ಹುಬ್ಬಳ್ಳಿ: ನಾಯಕರೊಳಗಿನ ಕಲಹ ಮುಚ್ಚಿಕೊಳ್ಳಲು, ಪಕ್ಷದ ಮುಖ ಉಳಿಸಿಕೊಳ್ಳಲು ಕಾಂಗ್ರೆಸ್ ನವರು ಯಾತ್ರೆ ಆರಂಭಿಸಿದ್ದಾರೆ ಎಂದು ಸಚಿವ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2014 ರ ನಂತರದಲ್ಲಿ ಕಾಂಗ್ರೆಸ್ ಐದಾರು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದೆ, ಆ ಪಕ್ಷದ ಅನೇಕ ಶಾಸಕರು ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳಿಗೆ ಹೋಗಿದ್ದಾರೆ. ಪಕ್ಷದ ವೈಫಲ್ಯ ಮರೆಮಾಚಲು, ಆಂತರಿಕ ಕಚ್ಚಾಟ ಮುಂದುವರೆದರೂ, ನಾವೆಲ್ಲ ಒಂದಿದ್ದೇವೆಂದು ಜನರ ಮುಂದೆ ನಾಟಕ ಮಾಡಲು ಯಾತ್ರೆ ಹಮ್ಮಿಕೊಂಡಿದ್ದಾರೆ ಎಂದರು.
ಇದನ್ನೂ ಓದಿ:ಗೆದ್ದಾಗ ಜೈ ಶ್ರೀರಾಮ್ ಬದಲು ಅಲ್ಲಾಹು ಅಕ್ಬರ್ ಕೂಗಿದ್ದರೆ ಸಂಗಮೇಶ್ ಗೆ ಸಮಾಧಾನ ಆಗ್ತಿತ್ತೇ?
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಗುಂಪುಗಳ ನಡುವೆ ತಿಕ್ಕಾಟದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧೋಗತಿಯತ್ತ ಸಾಗಿದೆ ಎಂದರು.
ಭದ್ರಾವತಿಯಲ್ಲಿನ ಕಾರ್ಖಾನೆ ಸಮಸ್ಯೆ ಬಗ್ಗೆ ಸದನದಲ್ಲಿ ಒಂದು ಮಾತು ಆಡದ ಶಾಸಕ ಸಂಗಮೇಶ, ಯುವಕರ ಮೇಲೆ ಹಲ್ಲೆ ಪ್ರಕರಣದಲ್ಲಿ ದೂರು ದಾಖಲಿಸಿದ್ದಕ್ಕೆ ಸದನದಲ್ಲಿ ಅಂಗಿ ಬಿಚ್ಚುವ ಮೂಲಕ ಸದನ ಘನತೆ ಹಾಳು ಮಾಡಿದ್ದಾರೆ. ಸ್ವಾರ್ಥಕ್ಕಾಗಿ ಸದನದಲ್ಲಿ ಅಂಗಿ ಬಿಚ್ಚಿದ ಶಾಸಕನ ಪರವಾಗಿ ಕಾಂಗ್ರೆಸ್ ನಾಯಕರು ಹೋರಾಟಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ಶಾಸಕರ ವಿರುದ್ದ ದಾಖಲಾದ ದೂರು ಬಗ್ಗೆ ಕಾನೂನು ತನ್ನ ಕ್ರಮಕೈಗೊಳ್ಳುತ್ತದೆ ಎಂದರು.
ಇದನ್ನೂ ಓದಿ: ಉಪ್ಪಿನಂಗಡಿ:ಮಗುಚಿಬಿದ್ದ ಡೀಸೆಲ್ ಟ್ಯಾಂಕರ್; ಬಿಟ್ಟಿ ಡೀಸೆಲ್ ಗೆ ನೂಕುನುಗ್ಗಲು,ಲಾಠಿ ಪ್ರಹಾರ