Advertisement
ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಮಾತನಾಡಿ, ದೇಶದಲ್ಲಿ ಅಭದ್ರತೆ ಮತ್ತು ಆತಂಕದ ವಾತಾವರಣವಿದೆ ಎಂದಿದ್ದಾರೆ. 1961ರ ಬಳಿಕ ಗುಜರಾತ್‌ನಲ್ಲಿ ಮೊದಲ ಬಾರಿಗೆ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ವಾದ್ರಾ ಭಾಗವಹಿಸಿದ್ದು ಪ್ರಧಾನ ಅಂಶ. ಆರ್‌ಎಸ್‌ಎಸ್ ಮತ್ತು ಬಿಜೆಪಿ ತತ್ವ ಗಳನ್ನು ಸೋಲಿಸಲು ಯಾವುದೇ ದೊಡ್ಡ ಮಟ್ಟದ ತ್ಯಾಗ ಅಗತ್ಯವಿಲ್ಲ. ಅದು ದ್ವೇಷ, ಕೋಪ ಮತ್ತು ಸಮಾಜದ ವಿವಿಧ ವರ್ಗಗಳ ನಡುವೆ ಕಂದಕ ಸೃಷ್ಟಿಸುವ ನಿಲುವುಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. ಅದನ್ನು ಸೋಲಿಸುವುದೇ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ. ಮಹಾತ್ಮಾ ಗಾಂಧೀಜಿ ದಂಡಿಯಾತ್ರೆ ಕೈಗೊಂಡು 89 ವರ್ಷ ಪೂರ್ತಿಗೊಳಿಸಿದ ಬೆನ್ನಲ್ಲೇ ಇಂಥ ನಿರ್ಧಾರ ಕೈಗೊಂಡಿದ್ದೇವೆ ಎಂದರು.
Related Articles
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ಚುನಾವಣ ರ್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ ವಾದ್ರಾ, ಪ್ರಧಾನಿ ನರೇಂದ್ರ ಮೋದಿ ಈಡೇರಿಸಲಾಗದ ಭರವಸೆಗಳನ್ನು ನೀಡಿದ್ದಾರೆ ಎಂದು ಟೀಕಿಸಿದರು. ದೇಶದಲ್ಲಿ ದ್ವೇಷವನ್ನು ಹರಡಲಾಗುತ್ತಿದೆ. ವಿವಿಧ ಸಾಂಸ್ಥಿಕ ಸಂಸ್ಥೆಗಳನ್ನು ದುರ್ಬಲ ಮತ್ತು ನಾಶಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ನಿಮ್ಮ ಮತವೇ ಆಯುಧ. ಅದನ್ನು ಯೋಚಿಸಿ ಬಳಕೆ ಮಾಡಿ ಎಂದು ಸೂಚ್ಯವಾಗಿ ಹೇಳಿದರು ಪ್ರಿಯಾಂಕಾ ವಾದ್ರಾ. ಜಾಗೃತ ಪ್ರಜೆಗಿಂತ ದೊಡ್ಡ ದೇಶಭಕ್ತನಿಲ್ಲ ಎಂದು ಹೇಳಿದ ಸೋನಿಯಾ ಪುತ್ರಿ, ನಾನು ನನ್ನ ಹೃದಯದಿಂದಲೇ ಮಾತನಾಡುತ್ತಿದ್ದೇನೆ ಎಂದರು. ನಾನು ಮತ್ತು ನೀವೆಲ್ಲರೂ ದೇಶಕ್ಕಾಗಿ ದುಡಿಯೋಣ ಮತ್ತು ಮುಂದಕ್ಕೆ ಸಾಗೋಣ ಎಂದರು. 2 ಕೋಟಿ ಉದ್ಯೋಗ ನೀಡಿಕೆ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವ ವಾಗ್ಧಾನಗಳೇನಾದವು ಎಂದು ಪ್ರಿಯಾಂಕಾ ಅವರು ಕಟುವಾಗಿ ಪ್ರಶ್ನಿಸಿದರು.
Advertisement
ರಾಷ್ಟ್ರೀಯ ಭದ್ರತೆ ವಿಚಾರ ದುರುಪಯೋಗರಾಷ್ಟ್ರೀಯ ಭದ್ರತೆ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿ ದುರುಪಯೋಗ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಅದನ್ನು ಗುರಾಣಿಯಂತೆ ಬಳಕೆ ಮಾಡುತ್ತಿದ್ದಾರೆ ಎಂದು ಸಿಡಬುÉ éಸಿ ಸಭೆಯ ನಿರ್ಣಯದಲ್ಲಿ ದೂರಲಾಗಿದೆ. ಬಿಜೆಪಿ ನೇತೃತ್ವದ ಸರಕಾರದ ವಿರುದ್ಧ ಹೋರಾಟ ನಡೆಸಲು ಮತ್ತು ಅದರ ವೈಫಲ್ಯಗಳನ್ನು ಬಯಲಿಗೆ ಎಳೆಯಲು ಎಲ್ಲ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕು ಮತ್ತು ಅವುಗಳು ತಮ್ಮ ಸಾಮರ್ಥ್ಯವನ್ನು ಅದಕ್ಕಾಗಿ ವಿನಿಯೋಗ ಮಾಡಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ. ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಅತ್ಯಂತ ಭದ್ರವಾಗಿದೆ. ಜತೆಗೆ ಸದೃಢ ಸೇನಾ ಬಲವನ್ನೂ ಹೊಂದಿದ್ದು, ಅದಕ್ಕಾಗಿ ಹೆಮ್ಮೆ ಪಡಬೇಕಾಗಿದೆ. ಮಹಿಳೆಯರು, ಎಸ್‌ಸಿ, ಎಸ್‌ಟಿ, ಇತರ ಹಿಂದುಳಿದ ವರ್ಗದವರು, ಅಲ್ಪಸಂಖ್ಯಾಕರು, ಬರಹಗಾರರು, ಶಿಕ್ಷಣ ತಜ್ಞರ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿದೆ. ಹೀಗಾಗಿ ಅವರೆಲ್ಲರೂ ಭಯ ಮತ್ತು ಅಭದ್ರತೆಯಿಂದ ಇರುವಂತಾಗಿದೆ ಎಂದು ಸರಕಾರವನ್ನು ಟೀಕಿಸಲಾಗಿದೆ. ದೇಶದಲ್ಲಿ ಉತ್ತರದಾಯಿತ್ವ ಮತ್ತು ಉತ್ತಮ ಆಡಳಿತ ನೀಡುವ ಸರಕಾರ ಅಗತ್ಯವಾಗಿದೆ ಎಂದು ಸಮಿತಿ ಪ್ರತಿಪಾದಿಸಿದೆ. 1930ರ ಮಾ.12ರಂದು ಮಹಾತ್ಮಾ ಗಾಂಧಿ ದಂಡಿಯಾತ್ರೆ ಆರಂಭಿಸಿದ 89ನೇ ವರ್ಷಾಚರಣೆ ಪ್ರಯುಕ್ತ ಅವರಿಗೆ ಗೌರವವನ್ನೂ ಪಕ್ಷ ಸಲ್ಲಿಸಿದೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ನಾಯಕರಾದ ಆನಂದ ಶರ್ಮಾ, ಗುಲಾಂ ನಬಿ ಆಜಾದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. 58 ವರ್ಷ ಬಳಿಕ
ಗುಜರಾತ್‌ನ ಭಾವನಗರದಲ್ಲಿ 1961ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು. ಆ ಬಳಿಕ ಇದೇ ಮೊದಲ ಬಾರಿಗೆ ಪಕ್ಷದ ಸಭೆ ಅಲ್ಲಿ ನಡೆದಿದೆ. ಮಾ. 18: ಕಲಬುರಗಿಗೆ ರಾಹುಲ್ ಗಾಂಧಿ
ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾ.18ರಂದು ಕಲಬುರಗಿಗೆ ಭೇಟಿ ನೀಡಿ ಮಲ್ಲಿಕಾರ್ಜುನ ಖರ್ಗೆ ಪರ ಚುನಾವಣ ಪ್ರಚಾರ ಸಭೆಯಲ್ಲಿ ಭಾಗವಹಿಸಲಿರುವರು. ಈ ಕ್ಷೇತ್ರವನ್ನು ಜಯಿಸಲು ಬಿಜೆಪಿ ತಂತ್ರಗಾರಿಕೆ ಹೆಣೆದಿದ್ದು, ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ತಂತ್ರ ಹೂಡಿ ರಾಹುಲ್ ಅವರನ್ನು ಪ್ರಚಾರಕ್ಕೆ ಕರೆಸಿದೆ. ಸೀಟು ಹಂಚಿಕೆ: ರಾಹುಲ್ ಜತೆ ಸಿದ್ದು ಚರ್ಚೆ
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಸಿದ್ದರಾಮಯ್ಯ ಮಂಗಳವಾರ ಮಾತುಕತೆ ನಡೆಸಿದ್ದಾರೆ. ಮೈಸೂರು, ತುಮಕೂರು ಕ್ಷೇತ್ರದ ಬದಲು ಉಡುಪಿ-ಚಿಕ್ಕಮಗಳೂರು ಮತ್ತು ಉ.ಕನ್ನಡ ಕ್ಷೇತ್ರ ಬಿಟ್ಟು ಕೊಡುವ ಬಗ್ಗೆ ಜೆಡಿಎಸ್‌ನ ಮನವೊಲಿಸುವುದಾಗಿ ರಾಹುಲ್ ತಿಳಿಸಿದ್ದಾರೆ ಎನ್ನಲಾಗಿದೆ. ಮೋದಿ ಸರಕಾರದ ವಿರುದ್ಧ ಮಾಡಿರುವ ಆರೋಪಗಳೆಲ್ಲ ಸುಳ್ಳು. ಮಹಾತ್ಮಾ ಗಾಂಧಿಯವರ ನಾಡಿನಿಂದ ಕಾಂಗ್ರೆಸ್ ಸುಳ್ಳುಗಳನ್ನು ಹರಡಲು ಪ್ರಯತ್ನಿಸುತ್ತಿದೆ. ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ತಳಮಳಕ್ಕೊಳಗಾಗಿ ಮಾತನಾಡಿದ್ದಾರೆ.
ಪ್ರಕಾಶ್ ಜಾಬ್ಡೇಕರ್ ಕೇಂದ್ರ ಸಚಿವ