Advertisement

Congress Government; ದಲಿತರಿಗೆ ಮೀಸಲಿಟ್ಟ ಅನುದಾನ ನುಂಗಿದ ಸಿದ್ದು ಸರ್ಕಾರ: ಜಿಗಜಿಣಗಿ

10:49 PM Jul 09, 2024 | Esha Prasanna |

ವಿಜಯಪುರ: ರಾಜ್ಯದ ಸಿದ್ದರಾಮಯ್ಯ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ದಲಿತರ ಹಣ ನುಂಗಿ ಕುಳಿತಿದೆ. ಈ ಬಗ್ಗೆ ಸಚಿವ ಮಹಾದೇವಪ್ಪ ಪ್ರತಿಭಟನೆ ನಡೆಸಬೇಕಿತ್ತು ಎಂದು ಬಿಜೆಪಿ ಹಿರಿಯ ಸಂಸದ ರಮೇಶ್‌ ಜಿಗಜಿಣಗಿ ಹೇಳಿದ್ದಾರೆ.

Advertisement

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಲಿತರ ಅಭಿವೃದ್ಧಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡಿರುವುದು ಖಂಡನೀಯ. ಎಸ್ಸಿ ಸಮುದಾಯದ 32 ಕೋಟಿ, ಎಸ್ಟಿ ಸಮುದಾಯದ 13-14 ಕೋಟಿ ಹಣವನ್ನು ಸರ್ಕಾರ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಹಿಂದೆಂದೂ ಯಾವ ಸರ್ಕಾರಗಳೂ ದಲಿತರ ಹಣವನ್ನು ಇತರೆ ಕೆಲಸಕ್ಕೆ ಪಡೆದಿರಲಿಲ್ಲ. ನಿಮಗೇನು ಧಾಡಿಯಾಗಿದೆ, ನಿಮಗೆ ದಲಿತರ ಹಣವೇ ಬೇಕಿತ್ತಾ? ಬೇರೆ ಬೇರೆ ಇಲಾಖೆಯಲ್ಲಿ ಸಾಕಷ್ಟು ಹಣವಿದ್ದು, ಅದನ್ನೇಕೆ ಮುಟ್ಟಲಿಲ್ಲ ಎಂದು ಪ್ರಶ್ನಿಸಿದರು.

ಈಗ ಎಸ್ಸಿ-ಎಸ್ಟಿ ಸಮುದಾಯಕ್ಕೆ ನೀಡಿರುವ ಅನುದಾನವನ್ನು ಸರ್ಕಾರ ಅನ್ಯ ಕೆಲಸಕ್ಕೆ ಬಳಸಿಕೊಂಡು ಅನ್ಯಾಯ ಮಾಡಿದ್ದಕ್ಕೆ ಸಚಿವ ಮಹಾದೇಪ್ಪ ಆಕ್ಷೇಪಿಸಬೇಕಿತ್ತು. ಪ್ರತಿಭಟನೆ ನಡೆಸಬೇಕಿತ್ತು ಎಂದು ಆಗ್ರಹಿಸಿದರು. ವಾಲ್ಮೀಕಿ ನಿಗಮದಲ್ಲಿ ನಡೆದಂತೆ ಈವರೆಗೂ ದೇಶದಲ್ಲಿ ಇಂತಹ ಹಗರಣ ನಡೆದಿರಲಿಲ್ಲ. ಪ್ರತಿ ವರ್ಷ ಸಂಸದನಾಗಿ ನನಗೂ ಬರುತ್ತಿದ್ದ ವಾರ್ಷಿಕ ಐದು ಕೋಟಿ ರೂ. ಎಸ್ಸಿಪಿ ಅನುದಾನ ಬಂದಿಲ್ಲ ಎಂದು ಆರೋಪಿಸಿದರು.

ಶಿವಮೊಗ್ಗದಲ್ಲಿ ಎಐಸಿಸಿ ಅಧ್ಯಕ್ಷ ಖರ್ಗೆಗೆ 60 ಎಕರೆ ಜಮೀನು: ಜಿಗಜಿಣಗಿ ಬಾಂಬ್‌
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಿವಮೊಗ್ಗದಲ್ಲಿ 60 ಎಕರೆ ಜಮೀನು ಹಂಚಿಕೆಯಾಗಿದೆ. ಕೋರ್ಟ್‌ನಲ್ಲಿ ಅಡ್ವರ್ಸ್‌ ಆಗಿರುವ ಮಾಹಿತಿ ಇದೆ ಎಂದು ಬಿಜೆಪಿ ಹಿರಿಯ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಖರ್ಗೆ ಅವರಿಗೆ 60 ಎಕರೆ ಜಮೀನು ಹಂಚಿಕೆ ಆಗಿರುವ ಆರೋಪದ ಬಗ್ಗೆ ನಮ್ಮ ಪಕ್ಷದ ಶಿವಮೊಗ್ಗ ನಾಯಕರು ದಾಖಲೆ ಸಂಗ್ರಹಿಸಿ ಮಾತನಾಡಲಿದ್ದಾರೆ ಎಂದರು.
ಕಾಂಗ್ರೆಸ್‌ನ ಭ್ರಷ್ಟಾಚಾರದ ಚಾಳಿ ಸಿದ್ದರಾಮಯ್ಯ ಸರ್ಕಾರದಲ್ಲೂ ಮುಂದುವರಿದಿದೆ. ಸರ್ಕಾರ ಅ ಧಿಕಾರಕ್ಕೆ ಬಂದು ವರ್ಷವಾದರೂ ಒಂದೂ ಅಭಿವೃದ್ಧಿ ಕೆಲಸ ಆಗಿಲ್ಲ. ಈ ಸರ್ಕಾರದಲ್ಲಿ ವಾಲ್ಮೀಕಿ ನಿಗಮ ಹಾಗೂ ಮುಡಾ ಮಾತ್ರವಲ್ಲ, ಇನ್ನೂ ಎಷ್ಟೆಷ್ಟು ಹಗರಣ ನಡೆದಿದೆ ಎಂದು ಬಿಚ್ಚಿಡಲಾ ಎಂದ ಅವರು, ಸಮಯ ಬಂದಾಗ ಎಲ್ಲವನ್ನೂ ಹೇಳುವೆ ಎಂದು ತಿಳಿಸಿದರು.

Advertisement

ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಒಂದೂ ಭ್ರಷ್ಟಾಚಾರ ನಡೆದಿಲ್ಲ. ಆದರೆ ಕಾಂಗ್ರೆಸ್‌ ಸರ್ಕಾರದಲ್ಲಿ ಸಾಲು ಸಾಲು ಹಗರಣ ನಡೆಯುತ್ತಿದೆ. ಈ ಹಿಂದೆ 60-65 ವರ್ಷ ಆಡಳಿತ ನಡೆಸಿದಾಗಲೂ ಹಗರಣಗಳನ್ನೇ ಮಾಡಿದೆ. ಭ್ರಷ್ಟಾಚಾರ ಕಾಂಗ್ರೆಸ್‌ ಹುಟ್ಟು ಗುಣ ಎಂದು ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next