Advertisement

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

03:34 AM Sep 22, 2024 | Team Udayavani |

ಹಾಸನ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ ಸರಕಾರ ಅಭಿವೃದ್ಧಿಯನ್ನು ಮರೆತು ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ವಿಧಾನಸಭೆ ವಿಪಕ್ಷದ ನಾಯಕ ಆರ್‌. ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ಬಿಜೆಪಿ ಸದಸ್ಯತ್ವ ನೋಂದಣಿ ಅಭಿಯಾನ ಸಂಬಂಧ ಹಾಸನಕ್ಕೆ ಆಗಮಿಸಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ರಾಜ್ಯವನ್ನು ಉದ್ಧಾರ ಮಾಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಅಭಿವೃದ್ಧಿಯನ್ನೇ ಮರೆತು ದ್ವೇಷದ ರಾಜಕಾರಣಕ್ಕೆ ಸೀಮಿತವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧದ ಡಿನೋಟಿಫಿಕೇಶನ್‌ ವಿಚಾರ 15 ವರ್ಷ ಹಳೆಯದು.

ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಕಾಂಗ್ರೆಸ್‌ ಜತೆ ಹೊಂದಾಣಿಕೆ ಮಾಡಿ ಕೊಂಡು ಮುಖ್ಯಮಂತ್ರಿ ಆಗಿದ್ದರು. ಈಗ ಆರೋಪ ಮಾಡುತ್ತಿರುವವರೆಲ್ಲಾ ಆಗ ಕುಮಾರಸ್ವಾಮಿಯ ಪಕ್ಕ ಕುಳಿತಿದ್ದರು. ಆಗ ಏಕೆ ಪ್ರಶ್ನೆ ಮಾಡಲಿಲ್ಲ ? ಆಗ ಪ್ರೀತಿ ಇತ್ತು. ಈಗದ್ವೇಷ ಇದೆ. ಹಾಗಾಗಿ ಪ್ರಶ್ನೆ ಮಾಡುತ್ತಿದ್ದಾರೆ, ಇದನ್ನು ಬಿಟ್ಟು ಕಾಂಗ್ರೆಸ್‌ನವರಿಗೆ ರಾಜ್ಯದ ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲ ಎಂದು ವಾಗ್ಧಾಳಿ ನಡೆಸಿದರು.

ಬಿಜೆಪಿ ಮುಖಂಡರ ಮೇಲೆ ಕೇಸು ಕಾಂಗ್ರೆಸ್‌ಗೆ ಮುಂದೆ ಇದುವೇ ತಿರುಗು ಬಾಣ ಆಗಲಿದೆ. ವಿಪಕ್ಷದ ನಾಯಕನಾದ ನನ್ನ ಮೇಲೆ ಕೇಸ್‌ ಹಾಕಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಸವರಾಜ ಪಾಟೀಲ್‌ ಯತ್ನಾಳ್‌ ಮೇಲೂ ಕೇಸ್‌ ಹಾಕಿದ್ದಾರೆ. ಅಕ್ರಮಗಳ ತನಿಖೆ ಮಾಡಿ ಅಂತ ಹೇಳುವ ಹಕ್ಕು ವಿಪಕ್ಷದ ನಾಯಕನಿಗೆ ಇಲ್ಲವೇ? ನಮ್ಮ ಮೇಲೆ ಸುಮೋಟೋ ಕೇಸ್‌ ದಾಖಲಿಸಿದ್ದಾರೆಂದು ಟೀಕಿಸಿದರು.

ಪೊಲೀಸ್‌ ಠಾಣೆಗಳೇ ಕಾಂಗ್ರೆಸ್‌ ಪಕ್ಷದ ಕಚೇರಿ
ಪೊಲೀಸ್‌ ಠಾಣೆಗಳು ಕಾಂಗ್ರೆಸ್‌ ಕಚೇರಿಗಳಾಗಿ ಕೆಲಸ ಮಾಡುತ್ತಿವೆ. ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು, ಕಾಂಗ್ರೆಸ್‌ನವರು ಖಜಾನೆ ದರೋಡೆ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಸರಕಾರ ಬಂದರೆ ಕೋಮುವಾದಿ ಮುಸಲ್ಮಾನರಿಗೆ ಹಬ್ಬ ಇದ್ದ ಹಾಗೆ. ನಮ್ಮದೇ ಸರಕಾರ ಇದೆ ಎನ್ನುತ್ತಾರೆ, ಯಾವುದೇ ರಸ್ತೆಯಲ್ಲೂ ಗಣೇಶನ ಮೆರವಣಿಗೆ ಮಾಡುವಂತಿಲ್ಲ. ಇಡೀ ರಾಜ್ಯದಲ್ಲಿ ಗಣೇಶ ಹಬ್ಬದ ತುರ್ತು ಪರಿಸ್ಥಿತಿ ಇದ್ದಂತಿದೆ. ಹಿಂದಿನಿಂದಲೂ ಗಣೇಶನನ್ನು ಎಲ್ಲಿ, ಎಷ್ಟು ದಿನ ಪ್ರತಿಷ್ಠಾಪಿಸಬೇಕೆಂದು ಗಣೇಶೋತ್ಸವ ಸಮಿತಿ ತೀರ್ಮಾನ ಮಾಡುತ್ತಿದ್ದರು ಆದರೆ ಈಗ ಪೊಲೀಸರು ತೀರ್ಮಾನ ಮಾಡ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next