ಹಿರೇಕೆರೂರು: ಕಾಂಗ್ರೆಸ್‌ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಬಿಜೆಪಿ ತಂಡ ಸರಕಾರವನ್ನು ಹೈಜಾಕ್ ಮಾಡುತ್ತಿದೆ ಎಂದು ಡಿಕೆಶಿ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಆದರೆ ಕಾಂಗ್ರೆಸ್ ಸರಕಾರ ತನ್ನಿಂದ ತಾನೇ ಬೀಳುವುದು ಖಚಿತ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ಸರಕಾರವನ್ನು ಹೈಜಾಕ್ ಮಾಡುವುದಿಲ್ಲ. ಕಾಂಗ್ರೆಸ್‌ನವರ ಭ್ರಷ್ಟಾಚಾರ, ಕರಾಳ ಮುಖಗಳು ಬಯಲಾಗಬೇಕು. ಇವರನ್ನು ದಾರಿಯಲ್ಲಿ ಜನರು ಹೊಡೆದು ಓಡಿಸುವ ಕೆಲಸ ಆಗಬೇಕು. ಡಿಕೆಶಿ ಬೆಳಗಾವಿಗೆ ಹೋದರೆ ಯಾವ ಶಾಸಕರೂ ಅಲ್ಲಿಗೆ ಹೋಗಿಲ್ಲ. ಕಾಂಗ್ರೆಸ್‌ನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬಸವರಾಜ ರಾಯರಡ್ಡಿ, ಬಿ.ಕೆ.ಹರಿಪ್ರಸಾದ್ ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಆದ್ದರಿಂದ ಸರಕಾರ ಯಾವಾಗ ಬೇಕಾದರೂ ಬಿದ್ದು ಹೋಗಬಹುದು ಎಂದರು.
ಟೋಪಿ ಹಾಕಿಕೊಂಡು ನಮಾಜ್ ಮಾಡಲೂ ಕಾಂಗ್ರೆಸ್‌ನವರು ಸಿದ್ಧರಿದ್ದಾರೆ. ಆದರೆ ಅರಿಶಿನ, ಕುಂಕುಮ ಬಳಕೆ ಮಾಡಬಾರದು ಎನ್ನುವ ಕೀಳು ಮಟ್ಟಕ್ಕೆ ಕಾಂಗ್ರೆಸ್ ನಾಯಕರು ಇಳಿದಿದ್ದಾರೆ ಎಂದು ಪಾಟೀಲ್ ಹೇಳಿದರು.
ರಾಜ್ಯದ ಭ್ರಷ್ಟ ಸರಕಾರ ನಮಗೆ ಬೇಕಾಗಿಲ್ಲ. ನಾವು ನೇರವಾಗಿ ಹೇಳುತ್ತೇವೆ. ಕಾಂಗ್ರೆಸ್ ಸರಕಾರವನ್ನು ಬೀಳಿಸಿ ಬಿಜೆಪಿ ಅಧಿ ಕಾರಕ್ಕೆ ಬರುವುದು ಖಚಿತ .ಡಿಸಿಎಂ ಬೆಳಗಾವಿಗೆ ಹೋದರೆ ಒಬ್ಬ ಶಾಸಕನೂ ಇಲ್ಲ ಎಂದರೆ ಎಂಥ ಸಂದೇಶ ಹೋಗುತ್ತದೆ. ಕಾಂಗ್ರೆಸ್ ಸರಕಾರ ಬೇಡ ಎಂದು ಅವರ ಶಾಸಕರೇ ತೀರ್ಮಾನ ಮಾಡಿದಂತಿದೆ. ರಾಜ್ಯದ ಜನರು ಕಾಂಗ್ರೆಸ್ ಸರಕಾರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲವರು ಸರಕಾರದ ವಿರುದ್ಧ ತಿರುಗಿ ಬಿದ್ದಿರುವುದು ನಿಜ. ರಾಜ್ಯ ಕಾಂಗ್ರೆಸ್ ಸರಕಾರ ಹಿಂದೂ ವಿರೋ ಧಿಯಾಗಿದೆ.
-ಕೆ.ಎಸ್. ಈಶ್ವರಪ್ಪ , ಮಾಜಿ ಡಿಸಿಎಂ