ಬೆಂಗಳೂರು : ಕಾಂಗ್ರೆಸ್ ಐದು ಗ್ಯಾರಂಟಿ ಗಳನ್ನು ಘೋಷಿಸಿದ ಬೆನ್ನಲ್ಲೇ ಅನ್ನಭಾಗ್ಯ ಯೋಜನೆಯ ಕುರಿತು ‘ಅಕ್ಕಿ ನಿಮ್ದು, ಚೀಲ ನಮ್ದು’ ಎಂದು ಟ್ವೀಟ್ ಮಾಡಿದೆ.
”ಪ್ರಮಾಣ ಮಾಡಿದ 10 ಕೆಜಿ ಅಕ್ಕಿಯಲ್ಲಿ, ಕನಿಷ್ಠ 1 ಕೆಜಿಯನ್ನೂ ರಾಜ್ಯದಿಂದ ಭರಿಸಲು ಸಿದ್ಧವಿಲ್ಲದ ಕಾಂಗ್ರೆಸ್ ಸರ್ಕಾರ, ‘ನೀಡುವ ಅಕ್ಕಿಯ ಪ್ರಮಾಣವನ್ನು ಹೆಚ್ಚಳ ಮಾಡಿ’ ಎಂದು ಕೇಂದ್ರ ಸರ್ಕಾರವನ್ನು ಗೋಗರೆಯಲು ಈಗಾಗಲೇ ಶುರು ಮಾಡಿದೆ. ಕೇಂದ್ರ ಸರ್ಕಾರದಿಂದ ಬರುವ ಅಕ್ಕಿಯನ್ನು ತಮ್ಮ ಹೆಸರಿನೊಂದಿಗೆ ಚೀಲದಲ್ಲಿ ಹಾಕಿ ವಿತರಿಸುವುದರಲ್ಲಿ ಶ್ರೀಯುತ ಸಿದ್ದರಾಮಯ್ಯನವರಿಗೆ ಐದು ವರ್ಷಗಳ ಅನುಭವವಿದೆ!
ಇದು “ಅಕ್ಕಿ ನಿಮ್ದು, ಚೀಲ ನಮ್ದು” ಎಂಬ ಮತ್ತೊಂದು ವಂಚನೆಯಷ್ಟೇ, ರಾಜ್ಯದ ಜನತೆಯ ಹಿತ ಕಾಯುವ ಉದ್ದೇಶದ ಲವಲೇಶವೂ ಇಲ್ಲ.” ಎಂದು ಟ್ವೀಟ್ ಮಾಡಿದೆ.
‘ಹೇಳುವುದು ಒಂದು, ಮಾಡುವುದು ಮತ್ತೊಂದು’ ಎಂಬ ಮಾತನ್ನು ಕಾಂಗ್ರೆಸ್ ಚಾಲ್ತಿಯಲ್ಲಿಟ್ಟಿದೆ! ಚುನಾವಣೆಯ ಮುನ್ನ ‘ಎಲ್ಲಾ ಪದವೀಧರರಿಗೆ’ ₹ 3000 ಎಂದು ಬೊಬ್ಬಿರಿದು, ಇದೀಗ ತನ್ನ ಬಣ್ಣ ಬದಲಿಸಿದೆ!” ಎಂದು ಸರಣಿ ಟ್ವೀಟ್ ಮಾಡಿದೆ.
ಜುಲೈ 01 ರಿಂದ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡು ದಾರರಿಗೆ ತಲಾ 10 ಕೆಜಿ ಅಕ್ಕಿ(ಆಹಾರ ಧಾನ್ಯ) ಕೊಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಈಗ ನಮ್ಮಲ್ಲಿ ಎಲ್ಲರಿಗೂ 10 ಕೆಜಿ ಅಕ್ಕಿ ಕೊಡುವಷ್ಟು ದಾಸ್ತಾನು ಇಲ್ಲ ಎಂದು ಹೇಳಿದ್ದರು.