ಇಡೀ ದೇಶವೇ ಹನುಮ ಜಯಂತಿ ಆಚರಿಸುತ್ತಿ ರುವುದು ಅವರಿಗೆ ತಿಳಿದಿಲ್ಲ ಎಂದು ಟೀಕಿಸಿದರು.
ಇಡೀ ರಾಜ್ಯದ ಚುನಾವಣೆಯೇ ಬೇರೆ. ಅಥಣಿ ಚುನಾವಣೆಯೇ ಬೇರೆ. ಲಕ್ಷ್ಮಣ ಸವದಿ ಸೋತಿ ದ್ದರೂ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿ ಡಿಸಿಎಂ ಮಾಡಿದ್ದೆವು. ಆದರೆ ಸ್ವಾರ್ಥಕ್ಕಾಗಿ ಬಿಜೆಪಿಗೆ ಮೋಸ ಮಾಡಿರುವ ಅವರನ್ನು ಈ ಬಾರಿಯೂ ಸೋಲಿಸುವಂತೆ ಶಾ ಕರೆ ನೀಡಿದರು.