Advertisement

Congress Government: ವಿಪಕ್ಷ ನಾಯಕರಾದ ಅಶೋಕ್‌, ಛಲವಾದಿಗೆ ಕಾಂಗ್ರೆಸ್‌ ಪಂಚ ಪ್ರಶ್ನೆ

01:42 AM Oct 14, 2024 | Team Udayavani |

ಬೆಂಗಳೂರು: ತಮ್ಮ ವೈಫ‌ಲ್ಯಗಳನ್ನು ಮುಚ್ಚಿಕೊಳ್ಳಲು ವಿಪಕ್ಷ ನಾಯಕ ಆರ್‌. ಅಶೋಕ್‌ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಆಡಳಿತ ಪಕ್ಷ ಕಾಂಗ್ರೆಸ್‌ ನಾಯಕರ ಮೇಲೆ ನಿರಂತರವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೆಪಿಸಿಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಅಧ್ಯಕ್ಷ ರಮೇಶ್‌ ಬಾಬು, ಉಭಯ ನಾಯಕರಿಗೆ ತಲಾ ಪಂಚ ಪ್ರಶ್ನೆಗಳಿಗೆ ಸಾರ್ವಜನಿಕವಾಗಿ ಉತ್ತರಿಸುವಂತೆ ಸವಾಲು ಹಾಕಿದ್ದಾರೆ.

Advertisement

ಅಶೋಕ್‌ಗೆ 5 ಸವಾಲುಗಳು
1.ಬಿಡಿಎಗೆ ಸೇರಿದ ಜಮೀನನ್ನು ಅಕ್ರಮವಾಗಿ ಪಡೆದು, ಅನಂತರ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳಲು ವಾಪಸ್‌ ದಾನ ಮಾಡಿದ್ದು ಸುಳ್ಳಾ?

2. ಉತ್ತರಹಳ್ಳಿಯ ಬಿ.ಎಂ. ಕಾವಲ್‌ ಗ್ರಾಮಕ್ಕೆ ಸೇರಿದ 2,500 ಎಕರೆ ಪ್ರದೇಶವನ್ನು ಕಾನೂನುಬಾಹಿರವಾಗಿ ಹಂಚಿಕೆ ಮಾಡಿದ ಪ್ರಕರಣದ ನ್ಯಾಯಾಂಗ ತನಿಖೆಗೆ ಸಿದ್ಧವೇ?

3. ಚುನಾವಣೆ ಸಂದರ್ಭ ಪ್ರಮಾಣ ಪತ್ರದಲ್ಲಿ ತಾವೇ ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿರುವ ಪ್ರಕರಣ ಮುಚ್ಚಿಟ್ಟಿದ್ದು ಯಾಕೆ? ಇದರ ವಿರುದ್ಧ ಕಾನೂನಾತ್ಮಕ ಪ್ರಕ್ರಿಯೆಗೆ ತಯಾರಿದ್ದೀರಾ?

4. ತಾವು ಕಂದಾಯ ಸಚಿವರಾಗಿ ದೊಡ್ಡಬಳ್ಳಾಪುರ ತಾಲೂಕಿನ ಕಂದಾಯ ಭೂಮಿ ಸೇರಿದಂತೆ ನೂರಾರು ಕೋಟಿ ಸರಕಾರಿ ಆಸ್ತಿಯನ್ನು ಅಕ್ರಮವಾಗಿ ಕೆಲವು ಸಂಘ-ಸಂಸ್ಥೆಗಳಿಗೆ ಹಂಚಿಕೆ ಮಾಡಿರುವುದನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಲು ಸಿದ್ಧವೇ?

Advertisement

5. ಕಾನೂನುಬಾಹಿರವಾಗಿ ತಮ್ಮ ಒಡೆತನಕ್ಕೆ ಸೇರಿದ ಶಿಕ್ಷಣ ಸಂಸ್ಥೆಗೆ ಸರಕಾರದ ಆಸ್ತಿಯ ತನಿಖೆಗೊಳಪಡಿಸಲು ತಯಾರಿದ್ದೀರಾ?

ಛಲವಾದಿಗೆ ಪಂಚ ಪ್ರಶ್ನೆಗಳು
1. ರಾಜಕೀಯ ಪ್ರವೇಶ ಪಡೆದ ನಂತರದಿಂದ ಇದುವರೆಗೆ ಎಷ್ಟು ವಸತಿ ನಿವೇಶನ, ಕೈಗಾರಿಕೆ ನಿವೇಶನ ಮತ್ತು ಸಿಎ ನಿವೇಶನ ಪಡೆದಿದ್ದೀರಿ?

2. ಕೇಂದ್ರ ರೈಲ್ವೇ ಇಲಾಖೆಯ ಗ್ರಾಹಕ ಮಂಡಳಿಯ ಅಧ್ಯಕ್ಷ ಸ್ಥಾನ ಮತ್ತು ರಾಜ್ಯ ಅರಣ್ಯ ಇಲಾಖೆಯಲ್ಲಿ ನಿಗಮದ ಅಧ್ಯಕ್ಷ ಸ್ಥಾನ ಪಡೆದಿದ್ದು ಯಾರಿಂದ?

3. ಗೃಹ ಮಂಡಳಿ ನಿರ್ದೇಶಕರಾಗಿ ನಿಯಮಬಾಹಿರವಾಗಿ ನೀವೇ ನಾಗರಿಕ ನಿವೇಶನ ಪಡೆದಿರುವುದು ಸುಳ್ಳಾ?

4.  ತಾವು ಪಡೆದ ಸಿಎ ನಿವೇಶನದಲ್ಲಿ ಬಿರಿಯಾನಿ ಸೆಂಟರ್‌ ನಡೆಸುತ್ತಿರುವುದು ಸುಳ್ಳಾ? ಇದರ ತನಿಖೆಗೆ ಸರಕಾರಕ್ಕೆ ಪತ್ರ ಬರೆಯುತ್ತೀರಾ?

5. ತಾವು ಜೀವರಾಜ್‌ ಆಳ್ವ, ಎಸ್‌. ಬಂಗಾರಪ್ಪ, ಮಲ್ಲಿಕಾರ್ಜುನ ಖರ್ಗೆ ಆಶ್ರಯದಲ್ಲಿ ಬೆಳೆದದ್ದು ಸುಳ್ಳಾ?

Advertisement

Udayavani is now on Telegram. Click here to join our channel and stay updated with the latest news.

Next