ಬೆಂಗಳೂರು: ಸ್ವತಂತ್ರ ಭಾರತದ 75ನೇ ವರ್ಷದ ಪ್ರಯುಕ್ತ ಕರ್ನಾಟಕ ಕಾಂಗ್ರೆಸ್ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಫ್ರೀಡಂ ಮಾರ್ಚ್ ನೇರ ಪ್ರಸಾರವನ್ನು ಪಕ್ಷ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಒಂದು ಲಕ್ಷ ಜನ, ಒಂದು ಲಕ್ಷ ರಾಷ್ಟ್ರಧ್ವಜಗಳೊಂದಿಗೆ ಕಾಂಗ್ರೆಸ್ ಬೃಹತ್ ನಡಿಗೆ ಶುರುವಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅದರ ನೇತೃತ್ವವನ್ನು ವಹಿಸಿಕೊಂಡಿದ್ದು, ರಾಷ್ಟ್ರ ಧ್ವಜ ಹಿಡಿದು ಸಾಗುತ್ತಿದ್ದಾರೆ. ಇದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಲಿದ್ದು, ನಂತರ ಕೆ.ಆರ್ ವೃತ್ತ, ಟೌನ್ ಹಾಲ್, ಮಿನರ್ವ ವೃತ್ತದ ಮೂಲಕ ಸಾಗಿ ನ್ಯಾಷನಲ್ ಕಾಲೇಜಿನಲ್ಲಿ ಸಮಾಪ್ತಿಗೊಳ್ಳಲಿದೆ.
Related Articles
– ಕರ್ನಾಟಕ ಕಾಂಗ್ರೆಸ್ (@inckarnataka) 15 Aug 2022
‘ಜನ ಸಾಗರವೇ ಹರಿದು ಬರುತ್ತಿದೆ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಗೆ. ಡೊಳ್ಳು ಕುಣಿತ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ನೃತ್ಯಗಳ ಸಂಭ್ರಮ ಶುರುವಾಗಿದ್ದು ನಮ್ಮ ಐತಿಹಾಸಿಕ ಸ್ವಾತಂತ್ರ್ಯ ನಡಿಗೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಹೊಸ ಇತಿಹಾಸ ಸೃಷ್ಟಿಯಾಗಲಿದೆ’ ಪಕ್ಷ ಕೂ ಮಾಡಿದೆ.