Advertisement

ಅಲ್ಪಸಂಖ್ಯಾತರ ಏಳ್ಗೆಗೆ ಶ್ರಮಿಸಿಲ್ಲ ಕಾಂಗ್ರೆಸ್‌: ಜೆಡಿಎಸ್‌ ಆರೋಪ

06:15 PM Dec 21, 2017 | Team Udayavani |

ಮೂಡಿಗೆರೆ: ಕಳೆದ 70 ವರ್ಷದಿಂದ ದಲಿತರ ಹಾಗೂ ಅಲ್ಪಸಂಖ್ಯಾತರ ಮತ ಪಡೆಯುತ್ತಿರುವ ಕಾಂಗ್ರೆಸ್‌, ದಲಿತರ ಹಾಗೂ ಅಲ್ಪಸಂಖ್ಯಾತರ ಏಳಿಗೆಗಾಗಿ ಶ್ರಮಿಸಿಲ್ಲ ಎಂದು ಜೆಡಿಎಸ್‌ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಝಕರಿಯ್ನಾ ಜಾಕೀರ್‌ ಆರೋಪಿಸಿದರು.

Advertisement

 ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ವ ಧರ್ಮಿಯರ ಭಾವೈಕ್ಯತೆ ಕೇಂದ್ರವಾಗಿರುವ ಬಾಬಾಬುಡನ್‌ಗಿರಿಯಲ್ಲಿ ಇತ್ತೀಚೆಗೆ ದತ್ತ ಜಯಂತಿ ಸಂದರ್ಭದಲ್ಲಿ ದತ್ತ ಮಾಲಾಧಾರಿಗಳು ಗೋರಿಗಳನ್ನು ಹಾನಿಗೊಳಿಸಿದ್ದಾರೆ. ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ದೌರ್ಜನ್ಯವೆಸಗಿದ್ದಾರೆ. ಇದು ಖಂಡನೀಯ. ತಕ್ಷಣವೇ ಅವರ ವಿರುದ್ಧ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಮೊದಲಿನಿಂದಲೂ ಮುಸ್ಲಿಮರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಅನೇಕ ಬಾರಿ ಅಧಿ ಕಾರಕ್ಕೂ ತಂದಿದ್ದಾರೆ. ಆದರೆ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್‌ ಮುಸ್ಲಿಮರ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿಲ್ಲ. ಎಲ್ಲಾ 
ರಂಗದಲ್ಲೂ ಕಡೆಗಣಿಸುತ್ತಲೇ ಬಂದಿದ್ದಾರೆ. ಸರಕಾರ ಇದ್ದಾಗಲೂ ಯಾವುದೇ ಹುದ್ದೆಗಳಿಗೆ ಮುಸ್ಲಿಮರನ್ನು ನೇಮಕ ಮಾಡುತ್ತಿಲ್ಲ.ದೌರ್ಜನ್ಯಕ್ಕೊಳಗಾದಾಗ ಕಾಂಗ್ರೆಸ್‌ ನಾಯಕರು ನಮ್ಮ ಪರ ನಿಲ್ಲುತ್ತಿಲ್ಲ. ಈಗ ಮುಸ್ಲಿಮರು ಪ್ರಬುದ್ಧರಾಗಿದ್ದು, ಕಾಂಗ್ರೆಸ್‌
ಓಟ್‌ ಬ್ಯಾಂಕ್‌ಗಾಗಿ ನಾಟಕವಾಡುತ್ತಿರುವುದು ತಿಳಿದಿಲ್ಲವೆಂದುಕೊಂಡಿದ್ದಾರೆಂದು ತಿಳಿಸಿದರು.

ಜೆಡಿಎಸ್‌ ಪಕ್ಷವು ಅಲ್ಪಸಂಖ್ಯಾತರ ರಕ್ಷಣೆಗೆ ಕಟಿಬದ್ಧವಾಗಿದೆ. ಪಟ್ಟಣ ಮತ್ತು ಗ್ರಾಮೀಣ ಭಾಗದ ಅಲ್ಪಸಂಖ್ಯಾತರ ಅಭಿವೃದ್ಧಿಯತ್ತ ಹೆಚ್ಚಿನ ಕಾಳಜಿ ವಹಿಸಿರುವ ಶಾಸಕ ಬಿ.ಬಿ.ನಿಂಗಯ್ಯ ಅವರು, ಮೂಲ ಸೌಕರ್ಯ ಸೇರಿದಂತೆ ಮಸೀದಿ, ಮದರಸ ಹಾಗೂ ಚಚ್‌
ìಗಳಗೆ ಶಾಸಕರ ನಿಧಿ ಯಿಂದ 1.60 ಕೋಟಿ ಅನುದಾನ ನೀಡಿದ್ದಾರೆ. ಅಲ್ಲದೆ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಒಂದು ತಿಂಗಳಲ್ಲಿ ಸಾಚಾರ್‌ ವರದಿ ಅನುಷ್ಠಾನ ಮಾಡಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಆದ್ದರಿಂದಲೇ ಕಾಂಗ್ರೆಸ್‌ನ ಹಿರಿಯ ಮುಸ್ಲಿಂ ನಾಯಕರು ಸೇರಿದಂತೆ ಮೂಡಿಗೆರೆ ವಿಧಾನಸಭೆ ಕ್ಷೇತ್ರದ ಶೇ.75 ರಷ್ಟು ಮುಸ್ಲಿಮರು ಜೆಡಿಎಸ್‌ಗೆ ಸೇರಲಿದ್ದಾರೆ. ಸದ್ಯದಲ್ಲೇ ಶಾಸಕರು ಸಭೆಯೊಂದನ್ನು ನಡೆಸಿ ಅಲ್ಪಸಂಖ್ಯಾತರ ಸಮಾವೇಶ ಆಯೋಜಿಸಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಅಲ್ಪಸಂಖ್ಯಾತ ವಿಭಾಗದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೀಫ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಸೈಯದ್‌ ರಿಜ್ವಾನ್‌, ಗೋಣಿಬೀಡು ಹೋಬಳಿ ಅಧ್ಯಕ್ಷ ಎ.ಪಿ.ಮಹಮ್ಮದ್‌, ಬಣಕಲ್‌ ಹೋಬಳಿ ಅಧ್ಯಕ್ಷ ಅಬ್ದುಲ್‌ ಅಜೀಜ್‌ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next