ಬೆಂಗಳೂರು:ಗೋವಾದಲ್ಲಿ ನಮ್ಮ ಸರಕಾರ ಬಂದರೆ ಮಹದಾಯಿ ವಿಚಾರವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳುವುದಕ್ಕೆ ಪ್ರಯತ್ನ ನಡೆಸುತ್ತೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಇದನ್ನೂ ಓದಿ:ಹಿಜಾಬ್-ಕೇಸರಿ ಶಾಲು ವಿವಾದ ನಡುವೆ ನೀಲಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು!
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೋವಾದಲ್ಲಿ ನಮ್ಮ ಸರಕಾರ ಬಂದರೆ ಖಂಡಿತ ಈ ಬಗ್ಗೆ ಮಾತುಕತೆ ಪ್ರಾರಂಭಿಸುತ್ತೇವೆ. ಕುಡಿಯುವ ನೀರಿಗಾಗಿ ಕಳಸಾ ಬಂಡೂರಿ ಆರಂಭಿಸಿದ್ದೆವೆಂದು ಮನವರಿಕೆ ಮಾಡುತ್ತೇವೆ. ಮಹದಾಯಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ನಮ್ಮ ನಿಲುವೇನೆಂಬುದು ನಮಗೆ ಗೊತ್ತಿದೆ ಎಂದರು.
ನಾವು ಯಾರ ಟೀಕೆ ಬಗ್ಗೆಯೂ ಮಾತನಾಡಲು ಹೋಗಲ್ಲ. ಗೋವಾದಲ್ಲಿ ನಮ್ಮ ಪ್ರಣಾಳಿಕೆ ಬಿಡುಗಡೆ ಮಾಡಿದ್ದೇವೆ.ಗೋವಾದಲ್ಲಿ ಹಿಂದೆಯೇ ನಾವು ಸರ್ಕಾರ ರಚನೆ ಮಾಡಬೇಕಿತ್ತು. ಆದ್ರೆ ಹಣದ ಬಲದಿಂದ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಐದು ವರ್ಷದಲ್ಲಿ ಜನ ಬೇಸರವಾಗಿದ್ದಾರೆ.ಗೋವಾ ರಾಜ್ಯದಲ್ಲಿ ನಿರುದ್ಯೋಗ ಸೇರಿದಂತೆ ಅನೇಕೆ ಸಮಸ್ಯೆಗಳಿವೆ. ಹೆಣ್ಣು ಮಕ್ಕಳ ಸಮಸ್ಯೆಗಳು ಇವೆ ಎಂದರು.
ದಿನೇಶ್ ಗುಂಡೂರಾವ್ ಅಲ್ಲಿನ ಉಸ್ತುವಾರಿಯಾಗಿದ್ದಾರೆ.ನಾಳೆ ಸಿದ್ದರಾಮಯ್ಯನವ್ರು ಹೋಗ್ತಾರೆ. ಜನರ ಬೆಂಬಲ ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಗೆ ಇದೆ.27 30 ಸ್ಥಾನಗಳನ್ನ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಹಿಜಾಬ್ ಹಾಗೂ ಕೇಸರಿ ಸಾಲು ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಇದು. ಶಾಲಾ ಕಾಲೇಜುಗಳಲ್ಲಿ ಹೋಗಿ ಈ ರೀತಿ ಮಾಡಬಾರದು. ನಮ್ಮ ವೋಟಿಗಾಗಿ ನಮ್ಮ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಬಾರದು. ಈ ರೀತಿ ಮಾಡುವುದು ಸರಿಯಲ್ಲ ನಾವು ಶಿಕ್ಷಣ ಸಂಸ್ಥೆ ನಡೆಸುತ್ತೇನೆ. ನಮ್ಮ ರಾಜಕೀಯ ಶಾಲಾ ಕಾಲೇಜುಗಳಲ್ಲಿ ಇರಬಾರದು ಎಂದರು.