Advertisement

ಲೋಕ ತಯಾರಿಗೆ ಕೈ ತಂಡ

06:00 AM Aug 26, 2018 | Team Udayavani |

ಹೊಸದಿಲ್ಲಿ: 2019ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇದಕ್ಕಾಗಿ ಕೋರ್‌ ಗ್ರೂಪ್‌ ಕಮಿಟಿ ರಚನೆ ಮಾಡಿದ್ದಾರೆ. ಇದರಲ್ಲಿ ರಾಜ್ಯದಿಂದ ಮಲ್ಲಿಕಾರ್ಜುನ ಖರ್ಗೆ ಅವರಷ್ಟೇ ಸ್ಥಾನ ಪಡೆದಿದ್ದಾರೆ. ಪ್ರಣಾಳಿಕೆ ಸಮಿತಿಯಲ್ಲಿ ರಾಜ್ಯದ ರಾಜೀವ್‌ ಗೌಡ, ಪ್ರಚಾರ ಸಮಿತಿಯಲ್ಲಿ ರಮ್ಯಾಗೆ ಸ್ಥಾನ ಸಿಕ್ಕಿದೆ.

Advertisement

ವಿಶೇಷವೆಂದರೆ ಯುವಕರಿಗೆ ಮಣೆ ಹಾಕಬೇಕು ಎಂದು ಹೇಳುತ್ತಲೇ ಬಂದಿದ್ದ ರಾಹುಲ್‌, ಸೋನಿಯಾ ಗಾಂಧಿ ಅವರ ಹಳೇ ತಂಡದ ಮೊರೆ ಹೋಗಿದ್ದಾರೆ. ಸೋನಿಯಾ ನಂಬಿಕಸ್ಥ ವಲಯದಲ್ಲಿದ್ದ ಎ.ಕೆ. ಆ್ಯಂಟನಿ, ಅಶೋಕ್‌ ಗೆಹೊಟ್‌, ಗುಲಾಂ ನಬಿ ಆಜಾದ್‌, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್‌ ಪಟೇಲ್‌ ಮತ್ತು ಜೈರಾಮ್‌ ರಮೇಶ್‌ ಅವರೇ ಕೋರ್‌ ಗ್ರೂಪ್‌ನಲ್ಲಿದ್ದಾರೆ. ಒಟ್ಟು ಮೂರು ತಂಡಗಳನ್ನು ರಚಿಸಲಾಗಿದ್ದು, ರಾಹುಲ್‌ ಆಪ್ತರಾದ ರಣದೀಪ್‌ ಸುರ್ಜೆವಾಲ ಮತ್ತು ಕೆ.ಸಿ. ವೇಣುಗೋಪಾಲ್‌ಗೆ ಸ್ಥಾನ ದಕ್ಕಿದೆ. ಚಿದಂಬರಂ ಮತ್ತು ಜೈರಾಮ್‌ ರಮೇಶ್‌ ಎರಡು ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ರಣದೀಪ್‌ ಸುರ್ಜೆವಾಲ ಕೋರ್‌ ಗ್ರೂಪ್‌ ಮತ್ತು ಪ್ರಚಾರ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.

ಒಂಬತ್ತು ಮಂದಿ ಸದಸ್ಯರುಳ್ಳ ಕೋರ್‌ ಗ್ರೂಪ್‌ ಕಮಿಟಿ, 19 ಸದಸ್ಯರ ಪ್ರಣಾಳಿಕೆ ಸಮಿತಿ ಮತ್ತು 13 ಸದಸ್ಯರ ಪ್ರಚಾರ ಸಮಿತಿ ರಚಿಸಲಾಗಿದೆ. ಇವು ಈಗಿನಿಂದಲೇ ಲೋಕಸಭೆ ಚುನಾವಣೆಗೆ ಬೇಕಾದ ಕೆಲಸ ಆರಂಭಿಸಲಿವೆ ಎಂದು ಪ್ರಧಾನ ಕಾರ್ಯದರ್ಶಿ ಅಶೋಕ್‌ ಗೆಹೊÉàಟ್‌ ಹೇಳಿದ್ದಾರೆ. 

ಕೋರ್‌ ಗ್ರೂಪ್‌ ಕಮಿಟಿ
ಎ.ಕೆ. ಆ್ಯಂಟನಿ, ಗುಲಾಂ ನಬಿ ಆಜಾದ್‌, ಚಿದಂಬರಂ, ಅಶೋಕ್‌ ಗೆಹೊÉàಟ್‌, ಮಲ್ಲಿಕಾರ್ಜುನ ಖರ್ಗೆ, ಅಹ್ಮದ್‌ ಪಟೇಲ್‌, ಜೈರಾಂ ರಮೇಶ್‌, ರಣದೀಪ್‌ ಸುರ್ಜೆವಾಲ ಮತ್ತು ಕೆ.ಸಿ. ವೇಣುಗೋಪಾಲ್‌.

ಪ್ರಣಾಳಿಕೆ ಸಮಿತಿ
ಮನ್‌ಪ್ರೀತ್‌ ಬಾದಲ್‌, ಚಿದಂಬರಂ, ಸುಶ್ಮಿತಾ ದೇವ್‌, ರಾಜೀವ್‌ ಗೌಡ, ಭೂಪೇಂದ್ರ ಸಿಂಗ್‌ ಹೂಡಾ, ಜೈರಾಂ ರಮೇಶ್‌, ಸಲ್ಮಾನ್‌ ಖುರ್ಷಿದ್‌, ಬಿಂದು ಕೃಷ್ಣನ್‌, ಕುಮಾರಿ ಸೆಲ್ಜಾ, ರಘುವೀರ್‌ ಮೀನಾ, ಪ್ರೊ| ಬಾಲಚಂದ್ರ ಮುಂಗೇಕರ್‌, ಮೀನಾಕ್ಷಿ ನಟರಾಜನ್‌, ರಜನಿ ಪಟೇಲ್‌, ಸ್ಯಾಮ್‌ ಪಿತ್ರೋಡಾ, ಸಚಿನ್‌ ರಾವ್‌, ತಾಮರದ್ವಜ್‌ ಸಾಹು, ಮುಕುಲ್‌ ಸಂಗ್ಮಾ, ಶಶಿ ತರೂರ್‌, ಲಲಿತೇಶ್‌ ತ್ರಿಪಾಠಿ.

Advertisement

ಪ್ರಚಾರ ಸಮಿತಿ
ಚರಣ್‌ ದಾಸ್‌ ಭಕ್ತ, ಪ್ರವೀಣ್‌ ಚಕ್ರವರ್ತಿ, ಮಿಲಿಂದ್‌ ದಿಯೋರಾ, ಕುಮಾರ್‌ ಕೇತ್ಕರ್‌, ಪವನ್‌ ಖೇರಾ, ವಿ.ಡಿ. ಸತೀಶನ್‌, ಆನಂದ್‌ ಶರ್ಮಾ, ಜಜ್ವಿàರ್‌ ಶಾರ್ಗಿಲ್‌, ರಾಜೀವ್‌ ಶುಕ್ಲಾ, ರಮ್ಯಾ, ರಣದೀಪ್‌ ಸುಜೇìವಾಲ, ಮನೀಶ್‌ ತಿವಾರಿ, ಪ್ರಮೋದ್‌ ತಿವಾರಿ.

ಕೋರ್‌ಟೀಂಗೆ ಖರ್ಗೆ: ಸಿದ್ದುಗಿಲ್ಲ ಸ್ಥಾನ
ಲೋಕಸಭೆ ಚುನಾವಣೆಗೆ ಈಗಿನಿಂದಲೇ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿರುವ ಕಾಂಗ್ರೆಸ್‌ನ ವಿವಿಧ ಸಮಿತಿಗಳಲ್ಲಿ ಅವಕಾಶ ಪಡೆಯಲು ಕಾದು ಕುಳಿತಿದ್ದ ರಾಜ್ಯದ ಹಲವು ನಾಯಕರಿಗೆ ನಿರಾಶೆಯಾಗಿದೆ. ಚುನಾವಣಾ ಕಾರ್ಯತಂತ್ರ ರೂಪಿಸುವ ಕೋರ್‌ ಕಮಿಟಿಯ ಒಂಬತ್ತು ಜನರ ತಂಡದಲ್ಲಿ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೈರಾಂ ರಮೇಶ್‌ ಮಾತ್ರ ಸ್ಥಾನ ಪಡೆದಿದ್ದಾರೆ. ಸಿದ್ದರಾಮಯ್ಯ ಸೇರಿದಂತೆ ವೀರಪ್ಪ ಮೊಲಿ, ಕೆ.ಎಚ್‌. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್‌ ಅವರನ್ನು ಹೊರಗಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.

ಸಿದ್ದರಾಮಯ್ಯ ಅವರನ್ನು ಹೊರಗಿಟ್ಟಿರುವುದು ಬೆಂಬಲಿಗರ ಬೇಸರಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರಾಗಿ ನೇಮಿಸಿದಾಗ ಲೋಕಸಭೆ ಚುನಾವಣೆಯಲ್ಲಿ ಅವರನ್ನು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳಲು ರಾಹುಲ್‌ ಬಯಸಿದ್ದಾರೆ ಎನ್ನಲಾಗಿತ್ತು.
ಈ ಮಧ್ಯೆ ಲೋಕಸಭೆ ಚುನಾವಣೆಯ ಪ್ರಚಾರ ಸಮಿತಿ, ಅಭ್ಯರ್ಥಿಗಳ ಆಯ್ಕೆ ಸಮಿತಿ ನೇಮಕ ಮಾಡುವ ಸಂದರ್ಭದಲ್ಲಿ ರಾಜ್ಯದ ನಾಯಕರಿಗೆ ಅವಕಾಶ ದೊರೆಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next