Advertisement

ಕಾಂಗ್ರೆಸ್‌ನ ಸ್ವಾತಂತ್ರ್ಯ ಹೋರಾಟ: ಅಂದಿನ ಮತ್ತು ಇಂದಿನ ಮಾದರಿ

09:10 AM Mar 08, 2017 | |

ಅಭಿವ್ಯಕ್ತಿ ಸ್ವಾತಂತ್ರ್ಯ, ವಾಕ್‌ ಸ್ವಾತಂತ್ರ್ಯಗಳ ಮುಸುಕಿನಡಿ ರಾಷ್ಟ್ರವಿರೋಧಿ ಮತ್ತು ರಾಷ್ಟ್ರವಿಭಜನಕಾರಿ ನಿಲುವುಗಳು ಎಗ್ಗಿಲ್ಲದೆ ಪ್ರಕಟಗೊಳ್ಳುತ್ತಿರುವುದು ತೀರ ಕಳವಳಕಾರಿ ವಿಚಾರ. ಪ್ರಾಯಃ ಇಂತಹ “ಸ್ವಾತಂತ್ರ್ಯ’ ಇರುವ ದೇಶ ಭಾರತವೊಂದೇ! ನಮ್ಮ ಎಲ್ಲ ರಾಜಕೀಯ ಪಕ್ಷಗಳೂ ಈಗ ದೇಶದ ಏಕತೆಗೆ ಮುಳುವಾಗಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಏಕಾಭಿಪ್ರಾಯವೊಂದನ್ನು ರೂಪಿಸಿಕೊಂಡು ಕಾರ್ಯಾಚರಿಸಬೇಕಾಗಿದೆ.

Advertisement

ಕಾಂಗ್ರೆಸ್‌ ಪಕ್ಷ ದೇಶದ ಸ್ವಾತಂತ್ರ್ಯ ಆಂದೋಲನಕ್ಕಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದ ಕಾಲವೊಂದಿತ್ತು. ಬ್ರಿಟಿಷರಿಂದ ಸ್ವಾತಂತ್ರ್ಯ ದೊರಕಿಸಿಕೊಳ್ಳಬೇಕೆಂಬ ಕಾಂಗ್ರೆಸ್‌ ಧುರೀಣರ ಕರೆಗೆ ಆ ತಲೆಮಾರಿನ ವಿದ್ಯಾರ್ಥಿಗಳು ತುಂಬುಹೃದಯದಿಂದ ಪ್ರತಿಕ್ರಿಯಿಸಿದ್ದರು; ಸ್ವಾತಂತ್ರ್ಯ ಚಳವಳಿಯ ವಿವಿಧ ಹಂತಗಳಲ್ಲಿ ಹೃತೂ³ರ್ವಕವಾಗಿ ಪಾಲ್ಗೊಂಡಿದ್ದರು.

ಒಂದು ರೀತಿಯಲ್ಲಿ ಕಾಂಗ್ರೆಸ್‌ ತನ್ನ ಪಥಕ್ರಮಣ ವೃತ್ತವನ್ನು ಇಂದು ಪೂರ್ಣಗೊಳಿಸಿದಂತಾಗಿದೆ! ಕಾರಣ, ಕಾಶ್ಮೀರಕ್ಕೆ ಹಾಗೆಯೇ ಛತ್ತೀಸ್‌ಗಢದ ಬಸ್ತರ್‌ ಜಿಲ್ಲೆಗೆ ಭಾರತೀಯರಿಂದಲೇ ಮುಕ್ತಿ ದೊರೆಯಬೇಕೆಂಬ ಆಗ್ರಹದೊಂದಿಗೆ ಹೋರಾಟ ನಡೆಸುಧಿತ್ತಿರುವ ದಿಲ್ಲಿಯ ವಿದ್ಯಾರ್ಥಿಗಳನ್ನು ಕಾಂಗ್ರೆಸ್‌ ಪಕ್ಷವೀಗ ಅದರ ಉಪಾಧ್ಯಕ್ಷ ರಾಹುಲ್‌ ಗಾಂಧಿಯವರ ಮುಂದಾಳ್ತನದಲ್ಲಿ ಹುರಿದುಂಬಿಸುತ್ತಿದೆ, ಅವರ ಹೋರಾಟಕ್ಕೆ ಬೆಂಬಲ ಪ್ರಕಟಿಸುತ್ತಿದೆ.

ಸದ್ಯದ ಮಟ್ಟಿಗೆ ಹೇಳುವುದಾದರೆ ಈ ಪಕ್ಷ ಬಹುತೇಕ ರಾಜ್ಯಗಳ ಚುನಾವಣೆಯಲ್ಲಿ ಸೋತು ಸುಣ್ಣವಾಗಿರುವ ಒಂದು ಹತಾಶ ಪಕ್ಷವಾಗಿದೆ. ಇದೇ ಕಾರಣಕ್ಕೆ ಅದರ ನಾಯಕರು ದಿಲ್ಲಿಯ ರಾಮ್‌ಜಸ್‌ ಕಾಲೇಜಿನಂಥ ಕೆಲ ಕಾಲೇಜುಗಳಲ್ಲಿ ವಿಜೃಂಭಿಸುತ್ತಿರುವ “ವಿದ್ಯಾರ್ಥಿ ರಾಜಕೀಯ’ದ ಬಗ್ಗೆ ಅನಗತ್ಯ ಆಸಕ್ತಿ ತೋರಿಸುತ್ತಿದ್ದಾರೆ. ಒಂದು ಕಾಲದಲ್ಲಿ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಈ ಪಕ್ಷ ಇಂದು ದೇಶದ ಅವಿಭಾಜ್ಯ ಅಂಗಗಳನ್ನು ಏನಕೇನ ಪ್ರಕಾರೇಣ ಛೇದಿಸಬೇಕೆಂದು ಆಗ್ರಹಿಸುತ್ತಿರುವ ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದೆ.

ಅದೃಷ್ಟವಶಾತ್‌, ಭಾರತೀಯ ಒಕ್ಕೂಟದಿಂದ ಪ್ರತ್ಯೇಕಧಿಗೊಳ್ಳಬೇಕೆಂಬ ಕೂಗು ಉತ್ತರ ಪ್ರದೇಶದಲ್ಲೆಲ್ಲೂ ಕೇಳಿಬಂದಿಲ್ಲ. ಆದರೆ ನಾವೀಗ ಕೇಳಬೇಕಾದ ತಾರ್ಕಿಕ ಪ್ರಶ್ನೆಯೊಂದಿದೆ – ಇನ್ನೊಂದು ಬಹುಮುಖ್ಯ ರಾಜ್ಯವಾದ ಪಂಜಾಬಿನಲ್ಲಿ ಒಂದು ವೇಳೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ಪ್ರತ್ಯೇಕ ಖಾಲಿಸ್ತಾನ್‌ ಬೇಕೆಂಬ ಆಗ್ರಹಕ್ಕೆ ಅದು ಬೆಂಬಲ ನೀಡುತ್ತದೆಯೇ? ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸುತ್ತಿದ್ದ ಖಾಲಿಸ್ತಾನಿ ಹೋರಾಟಗಾರರನ್ನು ಮಟ್ಟ ಹಾಕಿದ್ದು, 1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಸಿಕ್ಖ್ ಉಗ್ರರನ್ನು ತೆರವುಗೊಳಿಸಲು ಮಂದಿರದೊಳಕ್ಕೆ ಸೇನೆ ಕಳುಹಿಸಿದ್ದು ಇಂದಿರಾಗಾಂಧಿ ಎಂಬುದನ್ನು ಕಾಂಗ್ರೆಸ್‌ ಪಕ್ಷ ಮರೆತುಬಿಟ್ಟಿತೆ?

Advertisement

ಬಸ್ತಾರ್‌ನ ಕೊನೆಯ ರಾಜನ ಅಂತ್ಯ

ದೇಶದ ಬಹುದೊಡ್ಡ ಜಿಲ್ಲೆಯಾದ ಬಸ್ತರ್‌ಗೆ ಪ್ರತ್ಯೇಕ ಅಸ್ತಿತ್ವ ದೊರೆಯಬೇಕೆಂಬ ಘೋಷಣೆ ಮೊಳಗಿಸುತ್ತಿರುವ ಕೆಲ ವಿದ್ಯಾರ್ಥಿಗಳಿಗೆ ಕಾಂಗ್ರೆಸ್‌ ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ಇಂದಿನ ಕಾಂಗ್ರೆಸ್‌ ನಾಯಕರು ದೇಶದ ಚರಿತ್ರೆಯನ್ನು ಓದಿಕೊಂಡಿಲ್ಲವೆನ್ನುವುದು ಮೇಲ್ನೋಟಕ್ಕೇ ಸ್ಪಷ್ಟವಾಗುತ್ತದೆ. ಬಸ್ತರ್‌ ಆದಿವಾಸಿಗಳ ಜನಪ್ರಿಯ ನಾಯಕನಾಗಿದ್ದ ರಾಜಾ ಪ್ರವೀರಚಂದ್ರ ಭಂಜ್‌ದೇವ್‌ (1927-66) ಅವರ ಹತ್ಯೆಗೆ ಕಾರಣವಾದದ್ದು ಅವಿಭಜಿತ ಮಧ್ಯಪ್ರದೇಶದ ಕಾಂಗ್ರೆಸ್‌ ಸರಕಾರ. ಕಾಕತೀಯ ರಾಜವಂಶದ ಭಂಜ್‌ದೇವ್‌ ಮತ್ತಿತರ ಹಲವರು ಜಗ್‌ದಾಲ್‌ಪುರದ ಅರಮನೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದರು (1066). ಭಂಜ್‌ದೇವ್‌ ಅವರು ಬಸ್ತರ್‌ನ ಆದಿವಾಸಿಗಳು ತಮ್ಮ ಹಕ್ಕಿಗಾಗಿ ನಡೆಸಿದ ಹೋರಾಟವನ್ನು ಬೆಂಬಲಿಸುತ್ತಿದ್ದವರು. ತಮ್ಮ ಪ್ರಜೆಗಳ ಕಲ್ಯಾಣಕ್ಕಾಗಿ ಹೋರಾಡಿದವರು. ತಮ್ಮ ಆಡಳಿತ ಪ್ರದೇಶದ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ನೈಸರ್ಗಿಕ ಸಂಪನ್ಮೂಲಗಳ ಶೋಷಣೆ, ಭೂ ಸುಧಾರಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರವನ್ನು ತೀವ್ರವಾಗಿ ಪ್ರಶ್ನಿಸಿದರು. ಇಂದು ಬಸ್ತರ್‌ ಬುಡಕಟ್ಟಿನ ಬಹುತೇಕರು ನಕ್ಸಲೀಯರ ಪ್ರಭಾವಕ್ಕೆ ಒಳಗಾಗಿದ್ದಾರೆ. ಬಸ್ತರ್‌ ಆದಿವಾಸಿ ಹೋರಾಟಗಾರರು ಸರಕಾರದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡಿರುವುದಕ್ಕೆ ಕಾರಣ ಕಾಂಗ್ರೆಸ್‌ ಪಕ್ಷವೇ. ಈ ಪ್ರಮಾದದ ಹೊಣೆಯಿಂದ ಅದು ನುಣುಚಿಕೊಳ್ಳುವಂತಿಲ್ಲ.

ಕಮ್ಯುನಿಸ್ಟ್‌ ದೇಶದ ಪ್ರತಿಭಟನಕಾರರ ಪಾಡು 
ರಾಮ್‌ಜಸ್‌ ಕಾಲೇಜಿನಲ್ಲಿ ಹಾಗೂ ದಿಲ್ಲಿಯ ಇತರೆಡೆಗಳಲ್ಲಿ “ಆಜಾದಿ’ ಕೂಗು ಮೊಳಗಿಸುತ್ತಿರುವ ವಿದ್ಯಾರ್ಥಿಗಳನ್ನು ಸೀತಾರಾಂ ಯಚೂರಿಯಂಥ ಸಿಪಿಐಎಂ ನಾಯಕರು ಬೆಂಬಲಿಸುತ್ತಿದ್ದಾರೆ. ಸಿಪಿಐಎಂ ಹಾಗೂ ಸಿಪಿಐ ಕೇರಳ ಹಾಗೂ ತ್ರಿಪುರಗಳಲ್ಲಿ ಇಂದು ಅಧಿಕಾರದಲ್ಲಿವೆಯಾದರೂ “ಅಸ್ತಿತ್ವದ ಪ್ರಶ್ನೆ’ಯನ್ನು ಎದುರಿಸುತ್ತಿವೆ; ಒಟ್ಟಾರೆಯಾಗಿ ರಾಷ್ಟ್ರದ ರಾಜಕಾರಣದಲ್ಲಿ ಅಪ್ರಸ್ತುತವೆನಿಸಿವೆ.

ಕಾಂಗ್ರೆಸ್‌, ಕಮ್ಯುನಿಸ್ಟ್‌ ಹಾಗೂ ಕೆಲ ವಾಮಪಂಥೀಯ ಒಲವಿನ ಪ್ರೊಫೆಸರುಗಳು ಮತ್ತು ವಿದ್ಯಾರ್ಥಿಗಳು ರಾಮ್‌ಜಸ್‌ ಕಾಲೇಜಿನಲ್ಲಿ ನಡೆದಿರುವ ವಿದ್ಯಮಾನಗಳನ್ನು ವಾಕ್‌ ಸ್ವಾತಂತ್ರ್ಯದ ದಮನ ಹಾಗೂ ರಾಷ್ಟ್ರವಿರೋಧಿ ಘಟನೆಗಳನ್ನಾಗಿ ಪರಿವರ್ತಿಸಲು ಪ್ರಯತ್ನಿಸಿದ್ದಾರೆ. ಕಾರಣ, ಕೇಂದ್ರದಲ್ಲಿರುವುದು ಎನ್‌ಡಿಎ ಸರಕಾರ. ದಿಲ್ಲಿ ಕಾಲೇಜಿನಲ್ಲಿ ಸಂಭವಿಸಿರುವ ಘಟನೆಗಳನ್ನು ಈ ಮಂದಿ ಭೂತಗನ್ನಡಿಯಲ್ಲಿ ತೋರಿಸಲು ಹೊರಟಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ ಭಾರತ ವಿರೋಧಿ ಹಾಗೂ ಕಾಶ್ಮೀರ – ಬಸ್ತರ್‌ ಸ್ವಾತಂತ್ರ್ಯಪರ ಘೋಷಣೆಗಳನ್ನು ಕೂಗಿದ ಯಾರನ್ನೂ ಬಂಧಿಸಲಾಗಿಲ್ಲ. ಭೂತಪೂರ್ವ ಸೋವಿಯತ್‌ ಒಕ್ಕೂಟದಲ್ಲಿ, ಅಷ್ಟೇಕೆ ಇಂದಿನ ಚೀನದಲ್ಲಿ ವಿರೋಧಾಭಿಪ್ರಾಯ ವ್ಯಕ್ತಪಡಿಸಿದವರ ಗತಿ ಏನಾಯಿತು ಎಂಬ ಪ್ರಶ್ನೆಯನ್ನು ಕಮ್ಯುನಿಸ್ಟರಿಗೆ ಹಾಕಬೇಕಾಗಿದೆ. ಭಾರತದಲ್ಲೇ ಈ ಪಕ್ಷಗಳಲ್ಲಿ ಆಂತರಿಕ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದವರನ್ನು ಇವುಗಳ ನಾಯಧಿಕರು ನಡೆಸಿಕೊಂಡಿರುವುದು ಹೇಗೆ ಎಂಬ ಪ್ರಶ್ನೆಯನ್ನೂ ಕೇಳಬೇಕಾಗಿದೆ. 

70ರ ದಶಕದಲ್ಲಿ ದೇಶದ ಮೇಲೆ ಹೇರಲಾಗಿದ್ದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪತ್ರಿಕಾ ಸೆನ್ಸಾರ್‌ಶಿಪ್‌ ಹೇರಿದ್ದ ಕಾಂಗ್ರೆಸ್‌ ಪಕ್ಷ ಇಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಮಾತಾಧಿಡುತ್ತಿದೆ. ವಾಕ್‌ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಮೂಲಭೂತ ಹಕ್ಕಿಗೆ ಸಂಬಂಧಿಸಿದಂತೆ, ಭಾರತ ವಿರೋಧಿ ಬೊಬ್ಬೆ ಹಾಗೂ “ಆಜಾದಿ’ ಪರ ಘೋಷಣೆಗಳನ್ನು ಮೊಳಗಿಸುತ್ತಿರುವವರಿಗೆ ವಿನಾಯಿತಿ ಇದೆಯೆಂದು ಕಾಂಗ್ರೆಸ್‌ ಈಗ ಪ್ರತಿಪಾದಿಸಲು ಹೊರಟಿದೆಯೆ? ಇಂಥ ರಾಷ್ಟ್ರಪ್ರೇಮ ರಹಿತ ನಡವಳಿಕೆಗೆ ವಿಶ್ವದ ಯಾವುದೇ ನಾಗರಿಕ ರಾಷ್ಟ್ರವೂ ಆಸ್ಪದ ನೀಡಲಾರದು. ಕಾಂಗ್ರೆಸ್‌ ಪಕ್ಷ ತಾನು ಅಧಿಕಾರದಲ್ಲಿದ್ದ ಕಾಲಾವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬಿನಲ್ಲಿ ಸರಕಾರದ ವಿರುದ್ಧ ಶಸ್ತ್ರ ಸಮರದಲ್ಲಿ ನಿರತರಾಗಿದ್ದ ಭಯೋತ್ಪಾದಕರನ್ನು ವರ್ಷಗಟ್ಟಲೆ ದಮನಿಸುತ್ತಲೇ ಸಾಗಿತ್ತು.

ಈಗ ವಿದ್ಯಾರ್ಥಿಗಳ ಗಲಭೆಯ ಅಂಗಣವಾಗಿ ಮಾರ್ಪಟ್ಟಿರುವ ದಿಲ್ಲಿಯ ರಾಮ್‌ಜಸ್‌ ಕಾಲೇಜಿನಲ್ಲಿ ಹಿಂಸಾತ್ಮಕ ಘಟನೆಗಳು ನಡೆದಿರುವುದು ಫೆ.21ರಂದು. ಜವಾಹರಲಾಲ್‌ ನೆಹರೂ ವಿವಿಯ ವಿದ್ಯಾರ್ಥಿನಾಯಕರಾದ ಉಮರ್‌ ಖಾಲಿದ್‌ ಹಾಗೂ ಶೆಹ್ಲಾ ರಶೀದ್‌ ಇವರನ್ನು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿಸಬೇಕೆಂದು ಆಹ್ವಾನಿಸಿದ್ದನ್ನು ವಿರೋಧಿಸಿ ಎಬಿವಿಪಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಹಿಂಸೆಗೆ ತಿರುಗಿತ್ತು. ಅಫ‌jಲ್‌ ಗುರುವಿಗೆ ಗಲ್ಲುಶಿಕ್ಷೆ ವಿಧಿಸಲಾದ ಸರಕಾರದ ಕ್ರಮವನ್ನು “ನೆನಪಿಸಿಕೊಳ್ಳಲು’ ಕಳೆದ ವರ್ಷ ಜವಾಹರಲಾಲ್‌ ನೆಹರೂ ವಿವಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಮೇಲೆ ಹೇಳಿದ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದರೆಂಬುದು ಎಬಿವಿಪಿ ವಿದ್ಯಾರ್ಥಿಗಳ ಪ್ರತಿಭಟನೆಗೆ ಮುಖ್ಯ ಕಾರಣ. ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ದಾಖಲಾಗಿದ್ದ “ಸರಕಾರ ವಿರೋಧಿ ಪ್ರತಿಭಟನೆ’ಗೆ ಸಂಬಂಧಿಧಿಸಿದ ಪ್ರಕರಣಗಳನ್ನು ವಿರೋಧಿಸುವುದು ಕೂಡ ಕಳೆದ ವರ್ಷದ (ಜೆಎನ್‌ಯು) ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಾಮಪಂಥೀಯ ಒಲವಿನ ವಿದ್ಯಾರ್ಥಿಗಳ ಉದ್ದೇಶಗಳಲ್ಲಿ ಒಂದಾಗಿತ್ತು.

ಇಂಗ್ಲಿಷ್‌ ಚಾನೆಲ್‌ ಮಾತಿನ ಮೋಡಿ
ಇನ್ನು ನಮ್ಮ ಇಂಗ್ಲಿಷ್‌ ಟಿವಿ ಚಾನೆಲ್‌ಗ‌ಳಲ್ಲಿ ನರೇಂದ್ರ ಮೋದಿಯವರನ್ನು ಗುರಿಯಾಗಿಸಿಕೊಂಡಿರುವ ಅಪಪ್ರಚಾರ ಅಭಿಯಾನ ಯಾವೆಲ್ಲ ತೆರನ ವಾಗ್ವೆ„ಭವದೊಂದಿಗೆ ನಡೆಧಿಯುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿ ಚಾನೆಲ್‌ ಒಂದರ ನಿರೂಪಕರೊಬ್ಬರು ಎಗ್ಗಿಲ್ಲದೆ ಹರಿಬಿಟ್ಟ ವಾಕ್‌ ಪ್ರವಾಹವನ್ನು ಗಮನಿಸಬಹುದು. 

ಉತ್ತರ ಪ್ರದೇಶದಲ್ಲಿ ಮೋದಿಯವರ ಚುನಾವಣಾ ಪ್ರಚಾರದಲ್ಲಿ ಬನಾರಸ್‌ ಹಿಂದೂ ವಿವಿ ಕುಲಪತಿ ಪ್ರೊ| ಗಿರೀಶ್‌ ತ್ರಿಪಾಠಿ ಪಾಲ್ಗೊಂಡಿರುವುದಾಗಿ ಈ ನಿರೂಪಕ ಹಿಂದೆ ಮುಂದೆ ನೋಡದೆ ಹೇಳಿಯೇ ಬಿಟ್ಟರು. ತೀವ್ರ ಪ್ರತಿಭಟನೆ ವ್ಯಕ್ತವಾದಾಗ ತಪ್ಪೊಪ್ಪಿಕೊಂಡು ಕ್ಷಮೆಧಿಯಾಚಿಸಿದ ನಿರೂಪಕ, “ಇದು ಯಾರೋ ಎಂದು ಯಾರನ್ನೋ ತಿಳಿದುಕೊಂಡು ಆಗಿರುವ ಪ್ರಮಾದ’ ಎಂದು ವಿವರಣೆ ಕೊಟ್ಟರು. “ರಾಷ್ಟ್ರೀಯ ಮಟ್ಟದವು’ ಎಂದು ಹೇಳಿಕೊಳ್ಳುತ್ತಿರುವ ಸುದ್ದಿವಾಹಿನಿಗಳು, ಅವುಗಳ ಆ್ಯಂಕರ್‌ಗಳು ಹಾಗೂ ವರದಿಗಾರರ ವಿಶ್ವಾಸಾರ್ಹತೆಯ ಮಟ್ಟವನ್ನು ತೋರಿಸಿಕೊಡುವ ಕಾರ್ಯಶೈಲಿ ಇದು.

ಕೊನೆಗೂ ಹೇಳಲೇಬೇಕಾದ ಮುಖ್ಯ ಮಾತೊಂದಿದೆ. ನಮ್ಮ ಎಲ್ಲ ರಾಜಕೀಯ ಪಕ್ಷಗಳೂ ಈಗ ಒಂದು ವಿಷಯದಲ್ಲಿ ಒಟ್ಟಾಗಬೇಕು; ಕಾಶ್ಮೀರ ಸಮಸ್ಯೆ, ಉಗ್ರವಾದಿಗಳ ಸಮಸ್ಯೆ ಹಾಗೂ ನಕ್ಸಲೀಯ ಸಮಸ್ಯೆಗಳಂಥ ದೇಶದ ಏಕತೆಗೆ ಮುಳುವಾಗಿರುವ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅವು ಏಕಾಭಿಪ್ರಾಯವೊಂದನ್ನು ರೂಪಿಸಿಕೊಂಡು ಕಾರ್ಯಾಚರಿಸಬೇಕಾಗಿದೆ. 

ಅರಕೆರೆ ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next