Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ ಯಾವ ದುಸ್ಥಿತಿ ಗೆ ಕಾಂಗ್ರೆಸ್ ಬಂದು ತಲುಪಿದೆ,ಪಕ್ಷದಲ್ಲಿ ಒಮ್ಮತ ಎಷ್ಟಿದೆ ,ಅತೃಪ್ತಿ ಅಸಮಾಧಾನ ಎಷ್ಟಿದೆ ಎನ್ನುವುದಕ್ಕೆ ಈ ಸಭೆ ಸಾಕ್ಷಿಯಾಗಿದೆ ಎಂದರು.
Related Articles
Advertisement
ನಮಗಿರುವ ಚಿಂತೆ ಬೇರೇನು ಅಲ್ಲ ಈ ಮೈತ್ರಿ ಸರ್ಕಾರ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡುತ್ತಿಲ್ಲ. ಸಚಿವರು ಪ್ರವಾಸ ಮಾಡುತ್ತಿಲ್ಲ. ಬರ ವಿಪರೀತವಾಗಿದೆ, ಜನರು ವಲಸೆ ಹೋಗುತ್ತಿದ್ದಾರೆ. ಉದ್ಯೋಗಳು ಸಿಗುತ್ತಿಲ್ಲ , ಇನ್ನಾದರೂ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಿ ಎಂದರು.
ತಡವಾಗಿ ಆರಂಭವಾದ ಸಿಎಲ್‌ಪಿ ಸಭೆ; ನಾಲ್ವರು ಗೈರು 3.30 ಕ್ಕೆ ನಿಗದಿಯಾದ ಶಾಸಕಾಂಗ ಪಕ್ಷದ ಸಭೆ ತಡವಾಗಿ ಅಂದರೆ 5.30 ಕ್ಕೆ ಆರಂಭವಾಗಿದೆ. ಸಭೆಗೆ ನಾಲ್ವರು ಬಂಡಾಯ ಶಾಸಕರು ಗೈರಾಗಿದ್ದಾರೆ. ಚಿಂಚೋಳಿ ಶಾಸಕ ಡಾ.ಉಮೇಶ್ ಯಾದವ್, ಅಥಣಿಯ ಮಹೇಶ್ ಕಮಟಳ್ಳಿ , ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಗೋಕಾಕ್‌ನ ರಮೇಶ್ ಜಾರಕಿಹೊಳಿ ಅವರು ಗೈರಾಗಿದ್ದಾರೆ. ಬಿ.ಸಿ.ಪಾಟೀಲ್ ಹಾಜರು, ತುರ್ತು ನಿರ್ಗಮನ
ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿದ್ದ ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವರು ಸಭೆಗೆ ಆಗಮಿಸಿ ತುರ್ತಾಗಿ ನಿರ್ಗಮಿಸಿದರು. ಮಗಳ ಮದುವೆ ಇದೆ ಸಿದ್ದರಾಮಯ್ಯ ಅವರಿಗೆ ತಿಳಿಸಿ ಸಭೆಯಿಂದ ತೆರಳುತ್ತಿದ್ದೇನೆ.ನನಗೆ ಬಿಜೆಪಿಯ ಯಾರೂ ಸಂಪರ್ಕ ಮಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.